ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಜಿಡಿಪಿ ಕುಸಿತ: 'ಆರ್ಥಿಕ ದುರಂತ' ಎಂದ ಪಿ. ಚಿದಂಬರಂ

|
Google Oneindia Kannada News

ನವದೆಹಲಿ, ಆಗಸ್ಟ್‌ 31: 2020-21ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇಕಡಾ 23.9 ರಷ್ಟು ಸಂಕುಚಿತಗೊಂಡಿದೆ ಎಂದು ಸುದ್ದಿ ಹೊರ ಬಿದ್ದ ಬಳಿಕ ಮಾಜಿ ಕೇಂದ್ರ ಹಣಕಾಸು ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರು ಜಿಡಿಪಿ ಸಂಖ್ಯೆಯನ್ನು "ಆರ್ಥಿಕ ದುರಂತ" ಎಂದು ಕರೆದಿದ್ದಾರೆ.

ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಸೋಮವಾರ ಬಿಡುಗಡೆ ಮಾಡಿದ ತಾತ್ಕಾಲಿಕ ಅಂದಾಜಿನ ಪ್ರಕಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯು ಶೇಕಡಾ 23.9 ರಷ್ಟು ಇಳಿಕೆಗೊಂಡಿದೆ ಎಂದು ಪ್ರಕಟಿಸಿದೆ. ಇದನ್ನು ಉಲ್ಲೇಖಿಸಿ 'ದೇಶವು ಭಾರೀ ಬೆಲೆ ತೆತ್ತಿದೆ ಎಂದು ಹೇಳಿರುವ ಚಿದಂಬರಂ ಮೋದಿ ಸರ್ಕಾರದ ವರ್ತನೆಯು ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 23.9 ರಷ್ಟು ಕುಸಿತ: 24 ವರ್ಷಗಳಲ್ಲಿ ಅತ್ಯಂತ ಕಳಪೆಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 23.9 ರಷ್ಟು ಕುಸಿತ: 24 ವರ್ಷಗಳಲ್ಲಿ ಅತ್ಯಂತ ಕಳಪೆ

"ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 23.9 ರಷ್ಟು ಕುಸಿದಿದೆ. ಅಂದರೆ, 30-6-2019ರ ವೇಳೆಗೆ ಒಟ್ಟು ದೇಶೀಯ ಉತ್ಪಾದನೆಯ ಕಾಲು ಭಾಗವನ್ನು ಕಳೆದ 12 ತಿಂಗಳುಗಳಲ್ಲಿ ಅಳಿಸಿಹಾಕಲಾಗಿದೆ. 2019-20ರ ಅಂತ್ಯದಿಂದ, ಒಟ್ಟು ದೇಶೀಯ ಉತ್ಪಾದನೆಯು ಶೇಕಡಾ 20 ರಷ್ಟು ಕುಸಿದಿದೆ, "ಎಂದು ಚಿದಂಬರಂ ಹೇಳಿದರು.

Indias 2020-21 Q1 GDP: Economic Tragedy Says P Chidambaram

ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಶೇಕಡಾ 3.4 ರಷ್ಟಿದೆ. ಆರ್ಥಿಕ ಕುಸಿತಕ್ಕೆ 'ದೇವರ ಆಟ ಎಂದು ದೂಷಿಸಿದ ಹಣಕಾಸು ಸಚಿವರು ರೈತರಿಗೆ ಮತ್ತು ರೈತರನ್ನು ಆಶೀರ್ವದಿಸಿದ ದೇವರುಗಳಿಗೆ ಕೃತಜ್ಞರಾಗಿರಬೇಕು "ಎಂದು ಅವರು ಹೇಳಿದರು.

ಜಿಡಿಪಿ ಅಂದಾಜುಗಳು "ನಮಗೆ ಆಶ್ಚರ್ಯವಾಗುವುದಿಲ್ಲ" ಎಂದು ಹೇಳಿರುವ ಕಾಂಗ್ರೆಸ್ ನಾಯಕ ''ಮೊದಲ ತ್ರೈಮಾಸಿಕದಲ್ಲಿ ಹಲವಾರು ದಿನಗಳಲ್ಲಿ ಬೆಳವಣಿಗೆ ಕಾಣುತ್ತದೆ ಎಂದು ಎದುರು ನೋಡುತ್ತಿರುವ ಸರ್ಕಾರದ ವರ್ತನೆ ಆಶ್ಚರ್ಯಕರ ಸಂಗತಿಯಾಗಿದೆ." ಎಂದು ಪಿ.ಚಿದಂಬರಂ ಹೇಳಿದ್ದಾರೆ.

2020 ರ ಮೊದಲಾರ್ಧದಲ್ಲಿ ಸಂಕೋಚನವು 'ಮಹಾ ಆರ್ಥಿಕ ಕುಸಿತ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟು (2008ರ) ಗಿಂತ ಆಳವಾದ ಮತ್ತು ಹೆಚ್ಚು ವಿನಾಶಕಾರಿಯಾಗಿದೆ' ಎಂದು ಆರ್‌ಬಿಐ ಹೇಳಿದೆ ಎಂದು ಮಾಜಿ ಹಣಕಾಸು ಸಚಿವರು ಹೇಳಿದರು.

English summary
Indian economy contracting by 23.9 Percent, former Union finance minister and senior Congress leader P Chidambaram termed the GDP numbers an “economic tragedy”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X