ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆ ಕರಾಳ ದಿನ'ವನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಜೂನ್ 26: 'ಭಾರತದಲ್ಲಿ ತುರ್ತು ಪರಿಸ್ಥಿತಿ ಒಂದು ಕರಾಳ ಅವಧಿ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

1975 ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಆ ಕರಾಳ ಅಧ್ಯಾಯಕ್ಕೆ ಜೂನ್ 25 ಕ್ಕೆ 43 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ತುರ್ತುಪರಿಸ್ಥಿತಿಯ ಸಂಕಟಗಳನ್ನು ನೆನಪಸಿಕೊಂಡ ಮೋದಿ, ಈ ನಿರ್ಧಾರದ ವಿರುದ್ಧ ಆಗಿನ ಕಾಲದಲ್ಲಿ ಹೋರಾಡಿದ್ದ ಎಲ್ಲರಿಗೂ ನಮನ ಸಲ್ಲಿಸಿದ್ದಾರೆ.

ತುರ್ತು ಪರಿಸ್ಥಿತಿಗೆ 43, ಇಂದಿರಾರನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿತುರ್ತು ಪರಿಸ್ಥಿತಿಗೆ 43, ಇಂದಿರಾರನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿ

ಭಾರತ ಎಂದಿಗೂ ತುರ್ತು ಪರಿಸ್ಥಿಯನ್ನು ಕರಾಳ ಅವಧಿಯನ್ನಾಗಿಯೇ ನೆನಪಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಜನರ ವೈಚಾರಿಕತೆಗೇ ಲಗಾಮು ಹಅಕಲಾಗಿತ್ತು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ನನ್ನ ನಮನಗಳು

"43 ವರ್ಷಗಳ ಹಿಂದೆ ಘೋಷಿಸಲಾಗಿದ್ದ ತುರ್ತು ಪರಿಸ್ಥಿಯನ್ನು ಧೈರ್ಯವಾಗಿ ವಿರೋಧಿಸಿ ಎಲ್ಲ ಮಹಿಳೆ, ಪುರುಷರಿಗೂ ನನ್ನ ನಮನಗಳು. ತುರ್ತುಪರಿಸ್ಥಿಯ ಹೋರಾಟ ಸರ್ವಾಧಿಕಾರ ಮತ್ತು ನಾಗರಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವವರ ವಿರುದ್ಧ ಜನಶಕ್ತಿಗೆ ಸಿಕ್ಕ ಗೆಲುವು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕರಾಳ ದಿನ

'ತುರ್ತುಪರಿಸ್ಥಿ ಎಂಬುದು ಭಾರತದ ಅಧ್ಯಾಯದಲ್ಲಿ ಕರಾಳ ಅವಧಿ. ಭಾರತೀಯರು ಅದನ್ನು ಎಂದಿಗೂ ಕರಾಳ ಘಳಿಗೆ ಎಂದೇ ನೆನಪಿಸಿಕೊಳ್ಳುತ್ತಾರೆ. ಈ ಸಸಂದರ್ಭದಲ್ಲಿ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳನ್ನೂ ಕೆಳಗಿಳಿಸಲಾಗಿತ್ತು. ಜನರಲ್ಲಿ ಭಯ ಸೃಷ್ಟಿಸಲಾಗಿತ್ತು. ಜನರನ್ನಷ್ಟೇ ಅಲ್ಲ, ಅವರ ವೈಚಾರಿಕತೆ, ಯೋಚನಾ ಸ್ವಾತಂತ್ರ್ಯ ಎಲ್ಲವನ್ನೂ ಬಂಧಿಸಲಾಗಿತ್ತು. ರಾಜಕೀಯ ಶಕ್ತಿಯ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗಿತ್ತು' ಎಂದು ಆ ದಿನಗಳನ್ನು ಮೋದಿ ನೆನಪಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪಾಲಿಗೆ ಇಂಡಿಯಾ ಈಸ್ ಇಂದಿರಾ: ಬಿಜೆಪಿ ವ್ಯಂಗ್ಯಕಾಂಗ್ರೆಸ್ ಪಾಲಿಗೆ ಇಂಡಿಯಾ ಈಸ್ ಇಂದಿರಾ: ಬಿಜೆಪಿ ವ್ಯಂಗ್ಯ

ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ಮುಖ್ಯ

'ನಮ್ಮ ಪ್ತರಜಾಪ್ರಭುತ್ವ ತತ್ತ್ವಗಳು ಎಂದಿಗೂ ಬಲಾಢ್ಯವಾಗಿರುವಂತೆ ನೋಡಿಕೊಳ್ಳೋಣ. ಚರ್ಚೆ ಮಾಡುವುದು, ಪ್ರಶ್ನಿಸುವುದು, ವಿವೇಚಿಸುವುದು ಇವೆಲ್ಲವೂ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿ ಬೇಕಾದ ಸಂಗತಿ. ಅದಕ್ಕಾಗಿ ನಾವು ಹೆಮ್ಮೆ ಪಡಬೇಕು. ಯಾವುದೇ ಶಕ್ತಿಯೂ ನಮ್ಮ ಸಂವಿಧಾನದ ಮೂಲಭೂತ ಸಂಗತಿಗಳನ್ನು ಹಾಳುಗೆಡಹುವುದಕ್ಕೆ ಬಿಡಬಾರದು' ಎಂದು ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಂಡು ಮೋದಿ ಕಳಕಳಿ ವ್ಯಕ್ತಪಡಿಸಿದ್ದಾರೆ.

43 ನೇ ವರ್ಷದ ನೆನಪು

43 ನೇ ವರ್ಷದ ನೆನಪು

ಜೂನ್ 25, 1975 ರಂದು ರಾಷ್ಟ್ರದಲ್ಲಿ ಆಂತರಿಕ ತುರ್ತುಪರಿಸ್ಥಿತಿ ಹೇರಲು ಮುಂದಾದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಆಗಿನ ರಾಷ್ಟ್ರಪತಿ ಫಕ್ರುದ್ದಿನ್ ಅಲಿ ಅಹ್ಮದ್ ಸುಲಭವಾಗಿ ಸಹಿ ನೀಡಿದ್ದರು. 'ದೇಶದಲ್ಲಿ ಆಂತರಿಗೆ ಶಾಂತಿ ಕದಡಲಾಗುತ್ತಿದೆ' ಎಂಬ ಸಬೂಬು ನೀಡಿ ಸಂವಿಧಾನದ 352 ನೇ ವಿಧಿಯ ಪ್ರಕಾರ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದರು ಇಂದಿರಾ ಗಾಂಧಿ. ಈ ಸಂದರ್ಭದಲ್ಲಿ ಸರ್ಕಾರವನ್ನು ಯಾರೇ ಟೀಕಿಸಿದರೂ, ಸರ್ಕಾರದ ವಿರುದ್ಧ ಯಾವುದೇ ಕೆಲಸ ಮಾಡಿದ್ದರೂ ಅವರನ್ನು ಬಂಧಿಸುವ ಅಧಿಕಾರವಿತ್ತು. ಆದ್ದರಿಂದಲೇ ಇ ಸಂದರ್ಭದಲ್ಲಿ ಲಕ್ಷಾಂತರ ಜನರು ಜೈಲುವಾಸ ಅನುಭವಿಸಿದ್ದರು. ಭಾರತದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಅವಧಿಯಾಗಿ ಈ ತುರ್ತು ಪರಿಸ್ಥಿತಿ ದಾಖಲಾಗಿದೆ.

English summary
Prime Minister Narendra Modi said the country remembers the Emergency as a 'dark period', during which every institution was subverted and an atmosphere of fear was created.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X