ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ನಮ್ಮ ಸಂಸ್ಕೃತಿ ಕಣ್ರೀ, ಟ್ರಂಪ್ ಆರೋಪಕ್ಕೆ ಭಾರತದ ತಿರುಗೇಟು

|
Google Oneindia Kannada News

ನವದೆಹಲಿ, ಜೂನ್ 6: ಪ್ಯಾರಿಸ್ ನ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತವು ಒಪ್ಪಿಕೊಂಡಿರುವುದು ದೊಡ್ಡ ಮಟ್ಟದ ಹಣಕಾಸು ನೆರವಿಗಾಗಿ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿರಾಕರಿಸಿದ್ದಾರೆ. ಟ್ರಂಪ್ ಆರೋಪದಲ್ಲಿ ಸತ್ಯವಿಲ್ಲ ಎಂದು ಹೇಳಿದ್ದಾರೆ.

ಹಣದಾಸೆಗೋಸ್ಕರ ಭಾರತವು ಈ ಒಪ್ಪಂದಕ್ಕೆ ಸೇರಿದ್ದಲ್ಲ. ಟ್ರಂಪ್ ಆರೋಪದಲ್ಲಿ ಸತ್ಯವಿಲ್ಲ. ಈ ಬಗ್ಗೆ ಪ್ರಧಾನಿ ಈಗಾಗಲೇ ಹೇಳಿದ್ದಾರೆ. ಆದರೂ ಇನ್ನೊಮ್ಮೆ ಒತ್ತಿ ಹೇಳುತ್ತಿದ್ದೇನೆ, ನಾವು ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಸಹಿ ಹಾಕಿದ್ದು ಯಾವುದೇ ದೇಶದ ಒತ್ತಡದಿಂದಲ್ಲ ಅಥವಾ ಹಣದಾಸೆಗೂ ಅಲ್ಲ. ಪರಿಸರ ರಕ್ಷಣೆ ಬಗ್ಗೆ ನಮಗಿರುವ ಬದ್ಧತೆಯಿಂದ ಎಂದು ಅವರು ಹೇಳಿದರು.[ಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾ]

Sushma Swaraj

ಅರಣ್ಯ, ನದಿ, ಬೆಟ್ಟಗಳ ಆರಾಧನೆ ಇಂದಿಗೂ ಭಾರತದಲ್ಲಿ ಮುಂದುವರಿದುಕೊಂಡು ಬಂದಿದೆ. ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ಕ್ರಮ ಕೂಡ ಭಾರತವು ಐದು ಸಾವಿರ ವರ್ಷಗಳಿಂದ ನಂಬಿ, ಆಚರಿಸಿಕೊಂಡು ಬಂದಿರುವ ತತ್ಚದ ಕಾರಣಕ್ಕೆ. ಇದು ಭಾರತದ ಸಂಸ್ಕ್ರತಿ. ಆದ್ದರಿಂದ ಆರೋಪ ನಿರಾಕರಿಸಿ, ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಲ್ಲಿ ಮುಂದುವರಿಯಲಿದ್ದೇವೆ ಎಂದು ಹೇಳಿದರು.[ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ]

ಅಮೆರಿಕ ದೇಶವು ಈ ಒಪ್ಪಂದದ ಜತೆಗೆ ಮುಂದುವರಿಯತ್ತದೋ ಬಿಡುತ್ತದೋ, ಆದರೆ ಭಾರತ ಮಾತ್ರ ಮುಂದುವರಿಯುತ್ತದೆ ಎಂದರು.

English summary
India on Monday rejected U.S. President Donald Trump’s allegation that it had joined the Paris climate agreement for a large financial incentive. External Affairs Minister Sushma Swaraj described the allegation as “unreal” and said India did not join the agreement for “financial greed.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X