ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ತಂಟೆಗೆ ಬಂದ ಟ್ರಂಪ್ ಗೆ ಭಾರತದಿಂದ ಮಹಾಮಂಗಳಾರತಿ!

|
Google Oneindia Kannada News

Recommended Video

ಕಾಶ್ಮೀರದ ತಂಟೆಗೆ ಬಂದ ಟ್ರಂಪ್ ಗೆ ಭಾರತದಿಂದ ಮಹಾಮಂಗಳಾರತಿ!

ನವದೆಹಲಿ, ಆಗಸ್ಟ್ 02: ಕಾಶ್ಮೀರದ ವಿಷಯದಲ್ಲಿ ಪದೇ ಪದೇ ಮೂಗು ತೂರಿಸುತ್ತಿರುವ ಅಮೆರಿಕಕ್ಕೆ ಮುಖಭಂಗವಾಗುವಂಥ ಪ್ರತಿಕ್ರಿಯೆಯನ್ನು ಭಾರತ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದರೆ ತಾನು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿರುವ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ 'ಬೇಕಾಗಿಲ್ಲ' ಎಂರ್ಥದಲ್ಲಿ ಭಾರತ ಪ್ರತಿಕ್ರಿಯೆ ನೀಡಿದೆ.

ವಿವಾದ ಎಬ್ಬಿಸಿದ ಟ್ರಂಪ್ ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾಪ ವಿವಾದ ಎಬ್ಬಿಸಿದ ಟ್ರಂಪ್ ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾಪ

"ಕಾಶ್ಮೀರ ವಿವಾದ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯ. ಮತ್ತು ಅದನ್ನು ದ್ವಿಪಕ್ಷೀಯವಾಗಿಯೇ ಸರಿಪಡಿಸಿಕೊಳ್ಳುತ್ತೇವೆ. ಕಾಶ್ಮೀರದ ಕುರಿತು ಭಾರತದ ಮಾತುಕತೆಯೇನಿದ್ದರೂ ಅದು ಪಾಕಿಸ್ತಾನದ ಜೊತೆ ಮಾತ್ರ" ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.

India rejects Donald Trumps offer of intervention in Kashmir issue

ಈ ಮೂಲಕ 'ನೀವು ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ' ಎಂದು ಪರೋಕ್ಷವಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಬಿಸಿ ಮುಟ್ಟಿಸಿದ್ದಾರೆ.

'ಅದು ಮೋದಿಗೆ ಬಿಟ್ಟಿದ್ದು', ಕಾಶ್ಮೀರದಲ್ಲಿ ಮತ್ತೆ ಮೂಗುತೂರಿಸಿದ ಡೊನಾಲ್ಡ್ ಟ್ರಂಪ್'ಅದು ಮೋದಿಗೆ ಬಿಟ್ಟಿದ್ದು', ಕಾಶ್ಮೀರದಲ್ಲಿ ಮತ್ತೆ ಮೂಗುತೂರಿಸಿದ ಡೊನಾಲ್ಡ್ ಟ್ರಂಪ್

ಬ್ಯಾಂಕಾಂಕ್ ನಲ್ಲಿ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪಿಯೋ ಅವರನ್ನು ಭೇಟಿಯಾದ ಜೈಶಂಕರ್, "ಅಕಸ್ಮಾತ್ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ನಡೆಯಬೇಕು ಎಂದಾದರೆ ಅದು ಪಾಕಿಸ್ತಾನದ ಜೊತೆ ಮಾತ್ರ" ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಅಮೆರಿಕ ಕಾಶ್ಮೀರದ ವಿವಾದದ ಕುರಿತು ಮಧ್ಯಸ್ಥಿಕೆ ವಹಿಸುವ ಇರಾದೆ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಕ್ಕೆ ಭೇಟಿ ನೀಡಿದ ನಂತರ ಈ ಬೆಳವಣಿಗೆಗಳು ನಡೆಯುತ್ತಿರುವುದು ಗಮನಾರ್ಹ.

English summary
India rejects US President Donald Trump's offer of intervention in Kashmir issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X