ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ ನಿಂದ ಭಾರತಕ್ಕೆ ಬಂತು ಮೊದಲ ರಫೇಲ್ ಫೈಟರ್ ಜೆಟ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಸಾಕಷ್ಟು ವಿವಾದ ಸೃಷ್ಟಿಸಿದ್ದ ರಫೇಲ್ ಫೈಟರ್ ಜೆಟ್ ಖರೀದಿ ವಿಚಾರ ಇದೀಗ ಮತ್ತೆ ಸುದ್ದಿಯಲ್ಲಿದೆ. ಫ್ರಾನ್ಸ್ ನಿಂದ ಮೊದಲ ರಫೇಲ್ ಫೈಟರ್ ಜೆಟ್ ಶುಕ್ರವಾರ ಭಾರತಕ್ಕೆ ಆಗಮಿಸಿದೆ.

ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ

RB-01 ಎಂಬ ಹೆಸರಿನ ರಫೇಲ್ ಯುದ್ಧ ವಿಮಾನ ಭಾರತ ಫ್ರಾನ್ಸ್ ನಿಂದ ಖರೀದಿ ಮಾಡುತ್ತಿರುವ 36 ಯುದ್ಧ ವಿಮಾನಗಳಲ್ಲಿ ಮೊದಲನೆಯದಾಗಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಈ ಯುದ್ಧ ವಿಮಾನ ಸೇನೆ ಮತ್ತಷ್ಟು ಬಲ ನೀಡಲಿದೆ ಎಂಬುದು ಸೇನಾ ಮುಖ್ಯಸ್ಥರ ಮಾತು.

ಆರು ತಿಂಗಳಲ್ಲಿ ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆಆರು ತಿಂಗಳಲ್ಲಿ ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆ

RB-01 ಎಂದರೆ ಏರ್ ಮಾರ್ಶಲ್ ಆರ್ ಕೆ ಎಸ್ ಬಾದುರಿಯಾ ಅವರ ಹೆಸರಿನ ಇನಿಶಿಯಲ್ ಆಗಿದ್ದು, ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದದಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. ಜೊತೆಗೆ ಇದೀಗ ರಫೇಲ್ ಜೆಟ್ ನಲ್ಲಿ ಧಿಕೃತವಾಗಿ ಹಾರಾಟ ನಡೆಸಲಿರುವ ಮೊದಲ ಭಾರತೀಯ ವಾಯುಸೇನೆ ಸಿಬ್ಬಂದಿಯೂ ಅವರೇ ಆಗಲಿದ್ದಾರೆ.

India Receives Its 1st Rafale Fighter Jet

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಶುಕ್ರವಾರ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದರು. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದೆ. ಅಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್

ಈ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದೆ ಎಂಬ ದೂರು ಎನ್ ಡಿಎ 1 ಸರ್ಕಾರದ ವಿರುದ್ಧ ಕೇಳಿಬಂದಿತ್ತು. ಕಳೆದ ಲೋಕಸಭೆ ಚುನಾವಣೆಯ ಸಮಯದಲ್ಲೂ ವಿಪಕ್ಷಗಳು ಇದನ್ನೇ ಪ್ರಚಾರದ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿದ್ದರು.

English summary
India has received it's first Rafale fighter jets out of 36 from France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X