ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಕಪಟ ನಾಟಕಕ್ಕೆ ಭಾರತದ ಖಡಕ್ ಉತ್ತರ

|
Google Oneindia Kannada News

Recommended Video

Pulwama : ಎದುರು ಮಾತಾಡದಂತೆ ಪಾಕ್‍ಗೆ ಉತ್ತರ ಕೊಟ್ಟ ಭಾರತ

ನವದೆಹಲಿ, ಫೆಬ್ರವರಿ 22: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಇಡೀ ಜಗತ್ತೂ ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪಾಕಿಸ್ತಾನ ಉಗ್ರ ಹಫೀಜ್ ಸಯೀದ್ ನೇತೃತ್ವದ ಎರಡು ಉಗ್ರ ಸಂಘಟನೆಗಳನ್ನು ನಿಷೇಧಿಸಿತ್ತು. ಈ ಮೂಲಕ ತಾವು ಭಯೋತ್ಪಾದನೆಯ ವಿರೋಧಿ ಎಂದು ಪೋಸು ಕೊಡುವುದಕ್ಕೆ ಹೊರಟ ಪಾಕಿಸ್ತಾನದ ನಡೆಯನ್ನು ಭಾರತ ಕಪಟ ನಾಟಕ ಎಂದು ದೂರಿದೆ.

ಘಟನೆಯನ್ನು ಇಡೀ ವಿಶ್ವವೂ ವಿರೋಧಿಸಿದ ನಂತರ ಒತ್ತಡಕ್ಕೊಳಗಾದ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯಲ್ಲಿ ನಡೆಯದ ಚೀನಾ ಆಟ: ಉಗ್ರ ದಾಳಿಗೆ ಕಟುವಾದ ಖಂಡನೆವಿಶ್ವಸಂಸ್ಥೆಯಲ್ಲಿ ನಡೆಯದ ಚೀನಾ ಆಟ: ಉಗ್ರ ದಾಳಿಗೆ ಕಟುವಾದ ಖಂಡನೆ

ಈಗಾಗಲೇ ಭಾರತದ ವಿದೇಶಾಂಗ ಸಚಿವಾಲಯ ಪುಲ್ವಾಮಾ ಉಗ್ರದಾಳಿಯಲ್ಲಿ ಪಾಕಿಸ್ತಾನ ಕೈವಾಡವಿದೆ ಎಂದು 30 ಕ್ಕೂ ಹೆಚ್ಚು ದೇಶಗಳಿಗೆ ವಿವರಿಸಿದೆ. ವಿಶ್ವಸಂಸ್ಥೆಯ ಶಾಶ್ವತ ಮತ್ತು ಅರೆಕಾಲಿಕ ಸದಸ್ಯರಿಗೂ ವಿವರಣೆ ನೀಡಿದೆ.

2008ರ ಮುಂಬೈ ಮೇಲಿನ ಭಯೊತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಹಾಗೂ ಅದರ ದತ್ತಿ ಸಂಸ್ಥೆಯಾದ ಫಲಾ-ಇ-ಇನ್ಸಾನಿಯತ್ ಫೌಂಡೇಷನ್ ನನ್ನು ಪಾಕಿಸ್ತಾನ್ ಗುರುವಾರ ನಿಷೇಧಿಸಿತ್ತು.

ಹಫೀಜ್ ಸಯೀದ್ ಸಂಘಟನೆಗಳಿಗೆ ಪಾಕಿಸ್ತಾನದಿಂದ ನಿಷೇಧ ಹಫೀಜ್ ಸಯೀದ್ ಸಂಘಟನೆಗಳಿಗೆ ಪಾಕಿಸ್ತಾನದಿಂದ ನಿಷೇಧ

ಪಾಕಿಸ್ತಾನದ ಕೈವಾಡವಿದ್ದೇ ಇದೆ

ಪಾಕಿಸ್ತಾನದ ಕೈವಾಡವಿದ್ದೇ ಇದೆ

ಈಗಾಗಲೇ ಭಾರತದ ವಿದೇಶಾಂಗ ಸಚಿವಾಲಯ ಪುಲ್ವಾಮಾ ಉಗ್ರದಾಳಿಯಲ್ಲಿ ಪಾಕಿಸ್ತಾನ ಕೈವಾಡವಿದೆ ಎಂದು 30 ಕ್ಕೂ ಹೆಚ್ಚು ದೇಶಗಳಿಗೆ ವಿವರಿಸಿದೆ. ವಿಶ್ವಸಂಸ್ಥೆಯ ಶಾಶ್ವತ ಮತ್ತು ಅರೆಕಾಲಿಕ ಸದಸ್ಯರಿಗೂ ವಿವರಣೆ ನೀಡಿದೆ. ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಕೈವಾಡ ಈ ದಾಳಿಯಲ್ಲಿರುವುದರಿಂದ ಭಾರತದ ವಾದದಲ್ಲಿ ಹುರುಳಿದೆ ಎಂದು ವಿಶ್ವವೂ ನಂಬಿದೆ.

ವಿಶ್ವಸಂಸ್ಥೆಯಿಂದಲೂ ತಪರಾಕಿ

ವಿಶ್ವಸಂಸ್ಥೆಯಿಂದಲೂ ತಪರಾಕಿ

ನಿನ್ನೆಯಷ್ಟೇ ವಿಶ್ವಸಂಸ್ಥೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಇದರಲ್ಲಿ ಭಾಗಿಯಾಗಿರುವುದು ಮತ್ತು ಇಂಥ ಹೇಯ ಕೃತ್ಯ ಎಸಗಿರುವುದನ್ನು ಕಟುವಾಗಿ ಖಂಡಿಸಲಾಗಿದೆ. ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ವಿಶ್ವಸಂಸ್ಥೆ ತಪರಾಕಿ ನೀಡಿರುವುದು ಪಾಕಿಸ್ತಾನಕ್ಕೂ ಮುಖಭಂಗವಾದಂತಾಗಿದೆ.

ಚೀನಾಕ್ಕೂ ಮುಖಭಂಗ

ಚೀನಾಕ್ಕೂ ಮುಖಭಂಗ

ಪುಲ್ವಾಮಾ ಘಟನೆಯನ್ನು ಖಂಡಿಸಿ, ಅದರಲ್ಲಿ ಜೈಷ್ ಇ ಮೊಹಮ್ಮದ್ ಉಗ್ರರ ಪಾತ್ರದ ಬಗ್ಗೆ ಮಾತನಾಡದಂತೆ ವಿಶ್ವಸಂಸ್ಥೆಯನ್ನು ತಡೆಯಲು ಹೊರಟ ಚೀನಾ ಮಾತಿಗೆ ಸೊಪ್ಪನ್ನೇ ಹಾಕದ ವಿಶ್ವಸಂಸ್ಥೆ ಉಗ್ರವಾದವ್ನನು ಕಟು ಶಬ್ದಗಳಿಂದ ಖಂಡಿಸಿದೆ.

ಏನಿದು ಪುಲ್ವಾಮಾ ಘಟನೆ?

ಏನಿದು ಪುಲ್ವಾಮಾ ಘಟನೆ?

ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಉಗ್ರ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಿಸಿ 44 ಸಿಆರ್ ಪಿಎಫ್ ಯೋಧರ ಸಾವಿಗೆ ಕಾರಣವಾಗಿದ್ದರು. ಈ ಘಟನೆಯಲ್ಲಿ ಪಾಕ್ ಕೈವಾಡವಿದೆ ಎಂದು ಭಾರತ ದೂರಿದ್ದು, ಸಾಕ್ಷ್ಯ ನೀಡಿ ಎಂದು ಪಾಕಿಸ್ತಾನ ಕೇಳಿದೆ.

English summary
India reacts to Pakistan's decision of banning 2008 Mumbai attack mastermind Hafiz Saeed-led Jamat-ud-Dawa and its charity wing Falah-e-Insaniat Foundation, says, it is a cosmetic move taken under pressure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X