ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಅಮೆರಿಕ ನಡುವೆ ಹೆಲಿಕಾಪ್ಟರ್ ಖರೀದಿ ಒಪ್ಪಂದ: ವಿಶೇಷತೆಗಳೇನು?

|
Google Oneindia Kannada News

ನವದೆಹಲಿ, ಫೆಬ್ರವರಿ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದರಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿರುವುದು ಭದ್ರತೆ ವಿಷಯವಾಗಿ ಮಾಡಿಕೊಂಡಿರುವ ಒಪ್ಪಂದ.

ಅಮೆರಿಕವು ಭಾರತದೊಂದಿಗೆ ಮೂರು ಶತಕೋಟಿ ಡಾಲರ್ ಮೌಲ್ಯದ ಭದ್ರತಾ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಲ್ಲಿ ಮಿಲಿಟರಿ ಸಹಕಾರ ಸೇರಿದಂತೆ ಹಲವು ರಕ್ಷಣಾ ಸಾಮಗ್ರಿ, ಶಸ್ತ್ರಾಸ್ತ್ರ ಖರೀದಿ ಸಹ ಸೇರಿದೆ.

ಭದ್ರತಾ ಒಪ್ಪಂದದಲ್ಲಿ ಗಮನ ಸೆಳೆಯುತ್ತಿರುವುದು ಅಮೆರಿಕವು ಭಾರತಕ್ಕೆ ನೀಡಲಿರುವ ಎಂ.ಎಚ್ 60 ಆರ್ ಸೀಹಾಕ್ ಯುದ್ಧ ಹೆಲಿಕಾಪ್ಟರ್‌ಗಳು. ಈ ಮಾದರಿಯ 24 ಹೆಲಿಕಾಪ್ಟರ್‌ಗಳನ್ನು ಭಾರತವು ಅಮೆರಿಕದಿಂದ ಖರೀದಿ ಮಾಡುತ್ತಿದೆ.

ಮೂರು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಮೋದಿ-ಟ್ರಂಪ್ಮೂರು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಮೋದಿ-ಟ್ರಂಪ್

ವಿಶ್ವದ ಶಕ್ತಿಶಾಲಿ ಹೆಲಿಕಾಪ್ಟರ್‌ಗಳಲ್ಲಿ ಒಂದಾದ ಸೀಹಾಕ್ ಹೆಲಿಕಾಫ್ಟರ್‌ಗಳನ್ನು ಭಾರತಕ್ಕೆ ನೀಡುತ್ತಿರುವುದಾಗಿ ನಿನ್ನೆಯೇ ಟ್ರಂಪ್ ಹೇಳಿದ್ದರು. ಅಮೆರಿಕದ ಲಾಕ್‌ಹೀಟ್ ಮಾರ್ಟಿನ್ ಗ್ರೂಪ್ ಸಂಸ್ಥೆ 24 ಸಿಹಾಕ್ ಸಾಗರ ಕಣ್ಗಾವಲು ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಪೂರೈಸಲಿದೆ.

ಭಾರತದ ಸಾಗರ ಪ್ರದೇಶದ ಕಣ್ಗಾವಲಿಗೆ ಸಹಾಯ

ಭಾರತದ ಸಾಗರ ಪ್ರದೇಶದ ಕಣ್ಗಾವಲಿಗೆ ಸಹಾಯ

ಭಾರತದ ಸಾಗರ ಪ್ರದೇಶದ ಮೇಲೆ ಕಣ್ಗಾವಲಿರಿಸಲು ಈ ಯುದ್ಧವಿಮಾನಗಳನ್ನು ಬಳಸಲಾಗುತ್ತದೆ. ತಂತ್ರಜ್ಞಾನ, ವೇಗ, ನಿಖರತೆ, ಶಕ್ತಿಶಾಲಿ ಆಯುಧಗಳನ್ನು ಹೊಂದಿರುವ ಈ ಹೆಲಿಕಾಫ್ಟರ್‌ಗಳು ಭಾರತೀಯ ಸೇನೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

2006 ರಿಂದಲೂ ಅಮೆರಿಕ ಈ ಹೆಲಿಕಾಪ್ಟರ್ ಬಳಸುತ್ತಿದೆ

2006 ರಿಂದಲೂ ಅಮೆರಿಕ ಈ ಹೆಲಿಕಾಪ್ಟರ್ ಬಳಸುತ್ತಿದೆ

ಎಂ.ಎಚ್ 60 ಆರ್ ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಅಮೆರಿಕದ ನೌಕಾಪಡೆ 2006 ರಿಂದಲೂ ಬಳಸುತ್ತಿದೆ. ಈ ಹೆಲಿಕಾಪ್ಟರ್ ಅನ್ನು ಎಸ್‌ಎಸ್‌ 60ಬಿ, ಎಸ್‌ಎಚ್ 60ಎಫ್ ಎರಡೂ ಮಾದರಿಗಳನ್ನು ಸೇರಿಸಿ ನಿರ್ಮಿಸಲಾಗಿದೆ. ಇದರಲ್ಲಿ ನೈಟ್ ವಿಷನ್ ತಂತ್ರಜ್ಞಾನ ಸಹ ಅಡಕವಾಗಿದೆ.

ಡೊನಾಲ್ಡ್ ಟ್ರಂಪ್ ದಂಪತಿ ಜೊತೆಗಿರುವ ಮಹಿಳೆ ಯಾರು?ಡೊನಾಲ್ಡ್ ಟ್ರಂಪ್ ದಂಪತಿ ಜೊತೆಗಿರುವ ಮಹಿಳೆ ಯಾರು?

300 ಎಂ.ಎಚ್ 60 ಆರ್ ಸೀಹಾಕ್ ಹೆಲಿಕಾಪ್ಟರ್‌ ಕಾರ್ಯನಿರ್ವಹಿಸುತ್ತಿವೆ

300 ಎಂ.ಎಚ್ 60 ಆರ್ ಸೀಹಾಕ್ ಹೆಲಿಕಾಪ್ಟರ್‌ ಕಾರ್ಯನಿರ್ವಹಿಸುತ್ತಿವೆ

ವಿಶ್ವದಾದ್ಯಂತ 300 ಎಂ.ಎಚ್ 60 ಆರ್ ಸೀಹಾಕ್ ಹೆಲಿಕಾಪ್ಟರ್‌ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಅಮೆರಿಕ ನೌಕಾದಳ, ಡೆನ್ಮಾರ್ಕ್‌ನ ರಾಯಲ್ ಡ್ಯಾನಿಶ್ ನೇವಿ, ರಾಯಲ್ ಆಸ್ಟ್ರೇಲಿಯಾ ನೇವಿ, ರಾಯಲ್ ಸೌದಿ ನೌಕಾದಳ ಈಗ ಬಳಸುತ್ತಿವೆ.

47 ಬಗೆಯ ಮಿಸೈಲ್ ಎಚ್ಚರಿಕೆ ವ್ಯವಸ್ಥೆ

47 ಬಗೆಯ ಮಿಸೈಲ್ ಎಚ್ಚರಿಕೆ ವ್ಯವಸ್ಥೆ

47 ವಿವಿಧ ಬಗೆಯ ಮಿಸೈಲ್ ಎಚ್ಚರಿಕೆ ವ್ಯವಸ್ಥೆ, ಲೇಸರ್ ರೇಂಜ್ ಫೈಂಡರ್ ವ್ಯವಸ್ಥೆ, ಆಂಟಿ ಸಬ್‌ಮೆರಿನ್ ತಂತ್ರಜ್ಞಾನ ಹೊಂದಿರುವ ಈ ಹೆಲಿಕಾಪ್ಟರ್ ರಕ್ಷಣಾ ಕಾರ್ಯಗಳಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ತಂತ್ರಜ್ಞಾನ ಹೊಂದಿದೆ.

ಒಂದು ಗಂಟೆ ಹಾರಾಟಕ್ಕೆ ಖರ್ಚಾಗುವುದೆಷ್ಟು?

ಒಂದು ಗಂಟೆ ಹಾರಾಟಕ್ಕೆ ಖರ್ಚಾಗುವುದೆಷ್ಟು?

ಸುಲಭವಾಗಿ ಚಲಾಯಿಸಲು ಸಾಧ್ಯವಿರುವ ರೀತಿಯಲ್ಲಿ ಈ ಹೆಲಿಕಾಪ್ಟರ್ ಅನ್ನು ವಿನ್ಯಾಸ ಮಾಡಲಾಗಿದ್ದು, ನಿರ್ವಹಣಾ ವೆಚ್ಚ ಕಡಿಮೆ ಇದೆ. ಒಂದು ಗಂಟೆ ಈ ಹೆಲಿಕಾಪ್ಟರ್‌ ನಲ್ಲಿ ಹಾರಾಟ ನಡೆಸಿದರೆ 3.60 ಲಕ್ಷ ರೂಪಾಯಿ ಖರ್ಚಾಗಲಿದೆ.

English summary
India purchasing 24 MH 60R seahawk helicopters from America. This fighter helicopters will add to Indian navy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X