ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆಯಿಂದ ಅಂಚೆ ಕಚೇರಿಯಲ್ಲಿ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ

|
Google Oneindia Kannada News

ನವದೆಹಲಿ, ಮಾರ್ಚ್ 31: ಅಂಚೆ ಕಚೇರಿಯಲ್ಲಿ ಏ.1ರಿಂದ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭವಾಗಲಿದೆ. ದೇಶಾದ್ಯಂತ ಸೇವೆ ಪ್ರಾರಂಭಿಸಲಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಏರ್ ಟೆಲ್ ಹಾಗೂ ಪೇಟಿಎಂ ನಂತರ ದೇಶದ ಮೂರನೇ ಪೇಮೆಂಟ್ ಬ್ಯಾಂಕ್ ಆಗಲಿದೆ.

ಅಂಚೆ ಇಲಾಖೆಯಿಂದ ಪೇಮೆಂಟ್ಸ್ ಬ್ಯಾಂಕ್ ಸೇವೆ ಅಂಚೆ ಇಲಾಖೆಯಿಂದ ಪೇಮೆಂಟ್ಸ್ ಬ್ಯಾಂಕ್ ಸೇವೆ

ದೇಶದ 1.55ಲಕ್ಷ ಅಂಚೆ ಕಚೇರಿಯಲ್ಲಿ ಈ ಸೇವೆ ಪ್ರಾರಂಭವಾಗಲಿದೆ. ಪೋಸ್ಟ್ ಮಾಸ್ಟರ್ ಹಾಗೂ ಅಂಚೆ ಕಚೇರಿ ಶಾಖೆಗಳ ಮೂಲಕ ಈ ಸೇವೆ ಜನರನ್ನು ತಲುಪಲಿದೆ. ಇದಕ್ಕಾಗಿ ಐಪಿಪಿಬಿಯ 650 ಶಾಖೆಗಳು ನೆಟ್ವರ್ಕ್ ಕೆಸಲ ಮಾಡಲಿದೆ. ಈ ಸೇವೆ ದೇಶಾದ್ಯಂತ ವಿಸ್ತರಣೆಯಾದರೆ ದೇಶದ ಆರ್ಥಿಕ ನೆಟ್ವರ್ಕ್ ಮತ್ತಷ್ಟು ಬಲಪಡೆಯಲಿದೆ ಎಂದು ಭಾರತೀಯ ಅಂಚೆ ಇಲಾಖೆ ತಿಳಿಸಿದೆ.

India post payment bank to begin from April 1

ಈವರೆಗೂ ಬ್ಯಾಂಕಿಂಗ್ ವ್ಯವಸ್ಥೆಯಿಲ್ಲದ ಪ್ರಧೇಶಗಳಿಗೆ ಪೋಸ್ಟ್ ಆಫೀಸ್ ನ ಈ ಹೊಸ ಸೇವೆ ನೆರವಾಗಲಿದೆ. ಪೇಮೆಂಟ್ ಬ್ಯಾಂಕ್ ನಲ್ಲಿ 1 ಲಕ್ಷದವರೆಗೆ ಹಣ ಜಮಾ ಮಾಡಬಹುದು. ಹಣ ಜಮಾ, ವರ್ಗಾವಣೆ ಜತೆಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ಆದರೆ ಸಾಮಾನ್ಯ ಬ್ಯಾಂಕುಗಳಂತೆ ಸಾಲ ನೀಡುವುದಿಲ್ಲ.

English summary
Indian postal service will start 650 payment bank branches through out India. This facilities going to start from tommorrow(April 1).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X