ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಾಕೋಟ್‌ನಲ್ಲಿ ಉಗ್ರರ ಹುಟ್ಟಡಗಿಸಿದ್ದ Spice-2000 ಬಾಂಬ್‌ಗಳ ಖರೀದಿಗೆ ಭಾರತ ಯೋಜನೆ

|
Google Oneindia Kannada News

ನವದೆಹಲಿ, ಜೂನ್ 30: ಗಡಿಯಲ್ಲಿ ಚೀನಾ ಉಪಟಳ ಹೆಚ್ಚಾಗುತ್ತಿದ್ದಂತೆ ಭಾರತವು ತನ್ನ ಸೇನಾ ಬಲವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದೆ. ಹೀಗಾಗಿಯೇ ನೆಲದ ಗುರಿಗಳನ್ನು ಯಶಸ್ವಿಯಾಗಿ ಹೊಡೆಯುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದ್ದು, ಸ್ಪೈಸ್ -2000 ಬಾಂಬ್‌ಗಳನ್ನು ಮತ್ತಷ್ಟು ಖರೀದಿಸಲು ಯೋಜನೆ ನಡೆಸಿದೆ.

ಕಳೆದ ವರ್ಷ ಫೆ.26 ರಂದು ಭಾರತೀಯ ವಾಯುಪಡೆ ಬಾಲಕೋಟ್ ಪಟ್ಟಣದಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರವನ್ನು ಮಾರಕ ದಾಳಿ ನಡೆಸಿ ನಾಶಪಡಿಸಿತ್ತು.ಈ ದಾಳಿಯಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಿ ನಿಖರವಾಗಿ ಇಟ್ಟ ಗುರಿ ತಲುಪಿ ಶತ್ರುಗಳನ್ನು ನಾಶಪಡಿಸಿದ್ದ ಸ್ಪೈಸ್ -2000 ಬಾಂಬ್‌ಗಳನ್ನು ವಾಯುಪಡೆಯು ಮತ್ತಷ್ಟು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ.

ಚೀನಾ ಎದೆಯಲ್ಲಿ ನಡುಕ ಹುಟ್ಟಿಸಿದೆ ಭಾರತದ 'ಈ' ಅಸ್ತ್ರ!ಚೀನಾ ಎದೆಯಲ್ಲಿ ನಡುಕ ಹುಟ್ಟಿಸಿದೆ ಭಾರತದ 'ಈ' ಅಸ್ತ್ರ!

"ಭಾರತೀಯ ವಾಯುಪಡೆಯು ಈಗಾಗಲೇ ಸ್ಪೈಸ್ -2000 ಬಾಂಬ್‌ಗಳನ್ನು ಹೊಂದಿದೆ. ಈಗ ಸೇವೆಗಳಿಗೆ ನೀಡಲಾದ ತುರ್ತು ಖರೀದಿ ಅಧಿಕಾರಗಳ ಅಡಿಯಲ್ಲಿ ಸ್ಪೈಸ್ -2000 ಬಾಂಬ್‌ಗಳಂತಹ ಹೆಚ್ಚು ಸ್ಟ್ಯಾಂಡ್-ಆಫ್ ಶಸ್ತ್ರಾಸ್ತ್ರಗಳನ್ನು ಪಡೆಯಲು ಯೋಜಿಸುತ್ತಿದೆ" ಎಂದು ಸರ್ಕಾರಿ ಮೂಲಗಳು ಎಎನ್‌ಐಗೆ ತಿಳಿಸಿವೆ.

India Plans To Buy More Spice-2000 Bombs Amid China Stand-Off

ಸ್ಪೈಸ್ -2000 ಬಾಂಬ್‌ಗಳು 70 ಕಿ.ಮೀ.ವರೆಗಿನ ಗುರಿಗಳನ್ನು ಹೊಡೆಯಬಲ್ಲವು ಮತ್ತು ಇವುಗಳ ಬಲದಲ್ಲಿ ಹೊಸ ರೂಪಾಂತರದ ಬಂಕರ್‌ಗಳು ಮತ್ತು ಗಟ್ಟಿಯಾದ ಆಶ್ರಯ ತಾಣಗಳನ್ನು ಸಹ ನಾಶಪಡಿಸುತ್ತದೆ ಎಂದು ಅವರು ಹೇಳಿದರು.

ಬಾಲಕೋಟ್ ದಾಳಿಗೆ ಬಳಸಿದ ಆಸ್ತ್ರ ಸ್ಪೈಸ್ ಬಾಂಬ್ಬಾಲಕೋಟ್ ದಾಳಿಗೆ ಬಳಸಿದ ಆಸ್ತ್ರ ಸ್ಪೈಸ್ ಬಾಂಬ್

ಬಾಲಾಕೋಟ್‌ ವೈಮಾನಿಕ ದಾಳಿಯಲ್ಲಿ ಬಳಸಿದ ಆವೃತ್ತಿಯು ಗಟ್ಟಿಯಾದ ಆಶ್ರಯ ಮತ್ತು ಕಟ್ಟಡಗಳಲ್ಲಿ ಭೇದಿಸಿ ಒಳಗೆ ನುಗ್ಗಿ ವಿನಾಶಕ್ಕೆ ಕಾರಣವಾಯಿತು. ತುರ್ತು ಅಧಿಕಾರಗಳ ಅಡಿಯಲ್ಲಿ, ನರೇಂದ್ರ ಮೋದಿ ಸರ್ಕಾರವು ರಕ್ಷಣಾ ಪಡೆಗಳಿಗೆ ಆರ್ಥಿಕ ಶಕ್ತಿಯನ್ನು ನೀಡಿದೆ, ಅದರ ಅಡಿಯಲ್ಲಿ ಅವರು ಶಸ್ತ್ರಾಸ್ತ್ರ ವ್ಯವಸ್ಥೆಯನ್ನು 500 ಕೋಟಿಗಿಂತ ಕಡಿಮೆ ಖರೀದಿಸಬಹುದು.

ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯ ನಂತರದಲ್ಲಿ ಸೇನೆಗೆ ಈ ತುರ್ತು ಶಕ್ತಿಯನ್ನು ನೀಡಲಾಯಿತು. ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದರು.

English summary
India is planning to acquire a lethal and more capable version of the Spice-2000 bombs. The bombs, which were used effectively to destroy the Pakistani terrorist camp in Balakot Last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X