ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್‌ನ್ಯೂಸ್: ಭಾರತವು ಕೋವಿಡ್ ಗುಣಮುಖ ಸಂಖ್ಯೆಯಲ್ಲಿ ಅಮೆರಿಕಾವನ್ನೇ ಹಿಂದಿಕ್ಕಿದೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅಮೆರಿಕಾ ನಂತರದಲ್ಲಿ ಅತಿ ಹೆಚ್ಚು ಪೀಡಿತಗೊಂಡಿರುವ ರಾಷ್ಟ್ರ ಭಾರತವಾಗಿದ್ದು, ಇದೀಗ ಚೇತರಿಕೆ ಪ್ರಮಾಣದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೇ ಹಿಂದಿಕ್ಕಿದೆ. ಶನಿವಾರ ಒಂದೇ ದಿನದಲ್ಲಿ ಸುಮಾರು 96,000 ಜನರು ಚೇತರಿಸಿಕೊಂಡಿದ್ದು, ಭಾರತವು ಅಮೆರಿಕಾವನ್ನ ಹಿಂದಿಕ್ಕಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

"ಭಾರತವು ಅಮೆರಿಕಾವನ್ನು ಹಿಂದಿಕ್ಕಿದೆ ಮತ್ತು ಜಾಗತಿಕ ಕೋವಿಡ್-19 ಚೇತರಿಕೆಯ ವಿಷಯದಲ್ಲಿ ನಂ .1 ಆಗುತ್ತದೆ. ಒಟ್ಟು ಚೇತರಿಕೆಯು 42 ಲಕ್ಷಗಳನ್ನು ದಾಟಿದೆ" ಎಂದು ಅದು ಟ್ವೀಟ್ ಮಾಡಿದೆ.

ಭಾರತದಲ್ಲಿ ಇಂದು 93,337 ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ ಇಂದು 93,337 ಕೊರೊನಾ ಸೋಂಕಿತರು ಪತ್ತೆ

ಭಾರತದ ಕೋವಿಡ್ -19 ಪ್ರಕರಣವು ಕಳೆದ 24 ಗಂಟೆಗಳಲ್ಲಿ 93,337 ಹೊಸ ಪ್ರಕರಣಗಳು ಮತ್ತು 1,247 ಸಾವುಗಳ ಏರಿಕೆಯೊಂದಿಗೆ 53 ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. 10,13,964 ಸಕ್ರಿಯ ಪ್ರಕರಣಗಳು, 42,08,432 ಡಿಸ್ಚಾರ್ಜ್ ಮತ್ತು 85,619 ಸಾವುಗಳು ಸೇರಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 53,08,015 ಆಗಿದೆ.

India Overtakes US In Highest Number Of Covid Recoveries

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಸೆಪ್ಟೆಂಬರ್ 18 ರವರೆಗೆ ಪರೀಕ್ಷಿಸಲಾದ ಒಟ್ಟು ಮಾದರಿಗಳು 6,24,54,254. ಸೆಪ್ಟೆಂಬರ್ 18 ರಂದು ಪರೀಕ್ಷಿಸಿದ ಮಾದರಿಗಳ ಸಂಖ್ಯೆ 8,81,911.

Recommended Video

ಏನು ಇಲ್ಲ ನಮ್ ಕೈಯಲ್ಲಿ ,ಎಲ್ಲಾ ದೊಡ್ಡೋರು decide ಮಾಡ್ಬೇಕು | Oneindia Kannada

ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ 301273 ಸಕ್ರಿಯ ಪ್ರಕರಣಗಳು, ಕರ್ನಾಟಕ 101148, ಆಂಧ್ರಪ್ರದೇಶ 84423, ಉತ್ತರ ಪ್ರದೇಶ 67825 ಮತ್ತು ತಮಿಳುನಾಡು 46506 ಪ್ರಕರಣಗಳಿವೆ.

English summary
With nearly 96,000 people recuperated from the novel coronavirus in a single day, India has overtaken the United States to register the highest number of COVID-19 recoveries in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X