ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಾಂಡರ್ ಅಭಿನಂದನ್‌ ಮೇಲೆ ಹಿಂಸೆಗೆ ಭಾರತ ತೀವ್ರ ಖಂಡನೆ

|
Google Oneindia Kannada News

ನವದೆಹಲಿ, ಫೆಬ್ರವರಿ 27: ಪಾಕಿಸ್ತಾನದ ವಶದಲ್ಲಿರುವ ಏರ್‌ ವಿಂಗ್ ಕಮಾಂಡರ್ ಅಭಿನಂದನ್ ಶೀಘ್ರವಾಗಿ, ಸುರಕ್ಷಿತವಾಗಿ ವಾಪಸ್ಸಾಗುತ್ತಾರೆಂದು ನಿರೀಕ್ಷಿಸುತ್ತಿದ್ದೇವೆ ಎಂದು ಭಾರತ ಸರ್ಕಾರ ಹೇಳಿದೆ.

ವಿದೇಶಾಂಗ ಸಚಿವಾಲಯವು ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತೀಯ ವಿಂಗ್ ಕಮಾಂಡರ್‌ ಅವರಿಗೆ ಹಿಂಸಿಸಿರುವುದನ್ನು ಹಾಗೂ ಹಾಗೂ ಅವರ ಕಣ್ಣು-ಕೈ ಕಟ್ಟಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದನ್ನು ತೀವ್ರವಾಗಿ ಖಂಡಿಸಿದೆ.

ಸರಣಿ ಸಭೆ ನಡೆಸಿದ ಮೋದಿ, ಮೂರು ಸೇನೆಗಳಿಗೆ ಒಂದೇ ಸಂದೇಶ ಸರಣಿ ಸಭೆ ನಡೆಸಿದ ಮೋದಿ, ಮೂರು ಸೇನೆಗಳಿಗೆ ಒಂದೇ ಸಂದೇಶ

ಪಾಕಿಸ್ತಾನದ ಈ ನಡೆಯು ಅಂತರರಾಷ್ಟ್ರೀಯ ಮಾನ ಹಕ್ಕುಗಳ ಉಲ್ಲಂಘನೆ ಹಾಗೂ ಜಿನಿವಾ ಒಪ್ಪಂದದ ಉಲ್ಲಂಘನೆ ಎಂದು ಭಾರತವು ಎಚ್ಚರಿಸಿದೆ.

India objects to Pakistans display of an injured IAF personnel, demands urgent release

ಭಾರತೀಯ ವಿಂಗ್ ಕಮಾಂಡರ್‌ಗೆ ಯಾವುದೇ ಹಾನಿ ಮಾಡಬಾರದು ಎಂದು ಪಾಕಿಸ್ತಾನಕ್ಕೆ ಸೂಚಿಸಿರುವುದಾಗಿ ಹೇಳಲಾಗಿದ್ದು ಪಾಕಿಸ್ತಾನದಿಂದ ಅಭಿನಂದನ್ ಅವರ ಶೀಘ್ರ ಮತ್ತು ಸುರಕ್ಷಿತ ವಾಪಸ್ಸಾತಿಯನ್ನು ನಿರೀಕ್ಷಿಸುತ್ತಿರುವುದಾಗಿಯೂ ತಿಳಿಸಲಾಗಿದೆ.

ಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನ ನೀಡಿದ ಉತ್ತರವೇನು? ಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನ ನೀಡಿದ ಉತ್ತರವೇನು?

ಭಾರತದ ಪ್ರಭಾರಿ ಪಾಕಿಸ್ತಾನ ರಾಯಭಾರಿಯನ್ನು ಕರೆಸಿಕೊಂಡ ವಿದೇಶಾಂಗ ಸಚಿವಾಲಯ ಪಾಕಿಸ್ತಾನವು ಅಂತರರಾಷ್ಟ್ರೀಯ ಗಡಿ ನಿಯಂತ್ರಣ ನಿಯಮವನ್ನು ಉಲ್ಲಂಘಿಸಿದ್ದು ಸೇರಿದಂತೆ ಭಾರತದ ಮೇಲಿನ ದಾಳಿ ಯತ್ನವನ್ನು ತೀವ್ರವಾಗಿ ಖಂಡಿಸಿದೆ.

ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಒಕ್ಕೊರಲ ಕೂಗು ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಒಕ್ಕೊರಲ ಕೂಗು

ಪಾಕಿಸ್ತಾನವು ಇಂದು ಬೆಳಿಗ್ಗೆ ಭಾರತದ ಮೇಲೆ ದಾಳಿಗೆ ಯತ್ನಿಸಿತ್ತು, ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಭಾರತೀಯ ಮಿಗ್ ವಿಮಾನವು ದಾಳಿಗೆ ತುತ್ತಾಯ್ತು ಅದರಲ್ಲಿದ್ದ ಅಭಿನಂದನ್ ಅವರು ಪಾಕಿಸ್ತಾನ ಸೈನಿಕರಿಗೆ ಸಿಕ್ಕಿಹಾಕಿಕೊಂಡರು.

English summary
The government on Wednesday said it expected the "immediate and safe return" of an Indian pilot in Pakistan's custody after fighter jets of both sides engaged in an air battle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X