ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಭಾರತ ಯಾವುದೇ ವಿದ್ಯುತ್‌ ಉಪಕರಣಗಳನ್ನು ಆಮದು ಮಾಡಿಕೊಳ್ಳಬಾರದು:ಆರ್‌.ಕೆ. ಸಿಂಗ್

|
Google Oneindia Kannada News

ನವದೆಹಲಿ, ಜುಲೈ 3: ಗಡಿ ಸಂಘರ್ಷದ ಬಳಿಕ ಚೀನಾದೊಂದಿಗಿನ ಭಾರತದ ವಾಣಿಜ್ಯ ಸಮರ ದೊಡ್ಡ ಮಟ್ಟದಲ್ಲಿ ಶುರುವಾಗುವ ಮುನ್ಸೂಚನೆ ಸಿಗುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಕೇಂದ್ರ ಸಚಿವ ಆರ್.ಕೆ. ಸಿಂಗ್‌ರವರ ಹೇಳಿಕೆ. ಚೀನಾದೊಂದಿಗಿನ ಗಡಿ ವಿವಾದದ ಮಧ್ಯೆ ಭಾರತವು ಚೀನಾದಿಂದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ವಿದ್ಯುತ್ ಸಚಿವ ಆರ್ ಕೆ ಸಿಂಗ್ ಶುಕ್ರವಾರ ಹೇಳಿದ್ದಾರೆ.

Recommended Video

Virat Kohli improvises Hardik Pandya's Flying push-ups and challenges him | Oneindia Kannada

ರಾಜ್ಯ ಸಹವರ್ತಿಗಳೊಂದಿಗಿನ ಪತ್ರಿಕಾಗೋಷ್ಠಿಯಲ್ಲಿ, ಚೀನಾ ಮತ್ತು ಪಾಕಿಸ್ತಾನದಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ವಿಶೇಷವಾಗಿ ತಪಾಸಣೆಯ ಆಧಾರದ ಮೇಲೆ ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಚೀನಾದ ಸಂಸ್ಥೆಗಳಿಗೆ ಉಪಕರಣಗಳನ್ನು ಪೂರೈಸಲು ರಾಜ್ಯ ಡಿಸ್ಕೋಮ್‌ಗಳು ಆದೇಶ ನೀಡಬಾರದು ಎಂದು ಅವರು ಹೇಳಿದರು.

ಚೀನಾ ಕ್ಯಾತೆ ಬಳಿಕ ಗಲ್ವಾನ್ ಕಣಿವೆ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿಚೀನಾ ಕ್ಯಾತೆ ಬಳಿಕ ಗಲ್ವಾನ್ ಕಣಿವೆ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ

"ನಾವು ಇಲ್ಲಿ ಎಲ್ಲವನ್ನೂ ತಯಾರಿಸುತ್ತೇವೆ. ಭಾರತವು ಚೀನಾದಿಂದ, 21,000 ಕೋಟಿ ಸೇರಿದಂತೆ, 71,000 ಕೋಟಿ ರುಪಾಯಿ ಮೌಲ್ಯದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಂಡಿದೆ" ಎಂದು ಸಿಂಗ್ ಅವರು ಇಂದು ಬೆಳಿಗ್ಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಇಂಧನ ಸಚಿವರ ಸಮಾವೇಶದಲ್ಲಿ ಹೇಳಿದರು.

India Not To Import Power Equipment From China: RK

"ಇದು (ವಿದ್ಯುತ್ ಉಪಕರಣಗಳ ಬೃಹತ್ ಆಮದು) ಒಂದು ದೇಶವು ನಮ್ಮ ಪ್ರದೇಶಕ್ಕೆ ಅತಿಕ್ರಮಿಸುತ್ತದೆ ಎಂದು ನಾವು ಸಹಿಸಲಾರೆವು. ನಾವು ಚೀನಾ ಮತ್ತು ಪಾಕಿಸ್ತಾನದಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ." ಎಂದು ಸಭೆಯಲ್ಲಿ ಹೇಳಿದ್ದಾರೆ.

''ಇದರ ಜೊತೆಗೆ ನಾವು ಮೊದಲೇ ಹೇಳಿದಂತೆ ಚೀನಾದಿಂದ ಆಮದು ಮಾಡಿಕೊಳ್ಳಲು ಅನುಮತಿಸಲಾಗುವುದಿಲ್ಲ. ಏಕೆಂದರೆ ಅವುಗಳಲ್ಲಿ(ಚೀನಾದಿಂದ ಆಮದು ಮಾಡಿಕೊಳ್ಳುವ) ಮಾಲ್ವೇರ್ ಅಥವಾ ಟ್ರೋಜನ್ ಹಾರ್ಸ್ ಇರಬಹುದು. ಅವುಗಳನ್ನು ದೂರದಿಂದಲೇ ಸಕ್ರಿಯಗೊಳಿಸಬಹುದು (ನಮ್ಮ ವಿದ್ಯುತ್ ವ್ಯವಸ್ಥೆಗಳನ್ನು ದುರ್ಬಲಗೊಳಿಸಬಹುದು) ಎಂದು ಅವರು ಹೇಳಿದ್ದಾರೆ.

English summary
Power Minister R K Singh on Friday said that India will import power equipment from China, amid border standoff with China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X