ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಏಕಕಾಲಕ್ಕೆ 4 ಕೊರೊನಾ ಲಸಿಕೆ ಸಿದ್ಧವಾಗುತ್ತಿರುವ ಏಕೈಕ ದೇಶ ಭಾರತ"

|
Google Oneindia Kannada News

ನವದೆಹಲಿ, ಜನವರಿ 02: ಶನಿವಾರದಿಂದ ಭಾರತದ ಎಲ್ಲಾ ರಾಜ್ಯಗಳಲ್ಲಿ ಕೊರೊನಾ ಲಸಿಕೆ ಪೂರ್ವಾಭ್ಯಾಸ ಆರಂಭವಾಗಿದೆ. ಕೊರೊನಾ ಸೋಂಕಿನ ವಿರುದ್ಧ ನಾಲ್ಕು ಲಸಿಕೆಗಳನ್ನು ಏಕಕಾಲಕ್ಕೆ ಅಭಿವೃದ್ಧಿಪಡಿಸುತ್ತಿರುವ ಏಕೈಕ ದೇಶ ಭಾರತ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಬ್ರಿಟನ್ ನಲ್ಲಿ ಈಗಾಗಲೇ ಫೈಜರ್ ಹಾಗೂ ಆಸ್ಟ್ರಾಜೆನೆಕಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಅಮೆರಿಕದಲ್ಲಿ ಫೈಜರ್ ಲಸಿಕೆಗೆ ಅನುಮತಿ ನೀಡಲಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಈಗಾಗಲೇ ಮೂರು ಅರ್ಜಿಗಳು ಬಂದಿವೆ. ಹೀಗಾಗಿ ತುರ್ತು ಬಳಕೆಗೆ ಒಂದಕ್ಕಿಂತ ಹೆಚ್ಚಿನ ಲಸಿಕೆಗಳು ಲಭ್ಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಮುಂದೆ ಓದಿ...

ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 2.50 ಲಕ್ಷಕ್ಕೆ ಇಳಿಕೆದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 2.50 ಲಕ್ಷಕ್ಕೆ ಇಳಿಕೆ

 ಪ್ರಾಯೋಗಿಕ ಹಂತದಲ್ಲಿ ನಾಲ್ಕು ಲಸಿಕೆಗಳು

ಪ್ರಾಯೋಗಿಕ ಹಂತದಲ್ಲಿ ನಾಲ್ಕು ಲಸಿಕೆಗಳು

ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಒಳಗೊಂಡಂತೆ ಆರು ಕೊರೊನಾ ಲಸಿಕೆಗಳು ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿವೆ. ಕೋವಿಶೀಲ್ಡ್ ಆಕ್ಸ್ ಫರ್ಡ್ ಲಸಿಕೆಯನ್ನು ಆಸ್ಟ್ರಾಜೆನೆಕಾ ಹಾಗೂ ಪುಣೆಯ ಸೆರಂ ಇನ್ ಸ್ಟಿಟ್ಯೂಟ್ ಜಂಟಿಯಾಗಿ ತಯಾರಿಸುತ್ತಿದೆ. ಭಾರತ್ ಬಯೋಟಕ್ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಕೊವಾಕ್ಸಿನ್ ಅಭಿವೃದ್ಧಿಪಡಿಸುತ್ತಿದೆ.

 ಅಭಿವೃದ್ಧಿ ಹಂತದಲ್ಲಿ ಇನ್ನೂ ಎರಡು ಲಸಿಕೆಗಳು

ಅಭಿವೃದ್ಧಿ ಹಂತದಲ್ಲಿ ಇನ್ನೂ ಎರಡು ಲಸಿಕೆಗಳು

ಈ ಎರಡು ಲಸಿಕೆಗಳ ಹೊರತಾಗಿ, ಅಹಮದಾಬಾದ್ ನ ಕಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಬಯೋಟೆಕ್ನಾಲಜಿಯು ಕೇಂದ್ರ ಇಲಾಖೆ ಸಹಯೋಗದೊಂದಿಗೆ ಝೈಕೋವ್-ಡಿ ಲಸಿಕೆ ಸಿದ್ಧಪಡಿಸುತ್ತಿದ್ದು, ಎನ್ ವಿಎಕ್ಸ್-cov2373 ನೋವಾವಾಕ್ಸ್ ನೊಂದಿಗೆ ಸೆರಂ ಇನ್ ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸುತ್ತಿದೆ.

ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ಲಸಿಕೆ ಡ್ರೈ ರನ್ ಇಂದು: ಎಲ್ಲೆಲ್ಲಿ, ಹೇಗೆ?ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ಲಸಿಕೆ ಡ್ರೈ ರನ್ ಇಂದು: ಎಲ್ಲೆಲ್ಲಿ, ಹೇಗೆ?

 ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಪ್ರಯೋಗ

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಪ್ರಯೋಗ

ಅಮೆರಿಕದ ಎಂಐಟಿ ಸಹಯೋಗದೊಂದಿಗೆ ಹೈದರಾಬಾದ್ ನ ಬಯೋಲಾಜಿಕಲ್ ಇ ಲಿಮಿಟೆಡ್ ಸಂಸ್ಥೆ ಒಂದು ಲಸಿಕೆಯನ್ನು ತಯಾರಿಸುತ್ತಿದ್ದು, ಪುಣೆ ಮೂಲದ ಜೆನ್ನೊವಾ ಬಯೋ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅಮೆರಿಕದ ಎಚ್ ಡಿಟಿ ಜೊತೆಗೂಡಿ ಅಭಿವೃದ್ಧಿಪಡಿಸುತ್ತಿದೆ.

ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಅಮೆರಿಕದ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲಸಿಕೆ ಅಭಿವೃದ್ಧಿಗೊಳಿಸುತ್ತಿದ್ದು, ವೈದ್ಯಕೀಯ ಪ್ರಯೋಗ ನಡೆಯುತ್ತಿದೆ. ಡಾ. ರೆಡ್ಡಿ ಲ್ಯಾಬ್, ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನೂ ಪ್ರಯೋಗ ಮಾಡುತ್ತಿದೆ.
 ತುರ್ತು ಬಳಕೆಗೆ ಅರ್ಜಿ ಸಲ್ಲಿಸಿರುವ ಸಂಸ್ಥೆಗಳು

ತುರ್ತು ಬಳಕೆಗೆ ಅರ್ಜಿ ಸಲ್ಲಿಸಿರುವ ಸಂಸ್ಥೆಗಳು

ಭಾರತ್ ಬಯೋಟೆಕ್, ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಫೈಜರ್, ಕೇಂದ್ರ ಔಷಧ ನಿಯಂತ್ರಕಕ್ಕೆ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ. ಶುಕ್ರವಾರ ತಜ್ಞರ ಸಮಿತಿ ಪರಿಶೀಲನೆ ನಡೆಸಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ 'ಕೋವಿಶೀಲ್ಡ್' ಲಸಿಕೆಯ ಷರತ್ತುಬದ್ಧ ತುರ್ತು ಬಳಕೆಗೆ ಪರಿಣತರ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ.

English summary
Union minister Prakash Javadekar saturday said that India is perhaps the only country which is getting ready with four vaccines against Covid-19,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X