ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ಸಾರಿಯಿಂದ ಅಸಹಿಷ್ಣುತೆಯ ಭಜನೆ: ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು

|
Google Oneindia Kannada News

ನವದೆಹಲಿ, ಆಗಸ್ಟ್ 10: ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಭಾರತದಲ್ಲಿ ಇಂಟಾಲರೆನ್ಸ್ ಇದೆ ಎನ್ನುವ ಮೂಲಕ ಬೆಂಕಿ ಮುಚ್ಚಿದ ಕೆಂಡದಂತಿದ್ದ 'ಇಂಟಾಲರೆನ್ಸ್ ವಿವಾದ'ವನ್ನು ಮತ್ತೆ ಕೆದಕಿದ್ದಾರೆ.

ಕಳೆದ ವರ್ಷ ಇದೇ ಇಂಟಾಲರೆನ್ಸ್ ಎಂಬ ವಿಷಯವನ್ನಿಟ್ಟುಕೊಂಡು ಹಲವರು ಪ್ರತಿಭಟನೆ ನಡೆಸಿದ್ದರು, ತಮಗೆ ಸಿಕ್ಕ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಕ್ರಮೇಣ ಈ ವಿಷಯ ತಣ್ಣಗಾಗಿತ್ತು.

ಭಾರತ ಅಸಹಿಷ್ಣು ರಾಷ್ಟ್ರ: ನಿರ್ಗಮಿಸುವ ಮುನ್ನ ಅನ್ಸಾರಿ ವಿವಾದಾತ್ಮಕ ಹೇಳಿಕೆ!ಭಾರತ ಅಸಹಿಷ್ಣು ರಾಷ್ಟ್ರ: ನಿರ್ಗಮಿಸುವ ಮುನ್ನ ಅನ್ಸಾರಿ ವಿವಾದಾತ್ಮಕ ಹೇಳಿಕೆ!

ಆದರೆ ಇಂದು(ಆಗಸ್ಟ್ 10) ತಮ್ಮ ಹುದ್ದೆಯಿಂದ ನಿರ್ಗಮಿಸುತ್ತಿರುವ ಅನ್ಸಾರಿ ಅವರು ಇಂಥ ಹೇಳಿಕೆ ನೀಡಿದ್ದು ಸರಿಯೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. #hamidansari ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಹಲವಾರು ಟ್ವಿಟ್ಟರ್ ಗಳು ಹರಿದಾಡುತ್ತಿವೆ.

ಹಮಿದ್ ಅನ್ಸಾರಿಯವರನ್ನು ಸುತ್ತಿಕೊಂಡ ರಾಷ್ಟ್ರಗೀತೆ ವಿವಾದಹಮಿದ್ ಅನ್ಸಾರಿಯವರನ್ನು ಸುತ್ತಿಕೊಂಡ ರಾಷ್ಟ್ರಗೀತೆ ವಿವಾದ

ರಾಷ್ಟ್ರಗೀತೆಗೆ ಗೌರವ ಸೂಚಿಸುವುದು ಹೇಗೆಂಬುದೇ ಗೊತ್ತಲ್ಲದವರು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ ಎಂದು ಕೆಲವರು ಹಮಿದ್ ಅನ್ಸಾರಿಯವರ ಬಗ್ಗೆ ಕುಹಕವಾಡಿದ್ದಾರೆ. ಅಮೆರಿಕ ಗಣರಾಜ್ಯೋತ್ಸವದ ಸಮಯದಲ್ಲಿ ಭಾರತಕ್ಕೆ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಗಮಿಸಿದ್ದಾಗ, ಸಭೆಯೊಂದರಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದರೂ ಹಮಿದ್ ಅನ್ಸಾರಿ ರಾಷ್ಟ್ರಗೀತೆಗೆ ಗೌರವ ನೀಡದಿದ್ದುದು ವಿವಾದವಾಗಿತ್ತು.

ಅತ್ಯಂತ ಕೆಟ್ಟ ಉಪರಾಷ್ಟ್ರಪತಿ

ಈ ದೇಶ ಅವರಿಗೆ ಒಂದು ಉನ್ನತ ಹುದ್ದೆ ನೀಡಿದ್ದರೂ, ರಾಷ್ಟ್ರಗೀತೆಗೆ ಗೌರವಿಸುವುದನ್ನು ಕಲಿಯದ ಹಮಿದ್ ಅನ್ಸಾರಿ, ಈ ದೇಶಕಂಡ ಅತ್ಯಂತ ಕೆಟ್ಟ ರಾಜಕಾರಣಿ ಎಂದು ಚಿರಾಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಜಿಹಾದಿ ಬಣ್ಣ

ಭಾರತ ಅಸಹಿಷ್ಣು ಎನ್ನುವ ಮೂಲಕ ಅವರು ತಮ್ಮ ನಿಜವಾದ ಜಿಹಾದಿ ಬಣ್ಣವನ್ನು ತೋರಿಸಿದ್ದಾರೆ. ಅದು ಅವರ ಡಿಎನ್ ಎ ಯಲ್ಲಿಯೇ ಇದೆ ಎಂದು ಆಶಾ ಬಿಶ್ತ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ದಂಪತಿಗೆ ಶುಭವಾಗಲಿ!

ಯೋಗ ದಿನ ವಿರೋಧಿಸಿದ್ದು ಮತ್ತು ರಾಷ್ಟ್ರಗೀತೆಗೆ ಅಗೌರವ ಸೂಚಿಸಿದ್ದು ಹಮಿದ್ ಅನ್ಸಾರಿ ಅವರ ಹೆಗ್ಗಳಿಕೆಯಾದರೆ, ಅವರ ಪತ್ನಿ ತ್ರಿವಳಿ ತಲಾಕ್ ಅನ್ನು ಬೆಂಬಲಿಸುವ ಮೂಲಕ ಸುದ್ದಿಯಾಗಿದ್ದರು. ಇಬ್ಬರಿಗೂ ಶುಭವಾಗಲಿ! ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದವರು ಗೀತಿಕಾ ಸ್ವಾಮಿ.

ಕೋಮುಗಲಭೆಗೆ ಪ್ರಚೋದನೆ

ಭಾರತದಲ್ಲಿ ಮುಸ್ಲಿಮರು ಅಭದ್ರ ಭಾವದಿಂದ ಬಳಲುತ್ತಿದ್ದಾರೆ ಎಂಬ ಮಾತು ಖಂಡನೀಯ. ಇಂಥ ಹೇಳಿಕೆಗಳೇ ಕೋಮುಗಲಭೆಯನ್ನು ಉಂಟುಮಾಡುತ್ತವೆ ಎಂದು ಅಶ್ವಾನಿ ದುಬೆ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಜಸ್ವಂತ್ ಸಿಂಗ್

ಬಹುಶಃ ನಮ್ಮ ಸೈನಿಕರಿಂದ ಒಬ್ಬೊಬ್ಬರೇ ಭಯೋತ್ಪಾದಕರು ಹತ್ಯೆಯಾಗುತ್ತಿದ್ದಂತೆಯೇ ಅಭದ್ರತೆಯ ಭಾವ ಕೆಲವರನ್ನು ಕಾಡುವುದಕ್ಕೆ ಶುರುಮಾಡಿರಬೇಕು ಎಂದು ಜಸ್ವಂತ್ ಸಿಂಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
India is an intolerance country, many people feel insecurity here, vice president of India, Hamid Ansari told in an interview. His statement becomes a controversy now. Twitterians show their anger towards his statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X