ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 'ಗಂಭೀರ' ಪ್ರಕರಣಗಳಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತ

|
Google Oneindia Kannada News

ದೆಹಲಿ, ಜೂನ್ 9: ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಕೇಸ್ ಹೊಂದಿರುವ ಅಮೆರಿಕದಲ್ಲಿ 2,026,493 ಜನರಿಗೆ ಸೋಂಕು ತಗುಲಿದೆ. ಇದುವರೆಗೂ 113,055 ಜನರು ಮೃತಪಟ್ಟಿದ್ದಾರೆ. ಅಮೆರಿಕ ಬಿಟ್ಟರೆ ಬ್ರೆಜಿಲ್, ರಷ್ಯಾ ಹಾಗೂ ಭಾರತದಲ್ಲಿ ಪ್ರಸ್ತುತ ಕೊರೊನಾ ವೈರಸ್ ಅಟ್ಟಹಾಸ ಮಾಡುತ್ತಿದೆ.

ಆದರೆ, ಗಂಭೀರ ಪ್ರಕರಣಗಳ ವಿಚಾರದಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತವಿದೆ ಎನ್ನುವುದು ಆಘಾತಕಾರಿ ಸಂಗತಿ. ಯುಎಸ್‌ನಲ್ಲಿ 1,139,958 ಕೇಸ್‌ಗಳು ಸಕ್ತಿಯವಾಗಿದೆ. ಅದರಲ್ಲಿ 16,907 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಯುಎಸ್‌ನಲ್ಲಿ ಸಮಾಧಾನ ತಂದ ಜೂನ್ 8ರ ಕೊವಿಡ್ ವರದಿಯುಎಸ್‌ನಲ್ಲಿ ಸಮಾಧಾನ ತಂದ ಜೂನ್ 8ರ ಕೊವಿಡ್ ವರದಿ

ಭಾರತದಲ್ಲಿ ಒಟ್ಟು 2,56,611 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ 129,095ಕ್ಕೆ ಅಧಿಕ ಕೇಸ್‌ಗಳು ಸಕ್ರಿಯವಾಗಿದ್ದು, ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಪೈಕಿ 8,944 ಪ್ರಕರಣಗಳ ಆರೋಗ್ಯ ಸ್ಥಿತಿ ಗಂಭೀರ ಎಂದು ಪರಿಗಣಿಸಲಾಗಿದೆ.

India has highest number of serious coronavirus cases after America

ಅಮೆರಿಕ ಬಿಟ್ಟರೆ ಭಾರತದಲ್ಲಿ ಅತಿ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿದೆ. ನಂತರದ ಸ್ಥಾನದಲ್ಲಿ ಬ್ರೆಜಿಲ್‌ ದೇಶವಿದೆ. ಬ್ರೆಜಿಲ್‌ನಲ್ಲಿ 710,887 ಸೋಂಕು ಪತ್ತೆಯಾಗಿದೆ. ಇನ್ನೂ 325,602 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 8,318 ಕೇಸ್‌ಗಳು ಗಂಭೀರ ಎಂದು ವರ್ಗೀಕರಿಸಲಾಗಿದೆ.

ಅಮೆರಿಕದಲ್ಲಿ ಈವರೆಗೂ 113,055 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಯುಕೆಯಲ್ಲಿ 40,597 ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನಲ್ಲಿ 37,312 ಜನರಿ ಬಲಿಯಾಗಿದ್ದಾರೆ. ಇಟಲಿಯಲ್ಲಿ 33,964 ಜನರು ಮೃತಪಟ್ಟಿದ್ದಾರೆ. ಸ್ಪೇನ್ ದೇಶದಲ್ಲಿ 27,136 ಜನರು ಸಾವನ್ನಪ್ಪಿದ್ದರೆ, ಭಾರತದಲ್ಲಿ 7135 ಮಂದಿ ಪ್ರಾಣಕಳೆದುಕೊಂಡಿದ್ದಾರೆ.

English summary
India has highest number of serious coronavirus cases after United States America. US has 16,907 patients in serious condition and india have 8,944 patients in serious condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X