• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ಮೋದಿಯವರ ಕೆಟ್ಟ ನೀತಿಗಳಿಂದ ದೇಶದ ಆರ್ಥಿಕತೆಗೆ ಧಕ್ಕೆ: ರಾಹುಲ್

|

ನವದೆಹಲಿ, ನವೆಂಬರ್ 12: ಪ್ರಧಾನಿ ನರೇಂದ್ರ ಮೋಇಯವರ ನೀತಿಗಳಿಂದಾಗಿ ದೇಶದಲ್ಲಿ ಜಿಡಿಪಿ ಇಷ್ಟೊಂದು ಕುಸಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ದೇಶದ ಆರ್ಥಿಕ ಸ್ಥಿತಿ, ಜಿಡಿಪಿ ಕುಸಿತ ಕುರಿತು ಮತ್ತೆ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿಯವರ ವಿರುದ್ಧ ಗುಡುಗಿದ್ದಾರೆ.

ಕೇಂದ್ರದ ತಲೆಬಾಗುವ ನಡೆ ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು: ರಾಹುಲ್ ಗಾಂಧಿ ಕೇಂದ್ರದ ತಲೆಬಾಗುವ ನಡೆ ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು: ರಾಹುಲ್ ಗಾಂಧಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವರದಿಯಲ್ಲಿ ದೇಶದ ಜಿಡಿಪಿ ಶೇಕಡಾ 8.6ರಷ್ಟು ಕುಸಿದಿದೆ, ದೇಶದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಸತತ ಎರಡನೇ ಬಾರಿ ಕುಸಿತ ಕಾಣುತ್ತಿದೆ ಎಂದು ತೋರಿಸಿತ್ತು. ಆ ಅವಧಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೀತಿಗಳಿಂದಾಗಿ ದೇಶದ ಇತಿಹಾಸದಲ್ಲಿ ಜಿಡಿಪಿ ಇಷ್ಟೊಂದು ಪ್ರಮಾಣದಲ್ಲಿ ಕುಸಿದಿದೆ, ಮೋದಿಯವರ ನೀತಿಗಳಿಂದಾಗಿ ದೇಶದ ಶಕ್ತಿ ದೌರ್ಬಲ್ಯದತ್ತ ಸಾಗುತ್ತಿದೆ ಎಂದು ಆರೋಪಿಸಿದರು.

ಕೆಲವು ದಿನಗಳ ಹಿಂದಷ್ಟೇ ರಾಹುಲ್ ಟ್ವೀಟ್ ಮಾಡಿ, ನೆರೆಯ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತದ ತಲಾ ಜಿಡಿಯ ಮಟ್ಟಕ್ಕೆ ತಲುಪುತ್ತಿದೆ ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ವರದಿಗಳನ್ನು ಉಲ್ಲೇಖಿಸಿಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕಳೆದ ಆರು ವರ್ಷಗಳ ಬಿಜೆಪಿ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಣಾಮವಾಗಿ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕಲು ಸಿದ್ಧವಾಗಿದೆ ಎಂದು ಕಿಡಿಕಾರಿದ್ದರು. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಿಶ್ವ ಆರ್ಥಿಕ ದೃಷ್ಟಿಕೋನದ ವರದಿಯನ್ನು ಉಲ್ಲೇಖಿಸಿ ರಾಹುಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತದ ಪ್ರಮಾಣಕ್ಕೆ ತಲುಪುತ್ತಿರುವುದನ್ನು ಸೂಚಿಸುವ ಗ್ರಾಫ್ ಅನ್ನು ಪೋಸ್ಟ್ ಮಾಡಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಭಾರತೀಯ ಆರ್ಥಿಕತೆಯು ಈ ವರ್ಷ ಶೇಕಡಾ 10.3 ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಐಎಂಎಫ್ ಹೇಳಿತ್ತು.

ಆದರೆ, ಭಾರತವು 2021ರಲ್ಲಿ ಶೇಕಡಾ 8.8 ರಷ್ಟು ಬೆಳವಣಿಗೆಯ ದರವನ್ನು ಹಿಮ್ಮೆಟ್ಟಿಸುವ ಸಾಧ್ಯತೆಯಿದ್ದು, ತಮ್ಮ ಆರ್ಥಿಕತೆಯ ಸ್ಥಾನವನ್ನು ಮರಳಿ ಪಡೆಯುತ್ತದೆ. ಇದು ಚೀನಾದ ನಿರೀಕ್ಷಿತ ಬೆಳವಣಿಗೆಯ ದರವನ್ನು ಶೇ.8.2 ಅನ್ನು ಮೀರಿಸುತ್ತದೆ ಎಂದು ಐಎಂಎಫ್ ತನ್ನ ಇತ್ತೀಚಿನ 'ವಿಶ್ವ ಆರ್ಥಿಕ' ಔಟ್ ಲುಕ್ ವರದಿಯಲ್ಲಿ ತಿಳಿಸಿದೆ.

English summary
Congress leader Rahul Gandhi targeted the Modi government on Thursday over the state of the economy, saying the country has entered a recession for the first time in history due to the policies of Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X