ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಪಾಕ್ ರಾಜತಾಂತ್ರಿಕರಿಗೆ ಆಹ್ವಾನ

|
Google Oneindia Kannada News

ನವದೆಹಲಿ, ಫೆಬ್ರವರಿ.03: ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳಿಗೆ ಕೊರೊನಾವೈರಸ್ ಲಸಿಕೆ ಪಡೆಯುವಂತೆ ಭಾರತವು ಆಹ್ವಾನ ನೀಡಿದೆ. ದೇಶದಲ್ಲಿ ಎಲ್ಲ ರಾಷ್ಟ್ರಗಳ ರಾಯಭಾರಿ ಮತ್ತು ರಾಜತಾಂತ್ರಿಕ ಸಿಬ್ಬಂದಿಗೆ ಕೊವಿಡ್-19 ಲಸಿಕೆ ನೀಡಲಾಗುತ್ತಿದೆ.

ಭಾರತದಲ್ಲಿ ನಡೆಯುತ್ತಿರುವ ಕೊರೊನಾವೈರಸ್ ಲಸಿಕೆ ಅಭಿಯಾನದಲ್ಲಿ ಪಾಕಿಸ್ತಾನದ ರಾಜತಾಂತ್ರಿಕರು ಭಾಗವಹಿಸಬೇಕೇ, ಬೇಡವೇ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಒಂದು ವೇಳೆ ಭಾಗವಹಿಸಿದ್ದಲ್ಲಿ ಪಾಕ್ ರಾಜತಾಂತ್ರಿಕ ಅಧಿಕಾರಿಗಳಿಗೂ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತದೆ.

ದುಬಾರಿ ದುನಿಯಾ: ಸಕ್ಕರೆ, ಬೇಳೆ-ಕಾಳು ಬೆಲೆ ಏರಿಕೆಗೆ ಕಂಟೇನರ್ ಕಾರಣ!?ದುಬಾರಿ ದುನಿಯಾ: ಸಕ್ಕರೆ, ಬೇಳೆ-ಕಾಳು ಬೆಲೆ ಏರಿಕೆಗೆ ಕಂಟೇನರ್ ಕಾರಣ!?

ಕೊರೊನಾವೈರಸ್ ಬಿಕ್ಕಟ್ಟು ಮತ್ತು ಲಸಿಕೆ ಕುರಿತಾಗಿ ಈ ಹಿಂದೆ ಭಾರತವು ತನ್ನ ರಾಜತಾಂತ್ರಿಕರನ್ನು ಸಂಪರ್ಕಿಸಿತ್ತು. ಕಳೆದ ಡಿಸೆಂಬರ್ ನಲ್ಲಿ 50 ಮಂದಿ ವಿದೇಶಿ ರಾಯಭಾರಿಗಳನ್ನು ಹೈದ್ರಾಬಾದ್ ನಲ್ಲಿರುವ ಭಾರತ್ ಬಯೋಟೆಕ್ ಮತ್ತು ಬಯೋಲಾಜಿಕಲ್-ಇ ಕಂಪನಿಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಕೊರೊನಾವೈರಸ್ ಲಸಿಕೆ ಕುರಿತು ನಡೆಯುತ್ತಿರುವ ಸಂಶೋಧನೆ, ವೈದ್ಯಕೀಯ ಪ್ರಯೋಗ ಮತ್ತು ಲಸಿಕೆ ಉತ್ಪಾದನೆ ಕುರಿತು ಮಾಹಿತಿ ನೀಡಲಾಗಿತ್ತು.

India Govt Invites Pakistani Diplomats For Coronavirus Vaccination

ಕೊವಿಡ್-19 ಬಿಕ್ಕಟ್ಟು ಎದುರಿಸುವ ಬಗ್ಗೆ ಚರ್ಚೆ:

ಕಳೆದ ನವೆಂಬರ್ ತಿಂಗಳಿನಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಕೊರೊನಾವೈರಸ್ ಬಿಕ್ಕಟ್ಟು ನಿವಾರಣೆ ಬಗ್ಗೆ ಚರ್ಚೆ ನಡೆಸಲಾಗಿತ್ತು. 190 ರಾಜತಾಂತ್ರಿಕ ಸಿಬ್ಬಂದಿಯ ಜೊತೆಗೆ ಕೊವಿಡ್-19 ಲಸಿಕೆಯ ಕಾರ್ಯಾಚರಣೆ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷಾ ಶಿಗ್ಲಾ ಮಾತುಕತೆ ನಡೆಸಿದ್ದರು.

ಕಳೆದ ಜನವರಿ.16ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊವಿಡ್-19 ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ 41,20,741 ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.

English summary
India Govt Invites Pakistani Diplomats For Coronavirus Vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X