ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಟೀಕಿಸಿದ್ದ ಟ್ರಂಫ್‌ಗೆ ತಿರುಗೇಟು ನೀಡಿದ ಭಾರತ

|
Google Oneindia Kannada News

Recommended Video

ಟ್ರಂಪ್ ಗೆ ಟಾಂಗ್ ಕೊಟ್ಟ ಭಾರತ..! | Oneindia Kannada

ನವದೆಹಲಿ, ಜನವರಿ 03: ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾನಪನೆಗೆ ಭಾರತ ಮಾಡುತ್ತಿರುವ ಯತ್ನಗಳನ್ನು ಟೀಕಸಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸರ್ಕಾರವು ತಿರುಗೇಟು ನೀಡಿದೆ.

ಅಫ್ಗಾನಿಸ್ತಾನದಲ್ಲಿ ಗ್ರಂಥಾಲಯ ಕಟ್ಟಲು ಮೋದಿ ಅನುದಾನ ಕೊಟ್ಟಿದ್ದಾರೆ. ಅಲ್ಲಿ ನಿರ್ಮಿಸಲಾಗುವ ಗ್ರಂಥಾಲಯವನ್ನು ಯಾರು ಬಳಸುತ್ತಾರೆ ಎಂದು ವಾಷಿಂಗ್ಟನ್‌ನಲ್ಲಿ ಟ್ರಂಪ್‌ ಭಾರತದ ಶಾಂತಿ ಸ್ಥಾಪನೆ ಯತ್ನಗಳನ್ನು ಗೇಲಿ ಮಾಡಿದ್ದರು.

ಅಫ್ಘಾನಿಸ್ತಾನದಲ್ಲಿ ಲೈಬ್ರರಿಗೆ ಅನುದಾನ; ಮೋದಿಯನ್ನು ಗೇಲಿ ಮಾಡಿದ ಟ್ರಂಪ್ಅಫ್ಘಾನಿಸ್ತಾನದಲ್ಲಿ ಲೈಬ್ರರಿಗೆ ಅನುದಾನ; ಮೋದಿಯನ್ನು ಗೇಲಿ ಮಾಡಿದ ಟ್ರಂಪ್

ಇದಕ್ಕೆ ಉತ್ತರಿಸಿರುವ ಭಾರತ ಸರ್ಕಾರ, 'ಮಾನವ ಜೀವನ ಬದಲಾವಣೆ ಮತ್ತು ಅಭಿವೃದ್ಧಿಗೆ ಭಾರತವು ಸದಾ ಸಹಾಯ ಮಾಡುತ್ತದೆ, ಅಂತೆಯೇ ಯುದ್ಧ ಪೀಡಿತ ಅಫ್ಗಾನಿಸ್ತಾನಕ್ಕೆ ಸಹಾಯ ಮಾಡಿದೆ' ಎಂದು ಹೇಳಿದೆ.

India gives response to Trump for his dig at Modi

'ಅಫ್ಗಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಿಸಿದ್ದೇವೆ ಎಂದು ಮತ್ತೆ -ಮತ್ತೆ ಮೋದಿ ಹೇಳಿದರು, 'ಅಫ್ಗಾನಿಸ್ತಾನದಲ್ಲಿ ಭಾರತ ನಿರ್ಮಿಸಿರುವ ಗ್ರಂಥಾಲಯವನ್ನು ಯಾರು ಬಳಸುತ್ತಾರೋ ಗೊತ್ತಿಲ್ಲ, ಆದರೆ ಗ್ರಂಥಾಲಯ ನಿರ್ಮಿಸಿರುವುದಕ್ಕೆ ಧನ್ಯವಾದ ಹೇಳಬೇಕಾಯಿತು' ಎಂದು ಟ್ರಂಫ್‌ ವ್ಯಂಗ್ಯವಾಡಿದ್ದರು.

ಪಾಕ್ ಜೊತೆ ಮತ್ತೆ ಕುಚಿಕು ಕುಚಿಕು? ಟ್ರಂಪ್ ಸಿಡಿಸಿದ ಹೊಸ ಬಾಂಬ್! ಪಾಕ್ ಜೊತೆ ಮತ್ತೆ ಕುಚಿಕು ಕುಚಿಕು? ಟ್ರಂಪ್ ಸಿಡಿಸಿದ ಹೊಸ ಬಾಂಬ್!

ಟ್ರಂಫ್ ವ್ಯಂಗ್ಯಕ್ಕೆ ಉತ್ತರಿಸಿರುವ ವಿದೇಶಾಂಗ ಇಲಾಖೆ, ಭಾರತವು ಶಾಂತಿ ದಳವನ್ನು ಕಳುಹಿಸಿರುವುದು ವಿಶ್ವಸಂಸ್ಥೆಯ ಸೂಚನೆ ಹಾಗೂ ದೇಶದ ಹೊಣೆಗಾರಿಕೆ ಅನುಸಾರ ಎಂದು ಹೇಳಿದೆ.

ಅಮೆರಿಕದಲ್ಲಿ ಸರಕಾರದ 'ಅಂಗಡಿ' ಭಾಗಶಃ ಬಂದ್, ಎಲ್ಲ ಟ್ರಂಪ್ ಮಹಿಮೆ! ಅಮೆರಿಕದಲ್ಲಿ ಸರಕಾರದ 'ಅಂಗಡಿ' ಭಾಗಶಃ ಬಂದ್, ಎಲ್ಲ ಟ್ರಂಪ್ ಮಹಿಮೆ!

ಅಷ್ಟೆ ಅಲ್ಲದೆ ಭಾರತ, ಪಾಕಿಸ್ತಾನ, ರಷ್ಯಾ, ಚೀನಾ, ಶ್ರೀಲಂಕಾಗಳು ಅಫ್ಗಾನಿಸ್ತಾನದ ಭದ್ರತೆಯ ಜವಾಬ್ದಾರಿ ಹೊರುವಂತೆ ಅವರು ಮನವಿ ಮಾಡಿದ್ದಾರೆ.

English summary
America president Donald Trump took dig at Narendra Modi about building library in Afghanistan. Indian government replies to that and said 'India firmly believes in the critical role that developmental assistance can play in transforming human lives'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X