ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೊದಲು, ಕುಟುಂಬ ಆಮೇಲೆ: ಮೋದಿ ಬ್ಲಾಗ್ ನಲ್ಲಿ ಕಾಂಗ್ರೆಸ್ ಗೆ ಛಾಟಿ!

|
Google Oneindia Kannada News

Recommended Video

ತಮ್ಮ ಬ್ಲಾಗ್ ನಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನರೇಂದ್ರ ಮೋದಿ

ನವದೆಹಲಿ, ಮಾರ್ಚ್ 20: "ನನಗೆ ಭಾರತ ಮೊದಲು, ಕುಟುಂಬ ಆಮೇಲೆ" ಎಂದು ತಮ್ಮ ಬ್ಲಾಗಿನಲ್ಲಿ ಕಾಂಗ್ರೆಸ್ಸಿಗೆ ಛಾಟಿ ಏಟು ನೀಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಕಳೆದ ನಾಲ್ಕೂ ಮುಕ್ಕಾಲು ವರ್ಷಗಳಲ್ಲಿ ಎನ್ ಡಿಎ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನೂ ಬ್ಲಾಗಿನಲ್ಲಿ ಉಲ್ಲೇಖಿಸಿರುವ ಮೋದಿ ಜನರು ಎಚ್ಚರಿಕೆಯಿಂದ ಮತಚಲಾಯಿಸಬೇಕು ಎಂದಿದ್ದಾರೆ.

ಮೋದಿಗೆ ಪರ್ಯಾಯ ನಾಯಕನಾಗುವ ಆಸೆ ಇಲ್ಲ: ಗಡ್ಕರಿ ಸ್ಪಷ್ಟನೆಮೋದಿಗೆ ಪರ್ಯಾಯ ನಾಯಕನಾಗುವ ಆಸೆ ಇಲ್ಲ: ಗಡ್ಕರಿ ಸ್ಪಷ್ಟನೆ

ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು, ಬಿಜೆಪಿಯಲ್ಲ, ಕಾಂಗ್ರೆಸ್. ನೀವು ಮತ ಚಲಾಯಿಸುವ ಮೊದಲು ಯೋಚಿಸಿ, ಹೇಗೆ ಒಂದು ಕುಟುಂಬದ ಅಧಿಕಾರದ ದಾಹ ಇಡೀ ದೇಶದ ಹಿತಾಸಕ್ತಿಯನ್ನೂ ಬಲಿಕೊಟ್ಟಿದೆ ಎಂದು. ನಮ್ಮ ಸಂವಿಧಾನ ನೀಡಿದ ಅಮೂಲ್ಯ ಹಕ್ಕನ್ನು ಒಳಿತಿಗಾಗಿ ವಿನಿಯೋಗಿಸೋಣ ಎಂದು ಮೋದಿ ಮನವಿ ಮಾಡಿದ್ದಾರೆ.

ಅವರ ಬ್ಲಾಗಿನ ಆಯ್ದ ಕೆಲವು ಸಾಲುಗಳು ಇಲ್ಲಿವೆ....

ಜನರು ದೇಶದ ಭವಿಷ್ಯಕ್ಕಾಗಿ ಮತ ಹಾಕಿದ್ದರು!

ಜನರು ದೇಶದ ಭವಿಷ್ಯಕ್ಕಾಗಿ ಮತ ಹಾಕಿದ್ದರು!

2014 ರ ಬೇಸಿಗೆಯಲ್ಲಿ ಜನರು ನಿರ್ಣಾಯಕವಾಗಿ ಮತಚಲಾಯಿಸಿದ್ದರು...

ಆ ಮತ ಕುಟುಂಬ ರಾಜಕಾರಣದ ವಿರುದ್ಧ ಪ್ರಾಮಾಣಿಕತೆಗಾಗಿ, ಅನಭಿವೃದ್ಧಿಯಿಂದ ಅಭಿವೃದ್ಧಿಗಾಗಿ, ಅಭದ್ರತೆಯಿಂಡ ಭದ್ರತೆಗಾಗಿ, ಅಡೆತಡೆಗಳಿಂದ ಅವಕಾಶಕ್ಕಾಗಿ, ವೋಟ್ ಬ್ಯಾಂಕ್ ರಾಜಕಾರಣದಿಂದ ವಿಕಾಸಕ್ಕಾಗಿ ಚಲಾಯಿಸಿದ ಮತವಾಗಿತ್ತು. ಆ ಸಮಯದಲ್ಲಿ ದೇಶದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರ, ಸ್ವಜನಪಕ್ಷಪಾತವೇ ಕಂಡುಬಂದಿತ್ತು. ಆದರೆ ಭಾರತದ ಜನರು ಭೂತದ ತಪ್ಪುಗಳನ್ನು ಸರಿಮಾಡುವ ಸಲುವಾಗಿ, ಭಾರತದ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿದರು- ನರೇಂದ್ರ ಮೋದಿ

ನ್ಯೂಸ್ ನೇಷನ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೋದಿ ಬಲನ್ಯೂಸ್ ನೇಷನ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೋದಿ ಬಲ

ಮೊಟ್ಟ ಮೊದಲ ಸರ್ಕಾರ!

ಮೊಟ್ಟ ಮೊದಲ ಸರ್ಕಾರ!

ಕುಟುಂಬ ರಾಜಕಾರಣವಿಲ್ಲದ ಮೊಟ್ಟ ಮೊದಲ ಸರ್ಕಾರ ಭಾರತದಲ್ಲಿ 2014 ರಲ್ಲಿ ಸಂಪೂರ್ಣ ಬಹುಮತ ಪಡೆದು ಅಸ್ತಿತ್ವಕ್ಕೆ ಬಂದು. ಅದಕ್ಕೆಂದೇ ಅದು ಅತ್ಯಂತ ಮಹತ್ವದ್ದೆನ್ನಿಸಿತ್ತು. ಯಾವಾಗ ಸರ್ಕಾರವು ಕುಟುಂಬವಲ್ಲ, ನನಗೆ ದೇಶ ಮೊದಲು ಎಂಬಂತೆ ಕೆಲಸ ಮಾಡುತ್ತದೋ, ಆಗ ಆ ಸರ್ಕಾರ ಕೆಲಸ ಮಾಡುತ್ತಿದೆ ಎಂದರ್ಥ! ಕಳೆದ ಐದು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯತ್ತ ಇಡೀ ವಿಶ್ವದ ಕಣ್ಣೂ ನೆಟ್ಟಿರುವುದೇ ಅದಕ್ಕೆ ಸಾಕ್ಷಿ!- ನರೇಂದ್ರ ಮೋದಿ

ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ

ಕುಟುಂಬ ರಾಜಕಾರಣ ಹೆಚ್ಚಾದರೆ...

ಕುಟುಂಬ ರಾಜಕಾರಣ ಹೆಚ್ಚಾದರೆ...

ಯಾವಾಗ ಕುಟುಂಬ ರಾಜಕಾರಣದ ಹಾವಳಿ ಹೆಚ್ಚುತ್ತದೋ ಆಗ ದೇಶದ ಸಾಂವಿಧಾನಿಕ ಸಂಸ್ಥೆಗಳು ನೆಲೆ ಕಳೆದುಕೊಳ್ಳುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ನಮ್ಮ ಸರ್ಕಾರದ ಸಾಧನೆಗಳನ್ನು ನೋಡಿದಾಗ, ನಾವು ಸಾಂವಿಧಾನಿಕ ಸಂಸ್ಥೆಗಳನ್ನು ಎಲ್ಲದಕ್ಕಿಂತ ಉನ್ನತ ಸ್ಥಾನದಲ್ಲಿಟ್ಟಿರುವುದು ತಿಳಿದುಬರುತ್ತದೆ.- ನರೇಂದ್ರ ಮೋದಿ

ಅಭಿವ್ಯಕ್ತಿ ಸ್ವಾತಂತ್ರ್ಯ

ಅಭಿವ್ಯಕ್ತಿ ಸ್ವಾತಂತ್ರ್ಯ

ಕುಟುಂಬ ರಾಜಕಾರಣದ ಪಕ್ಷಗಳು ಎಂದಿಗೂ ಮಾಧ್ಯಮಗಳಿಗೆ ತೆರೆದುಕೊಳ್ಳುವುದಿಲ್ಲ. ಮಾಧ್ಯಮದ ಸ್ವಾತಂತ್ರ್ಯವನ್ನು ಕಸಿವ ಹಲವು ನಿರ್ಣಯಗಳನ್ನು ತೆಗೆದುಕೊಂಡಿತ್ತು. ಯುಪಿಎ ಯ ಪ್ರಬಾವಿ ಸಚಿವರೊಬ್ಬರ ಮಗನ ವಿರುದ್ಧ ಮಾಡಿದ ಟ್ವೀಟ್ ನಿಂದಾಗಿ ಟ್ವೀಟ್ ಮಾಡಿದಾತ ಜೈಲಿಗೆ ಹೋಗಬೇಕಾಯ್ತು! ಇತ್ತೀಚೆಗಷ್ಟೇ ಕರ್ನಾಟಕದಲ್ಲೂ ಕೆಲವು ಯುವಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಕಳಿಸಲಾಯ್ತು. ಇಲ್ಲೂ ಕಾಂಗ್ರೆಸ್ ಅಧಿಕಾರವನ್ನು ಹಂಚಿಕೊಂಡಿದೆ!- ನರೇಂದ್ರ ಮೋದಿ

ಯೋಚಿಸಿ ಮತಹಾಕಿ

ಯೋಚಿಸಿ ಮತಹಾಕಿ

ಪ್ರೆಸ್ ನಿಂದ ಪಾರ್ಲಿಮೆಂಟ್ ವರೆಗೆ, ಸೈನಿಕರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದವರೆಗೆ, ಸಂವಿಧಾನದೀಮದ ನ್ಯಾಯಾಲಯದವರೆಗೆ ಕಾಂಗ್ರೆಸ್ ಎಲ್ಲ ಸಂಸ್ಥೆಗಳನ್ನೂ ದುರುಪಯೋಗ ಪಡಿಸಿಕೊಂಡಿತ್ತು. ಕೇವಲ ಕಾಂಗ್ರೆಸ್ ಮಾತ್ರವೇ ಸರಿ, ಉಳಿದೆಲ್ಲವೂ ತಪ್ಪು ಎಂಬ ಸನ್ನಿವೇಶ ಸೃಷ್ಟಿಮಾಡಲಾಗಿತ್ತು. ನೀವು ಮತಚಲಾಯಿಸಲು ಹೋದಾಗ, ಮರೆಯದಿರಿ. ಹೇಗೆ ಒಂದು ಕುಟುಂಬ ತನ್ನ ಅಧಿಕಾರ ದಾಹಕ್ಕಾಗಿ ದೇಶದ ಹಿತಾಸಕ್ತಿಯನ್ನೇ ಬಲಿತೆಗೆದುಕೊಂಡಿತು ಎಂದು. ಎಚ್ಚರಿಕೆಯಿಂದ ಮತಹಾಕಿ ಸ್ವಾತಂತ್ರವದ ಆಶಯವನ್ನು ಉಳಿಸಿಕೊಳ್ಳಿ. ನಮ್ಮ ಸಂವಿಧಾನ ನೀಡಿದ ಅತ್ಯಮೂಲ್ಯ ಅವಕಾಶವನ್ನು ಬಳಸಿಕೊಂಡು ನಮ್ಮ ದದೇಶವನ್ನು ಬಲಾಡ್ಯ ಮಾಡೋಣ- ನರೇಂದ್ರ ಮೋದಿ

English summary
For me India is first not family frst, PM Narendra Modi writes in his blog and criticises dynasty politics of Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X