ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವು ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಕಾಪಾಡಲು ಬದ್ಧ

|
Google Oneindia Kannada News

ನವದೆಹಲಿ, ನವೆಂಬರ್ 05: ಭಾರತವು ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಾಷ್ಟ್ರೀಯ ರಕ್ಷಣಾ ಕಾಲೇಜು ಆಯೋಜಿಸಿದ್ದ ವರ್ಚುವಲ್ ವಿಚಾರ ಸಂಕಿರಣದಲ್ಲಿ ಮತನಾಡಿದ ರಾಜನಾಥ್ ಸಿಂಗ್ ಅವರು. ಏಕಪಕ್ಷೀಯತೆ ಮತ್ತು ಆಕ್ರಮಣಶೀಲತೆಯ ಹಿನ್ನೆಲೆಯಲ್ಲಿ ಭಾರತವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸಿದ್ಧ" ಎಂದು ಹೇಳಿದರು.

ಭಾರತದ 300 ಚದರ ಕಿ.ಮೀ ಭೂಭಾಗ ಆಕ್ರಮಿಸಿಕೊಂಡ ಚೀನಾ ಭಾರತದ 300 ಚದರ ಕಿ.ಮೀ ಭೂಭಾಗ ಆಕ್ರಮಿಸಿಕೊಂಡ ಚೀನಾ

ಏಕಪಕ್ಷೀಯತೆ ಮತ್ತು ಆಕ್ರಮಣಶೀಲತೆಯ ಹಿನ್ನೆಲೆಯಲ್ಲಿ ಭಾರತ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.

India Determined To Protect Its Territorial Integrity

ಭಾರತವು ಶಾಂತಿ ಪ್ರಿಯ ದೇಶವಾಗಿದ್ದು, ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು ಎಂದು ರಕ್ಷಣಾ ಸಚಿವರು ಹೇಳಿದರು.ಮೇ 6 ರಿಂದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಆರಂಭವಾಗಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಗಮನಾರ್ಹವಾಗಿ ಬಿಗಡಾಯಿಸಿದೆ.

ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಭಾರತ ಬಯಸುತ್ತದೆ ಮತ್ತು ಗಡಿಯುದ್ದಕ್ಕೂ ಶಾಂತಿಯನ್ನು ಕಾಪಾಡಿಕೊಳ್ಳಲು ವಿವಿಧ ಒಪ್ಪಂದಗಳನ್ನು ಗೌರವಿಸಲು ಬದ್ಧವಾಗಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.

ಕಳೆದ ಬೇಸಿಗೆಯಲ್ಲಿ ಚೀನಾವು ಭಾರತದ 300 ಚದರ ಕಿ.ಮೀ ಜಾಗವನ್ನು ಆಕ್ರಮಿಸಿಕೊಂಡಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.

ಮ್ಯಾನ್‌ಹ್ಯಾಟನ್‌ಭಾಗದ ಐದು ಪಟ್ಟು ವ್ಯಾಪ್ತಿಯ ಭೂಭಾಗವನ್ನು ಚೀನಾ ಸೇನೆ ಆಕ್ರಮಿಸಿಕೊಂಡಿದೆ. ಹಿಮಾಲಯ ಪ್ರದೇಶದ ದೆಪ್ಸಾಂಗ್ ಪ್ಲೇನ್ಸ್‌ನ 250 ಚದರ ಕಿ.ಮೀ ಹಾಗೂ ಪ್ಯಾಂಗಾಂಗ್ ಸೋ ಭಾಗ 50 ಚದರ ಕಿಮೀ ಚೀನಾ ಸೇನೆ ಆಕ್ರಮಿಸಿದೆ.

1962ರ ಯುದ್ಧಧ ಬಳಿಕ ಚೀನಾ ಸೇನೆ ಈ ಭೂಪ್ರದೇಶಕ್ಕೆ ಕಾಲಿಟ್ಟಿರಲಿಲ್ಲ ಆದರೆ ಈ ಪ್ರದೇಶದಲ್ಲಿ ಚೀನಾವು ತನ್ನ ಸೇನಾ ನೆಲೆಯನ್ನು ನಿರ್ಮಿಸಿಕೊಂಡಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.

English summary
India is determined to protect its sovereignty and territorial integrity in the face of "unilateralism and aggression", Defence Minister Rajnath Singh said today, as the standoff with China in eastern Ladakh enters the seventh month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X