ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸಮುದಾಯ ಸೋಂಕು ಇಲ್ಲ: ಕೇಂದ್ರ ಸರ್ಕಾರದ ಪುನರುಚ್ಚಾರ

|
Google Oneindia Kannada News

ನವದೆಹಲಿ, ಜೂನ್ 11: ದೇಶದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಭಾರತದಲ್ಲಿ ಸಮುದಾಯ ಸೋಂಕು ಇಲ್ಲ ಎಂದೇ ವಾದಿಸುತ್ತಿದೆ.

Recommended Video

Modi addressed the nation for the first time after lockdown been lifted | Narendra Modi

ಈಗಾಗಲೇ ಕೊರೊನಾ ಸೋಂಕು ಮೂರನೇ ಹಂತ ತಲುಪಿದ್ದು, ಸೋಂಕಿನ ಮೂಲವನ್ನು ಪತ್ತೆಮಾಡಲು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ಕೊರೊನಾ ಆಕ್ಟೀವ್ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚುಭಾರತದಲ್ಲಿ ಕೊರೊನಾ ಆಕ್ಟೀವ್ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು

ಮುಂಬೈ ಹಾಗೂ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತಾರಕಕ್ಕೇರುತ್ತಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ತಿಳಿಸಿದೆ.

India Definitely Not In Community Transmission Centre Amid Spike In Virus Cases

ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ್ ಹೇಳುವ ಪ್ರಕಾರ ದೇಶದಲ್ಲಿರುವ ಜನಸಂಖ್ಯೆಯ ಶೇ.1 ರಷ್ಟು ಮಂದಿಗೆ ಸೋಂಕು ತಗುಲಿದೆ. ದೇಶದಲ್ಲಿ ಸತ್ಯವಾಗಲೂ ಸಮುದಾಯ ಸೋಂಕು ಇಲ್ಲ ಎಂದಿದ್ದಾರೆ.

ದೆಹಲಿ ಮತ್ತು ಮುಂಬೈನಗರಗಳಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸಮುದಾಯ ಸೋಂಕಿನ ಕುರಿತು ಊಹಾಪೋಹಗಳು ಹುಟ್ಟಿಕೊಂಡಿವೆ.ನಮಗೆ ಯಾರಿಂದ ಸೋಂಕು ತಗುಲಿದೆ ಎಂದು ತಿಳಿಯದ ಸಂದರ್ಭವನ್ನು ಸಮುದಾಯ ಸೋಂಕು ಎಂದು ಪರಿಗಣಿಸಲಾಗುತ್ತದೆ.

ಆದರೆ ಸಮುದಾಯ ಸೋಂಕು ಇದ್ದರೆ ಅದನ್ನು ಕೇಂದ್ರ ಸರ್ಕಾರವೇ ಘೋಷಣೆ ಮಾಡಬೇಕಾಗುತ್ತದೆ. ಆದರೆ ದೆಹಲಿಯಲ್ಲಿರುವ ಶೇ.50 ಪ್ರಕರಣಗಳಿಗೆ ಸೋಂಕಿನ ಮೂಲಗಳೇ ಗೊತ್ತಿಲ್ಲ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಸಿಂಗ್ ತಿಳಿಸಿದ್ದಾರೆ.

English summary
India is "definitely not" in the community transmission stage of the coronavirus pandemic, the government said today amid speculation over the past few days on the spike in cases in Mumbai and Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X