ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ದಿನದಲ್ಲಿ 50 ಲಕ್ಷ ಕೇಸ್ ಪತ್ತೆ, ವಿಶ್ವದ ಹನ್ನೊಂದನೇ ದೇಶ ಭಾರತ

|
Google Oneindia Kannada News

ದೆಹಲಿ, ಮೇ 19: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ನಿನ್ನೆ ಒಂದೇ ದಿನ 4970 ಕೇಸ್‌ಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 101139ಕ್ಕೆ ಏರಿಕೆಯಾಗಿದೆ. ಈ ಮೂಲಕ ಜಗತ್ತಿನಲ್ಲಿ ಒಂದು ಲಕ್ಷ ಕೊರೊನಾ ಕೇಸ್‌ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದೆ.

Recommended Video

ಲಟಿಕೆ ತೆಗೆಯೋದರಿಂದ ಏನೆಲ್ಲಾ ತೊಂದರೆಗಳು ಕಾಣಿಸಿಕೊಳ್ಳುತ್ತವೆ | Oneindia Kannada

ಜನವರಿಯಲ್ಲಿ ಮೊದಲ ಕೊರೊನಾ ಕೇಸ್‌ ಕೇರಳದಲ್ಲಿ ಪತ್ತೆಯಾಗಿತ್ತು. ಈ ಮಹಾಮಾರಿ ಭಾರತಕ್ಕೆ ವಕ್ಕರಿಸಿಕೊಂಡು ಸುಮಾರು ನಾಲ್ಕು ತಿಂಗಳು ಆಗುತ್ತಿದೆ. ಕಳೆದ ಹದಿನೈದು ದಿನದಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಮುಂದೆ ಓದಿ...

12 ದಿನಕ್ಕೆ 50 ಲಕ್ಷ ಕೇಸ್

12 ದಿನಕ್ಕೆ 50 ಲಕ್ಷ ಕೇಸ್

ಫೆಬ್ರವರಿ 15ಕ್ಕೆ ಭಾರತದಲ್ಲಿ ಕೇವಲ ಮೂರು ಕೇಸ್‌ ಮಾತ್ರ ಇತ್ತು. ಅಲ್ಲಿಂದ ಮೇ 6ರವರೆಗೂ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಕೇವಲ 49,391 ಮಾತ್ರ ಆಗಿತ್ತು. ಆದರೆ, ಅಲ್ಲಿಂದ 12 ದಿನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜಿಗಿತ ಕಂಡಿರುವ ಸೋಂಕು ಒಂದು ಲಕ್ಷ (101139) ಗಡಿದಾಟುವಂತೆ ಮಾಡಿದೆ.

ಭಾರತದಲ್ಲಿ 1,00,000ಕ್ಕೂ ಮೀರಿತು ಕೊರೊನಾ ಸೋಂಕಿತರ ಸಂಖ್ಯೆ!ಭಾರತದಲ್ಲಿ 1,00,000ಕ್ಕೂ ಮೀರಿತು ಕೊರೊನಾ ಸೋಂಕಿತರ ಸಂಖ್ಯೆ!

ಜಗತ್ತಿನಲ್ಲಿ 11ನೇ ದೇಶ ಭಾರತ

ಜಗತ್ತಿನಲ್ಲಿ 11ನೇ ದೇಶ ಭಾರತ

ಅತಿ ಹೆಚ್ಚು ಕೊರೊನಾ ವೈರಸ್‌ ಪ್ರಕರಣಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 11ನೇ ಸ್ಥಾನ. ಯುಎಸ್‌ನಲ್ಲಿ 1,550,294 ಪ್ರಕರಣ ದಾಖಲಾಗಿದೆ. ರಷ್ಯಾ (290,678), ಸ್ಪೇನ್ (278,188), ಬ್ರೆಜಿಲ್ (255,368), ಯುಕೆ (246,406), ಇಟಲಿ (225,886), ಫ್ರಾನ್ಸ್ (179,927), ಜರ್ಮನಿ (177,289), ಟರ್ಕಿ (150,593), ಇರಾನ್ (122,492) ದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸೋಂಕು ವರದಿಯಾಗಿದೆ.

ಗುಜರಾತ್ ಹಿಂದಿಕ್ಕಿದ ತಮಿಳುನಾಡು

ಗುಜರಾತ್ ಹಿಂದಿಕ್ಕಿದ ತಮಿಳುನಾಡು

ಏಪ್ರಿಲ್ ಅಂತ್ಯದವರೆಗೂ ದೇಶದಲ್ಲಿ ಕೊರೊನಾ ವೈರಸ್‌ ಹರಡುವಿಕೆ ನಿಯಂತ್ರಣದಲ್ಲಿತ್ತು. ಆದರೆ, ಮೇ ತಿಂಗಳ ಆರಂಭದಿಂದ ಹೊಸ ಕೇಸ್‌ಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಅದರಲ್ಲೂ ಮಹಾರಾಷ್ಟ್ರ (33 ಸಾವಿರ), ತಮಿಳುನಾಡು (11224), ಗುಜರಾತ್‌ನಲ್ಲಿ (11,380) ಕೊರೊನಾ ಹಾಟ್‌ಸ್ಪಾಟ್‌ ರಾಜ್ಯಗಳಾಗಿವೆ. ನಿನ್ನೆಯವರೆಗೂ ಮೂರನೇ ಸ್ಥಾನದಲ್ಲಿದ್ದ ತಮಿಳುನಾಡು, ಇಂದು ಗುಜರಾತ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದೆ.

ಹೊಸ ಕೇಸ್‌ಗಳಲ್ಲೂ ಭಾರತ ವೇಗ

ಹೊಸ ಕೇಸ್‌ಗಳಲ್ಲೂ ಭಾರತ ವೇಗ

ಪ್ರಸ್ತುತ ಫ್ರಾನ್ಸ್, ಯುಕೆ, ಜರ್ಮನಿ, ಸ್ಪೇನ್, ಇಟಲಿ ಅಂತಹ ರಾಷ್ಟ್ರಗಳಲ್ಲಿ ಹೊಸ ಕೇಸ್‌ಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ, ಭಾರತದಲ್ಲಿ ಈಗ ಏರಿಕೆಯಾಗುತ್ತಿದೆ. ಯುಎಸ್, ರಷ್ಯಾ, ಬ್ರೆಜಿಲ್ ನಂತರ ಭಾರತ ಅತಿ ಹೆಚ್ಚು ಹೊಸ ಕೇಸ್ ವರದಿ ಮಾಡುತ್ತಿದೆ. ಸದ್ಯ ಭಾರತದಲ್ಲಿ ಪ್ರತಿ ದಿನ 4.5 ರಿಂದ 5 ಸಾವಿರವರೆಗೂ ಪ್ರಕರಣಗಳು ದಾಖಲಾಗುತ್ತಿದೆ.

English summary
COVID19 cases cross 1 lakh mark with a single-day jump of 4970 cases & 134 deaths. now, India is the 11th country to reach 1 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X