ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕುರಿತು ಮೋದಿ ಸರ್ಕಾರಕ್ಕೆ ಬಲವಾದ ಎಚ್ಚರಿಕೆ ನೀಡಿದ ರಾಹುಲ್

|
Google Oneindia Kannada News

ದೆಹಲಿ, ಜುಲೈ 17: ಕೊರೊನಾ ವೈರಸ್ ಭಾರತದಲ್ಲಿ ಬಹುದೊಡ್ಡ ಸಮಸ್ಯೆ ಸೃಷ್ಟಿಸಲಿದೆ. ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿಯಲಿದೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾರ್ಚ್ ತಿಂಗಳಲ್ಲಿ ಎಚ್ಚರಿಕೆ ನೀಡಿದ್ದರು.

ಆದರೆ ರಾಹುಲ್ ಗಾಂಧಿ ಅವರು ಎಚ್ಚರಿಕೆಯನ್ನು ಆ ಸಮಯದಲ್ಲಿ ಗಂಭೀರವಾಗಿ ಪರಿಗಣಿಸಿಲ್ಲ. ಈಗ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಭಾರತದಲ್ಲಿ 10 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರುಭಾರತದಲ್ಲಿ 10 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು

ಕೊರೊನಾ ವೈರಸ್ ಸೋಂಕು ದೇಶದಲ್ಲಿ ವಿಪರೀತವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಂದಿನ 20 ದಿನ ಹೇಗಿರಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 10ರೊಳಗೆ ದೇಶದಲ್ಲಿ ಎಷ್ಟು ಕೊವಿಡ್ ಕೇಸ್ ಪತ್ತೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂದೆ ಓದಿ...

ಆಗಸ್ಟ್ 10ರೊಳಗೆ 20 ಲಕ್ಷ ಕೇಸ್!

ಆಗಸ್ಟ್ 10ರೊಳಗೆ 20 ಲಕ್ಷ ಕೇಸ್!

ಕೊರೊನಾ ವೈರಸ್ ಪ್ರಕರಣಗಳ ಏರಿಕೆ ಬಗ್ಗೆ ಶುಕ್ರವಾರ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ''ಈ ವಾರಾಂತ್ಯಕ್ಕೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಲಿದೆ. ಅದೇ ರೀತಿ ಆಗಸ್ಟ್ 10ರೊಳಗೆ ಅದರ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಲಿದೆ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು'' ಎಂದು ಒತ್ತಾಯಿಸಿದ್ದಾರೆ.

ಭಾರತದಲ್ಲಿ 10 ಲಕ್ಷ ಗಡಿ ದಾಟಿದೆ ಕೊರೊನಾ

ಭಾರತದಲ್ಲಿ 10 ಲಕ್ಷ ಗಡಿ ದಾಟಿದೆ ಕೊರೊನಾ

ಶುಕ್ರವಾರ ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ವರದಿಯಂತೆ ಭಾರತದಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಿದೆ. ಈ ಮೂಲಕ ಜಗತ್ತಿನಲ್ಲಿ ಹತ್ತು ಲಕ್ಷ ಕೊರೊನಾ ವೈರಸ್ ಕೇಸ್‌ಗಳನ್ನು ದಾಖಲಿಸಿದ ಮೂರನೇ ದೇಶ ಭಾರತ. ಇದಕ್ಕೂ ಮುಂಚೆ ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ 10 ಲಕ್ಷಕ್ಕೂ ಅಧಿಕ ಕೊವಿಡ್ ಪ್ರಕರಣಗಳು ವರದಿಯಾಗಿವೆ. ಅಲ್ಲಿಗೆ ರಾಹುಲ್ ಗಾಂಧಿ ಹೇಳಿದಂತೆ ಈ ವಾರದಲ್ಲಿ ಭಾರತದ ಹತ್ತು ಲಕ್ಷ ದಾಟಿದೆ.

IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!

ಒಂದೇ ದಿನಕ್ಕೆ 35 ಸಾವಿರ ಕೇಸ್

ಒಂದೇ ದಿನಕ್ಕೆ 35 ಸಾವಿರ ಕೇಸ್

ಗುರುವಾರ ಒಂದೇ ದಿನ ಭಾರತದಲ್ಲಿ 34,956 ಜನರಿಗೆ ಕೊರೊನಾ ದೃಢವಾಗಿದೆ. ಇದುವರೆಗೂ ದಿನವೊಂದರಲ್ಲಿ ವರದಿಯಾದ ಹೆಚ್ಚು ಸೋಂಕು ಇದಾಗಿದೆ. ದೇಶದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಒಟ್ಟು 25,602 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಸೆಪ್ಟೆಂಬರ್ 'ಪ್ರಮುಖ ಘಟ್ಟ'

ಸೆಪ್ಟೆಂಬರ್ 'ಪ್ರಮುಖ ಘಟ್ಟ'

ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಧ್ಯಯನ ತಂಡ ಹೇಳಿರುವ ಪ್ರಕಾರ, ಪ್ರಸ್ತುತ ಅಂಕಿ ಅಂಶಗಳ ಆಧಾರದಲ್ಲಿ ಸೆಪ್ಟೆಂಬರ್ ಆರಂಭದ ವೇಳೆಗೆ ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಕೊವಿಡ್ ಸೋಂಕಿತರು ವರದಿಯಾಗಲಿದ್ದಾರೆ. ಸೆಪ್ಟೆಂಬರ್ 1 ರ ವೇಳೆಗೆ ದೇಶವು ಒಟ್ಟು 20 ಲಕ್ಷ ಪ್ರಕರಣಗಳು, 4.75 ಲಕ್ಷ ಸಕ್ರಿಯ ಕೇಸ್ ಮತ್ತು 88,000 ಸಾವುಗಳ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ತಿಳಿಸಿದೆ. ಆದರೆ, ಭಾರತದಲ್ಲಿ ಸೋಂಕು ವಿಪರೀತವಾದರೆ ಮಾರ್ಚ್ ಅಂತ್ಯಕ್ಕೆ 6 ಕೋಟಿವರೆಗೂ ಕೇಸ್ ವರದಿಯಾಗಬಹುದು ಎಂದು ಐಐಎಸ್ ಎಚ್ಚರಿಕೆ ನೀಡಿದೆ.

English summary
Crossed the 10 lakh mark. If the COVID19 spreads with the same pace, then we will surpass 20 lakh cases by August 10 - Rahul Gandhi Warns to Central Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X