ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ಉಪಕರಣಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಭಾರತ ಬದ್ಧ: ಮೋದಿ

|
Google Oneindia Kannada News

ನವದೆಹಲಿ,ಫೆಬ್ರವರಿ 22: ರಕ್ಷಣಾ ಉಪಕರಣಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ದೇಶ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ಈಗ ಸಣ್ಣ ಶಸ್ತ್ರಾಸ್ತ್ರಗಳಿಗೂ ಭಾರತ ಬೇರೆ ದೇಶಗಳೆಡೆಗೆ ನೋಡುವ ಪರಿಸ್ಥಿತಿಯಲ್ಲಿದೆ, ಅತಿ ಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಇದೆ. ಇದು ಹೆಮ್ಮೆಯ ವಿಷಯವಲ್ಲ ಎಂದು ಮೋದಿ ಹೇಳಿದ್ದಾರೆ.

 ಮೋದಿ ಸರ್ಕಾರದ್ದು ಜನರ ಜೇಬು ಬರಿದು ಮಾಡುವ ಮಹತ್ತರ ಕೆಲಸ; ರಾಹುಲ್ ಟೀಕೆ ಮೋದಿ ಸರ್ಕಾರದ್ದು ಜನರ ಜೇಬು ಬರಿದು ಮಾಡುವ ಮಹತ್ತರ ಕೆಲಸ; ರಾಹುಲ್ ಟೀಕೆ

ಆದರೆ ಈಗ ಭಾರತ ಪರಿಸ್ಥಿತಿಯನ್ನು ಬದಲಾವಣೆ ಮಾಡಲು ಶ್ರಮಿಸುತ್ತಿದೆ. ಸಾಮರ್ಥ್ಯವನ್ನು ಹೆಚ್ಚಿಸಲು ಬದ್ಧತೆ ಪ್ರದರ್ಶಿಸುತ್ತಿದೆ. ಡಿಲೈಸೆನ್ಸಿಂಗ್, ಡಿರೆಗ್ಯುಲೇಷನ್, ರಫ್ತು ಉತ್ತೇಜನ, ವಿದೇಶಿ ಹೂಡಿಕೆ ಉದಾರೀಕರಣಗಳಂತಹ ಕ್ರಮಗಳು ರಕ್ಷಣಾ ಉತ್ಪಾದನಾ ಕ್ಷೇತ್ರವನ್ನು ಉತ್ತೇಜಿಸಲಿದೆ ಎಂದು ಮೋದಿ ಮಾಹಿತಿ ನೀಡಿದ್ದಾರೆ.

India Committed To Enhancing Capabilities In Defence Manufacturing: PM Modi

ಶಸ್ತ್ರಾಸ್ತ್ರ, ಸೇನಾ ಉಪಕರಣಗಳ ತಯಾರಿಕೆಯಲ್ಲಿ ಭಾರತಕ್ಕೆ ಅತ್ಯಂತ ಪುರಾತನ ಅನುಭವದ ಹಿನ್ನೆಲೆ ಇತ್ತು. ಆದರೆ ಕಾರಣಾಂತರಗಳಿಂದ ಈ ಸಾಮರ್ಥ್ಯದ ಬಲವರ್ಧನೆಯಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ಕೇಂದ್ರ ಬಜೆಟ್ ನ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ವೆಬಿನಾರ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತ್ವರಿತಗತಿಯಲ್ಲಿ ರಕ್ಷಣಾ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಭಾರತ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.

ಸ್ವಾತಂತ್ರ್ಯಕ್ಕೂ ಮುನ್ನ ಭಾರತದಲ್ಲಿ ಸೇನಾ ಉಪಕರಣಗಳನ್ನು ತಯಾರಿಸುವ ಕಾರ್ಖಾನೆಗಳಿದ್ದವು. ಎರಡೂ ವಿಶ್ವಯುದ್ಧದ ಸಂದರ್ಭದಲ್ಲಿ ಭಾರತದಿಂದ ಶಸ್ತ್ರಾಸ್ತ್ರಗಳು ಬೃಹತ್ ಪ್ರಮಾಣದಲ್ಲಿ ರಫ್ತಾಗಿತ್ತು. ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವು ಕಾರಣಗಳಿಂದಾಗಿ ಈ ಸಾಮರ್ಥ್ಯವನ್ನು ವೃದ್ಧಿಸಲು ಸಾಧ್ಯವಾಗಲಿಲ್ಲ ಎಂದು ಮೋದಿ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಪ್ರತಿಭೆ ಅಥವಾ ಸಾಮರ್ಥ್ಯದ ಕೊರತೆ ಇಲ್ಲ.

ಕೊರೊನಾ ಅವಧಿಗೂ ಮುನ್ನ ಭಾರತ ಹೆಚ್ಚಿನ ಪ್ರಮಾಣದಲ್ಲಿ ವೆಂಟಿಲೇಟರ್ ಗಳನ್ನು ತಯಾರಿಸುತ್ತಿರಲಿಲ್ಲ ಆದರೆ ಈಗ ಸಾವಿರಾರು ವೆಂಟಿಲೇಟರ್ ಗಳನ್ನು ತಯಾರಿಸುತ್ತಿದೆ. ಮಂಗಳನ ಕಕ್ಷೆಯನ್ನು ತಲುಪಲು ಸಾಧ್ಯವಾದ ಭಾರತಕ್ಕೆ ಆಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವುದೂ ಸಾಧ್ಯವಿತ್ತು. ಆದರೆ ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಸುಲಭದ ಮಾರ್ಗವಾಯಿತು ಎಂದು ಮೋದಿ ಹೇಳಿದ್ದಾರೆ.

English summary
India had an age-old experience in making arms and military equipment but after Independence this capacity was not strengthened, Prime Minister Narendra Modi said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X