ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಭಾರತೀಯ ಸೈನಿಕರ ಶೌರ್ಯವನ್ನು ಎಂದಿಗೂ ಮರೆಯಲ್ಲ: ಅಮೆರಿಕಾ

|
Google Oneindia Kannada News

ನವದೆಹಲಿ, ಜೂನ್ 19: ಪೂರ್ವ ಲಡಾಕ್‌ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರ ಮುಖಾಮುಖಿಯಲ್ಲಿ ನಡೆದ ಹಿಂಸಾತ್ಮಕ ಘಟನೆಯಲ್ಲಿ ಕೊಲ್ಲಲ್ಪಟ್ಟ ಭಾರತೀಯ ಸೈನಿಕರ ಸಾವಿಗೆ ಅಮೆರಿಕಾ ಶುಕ್ರವಾರ ಸಂತಾಪ ಸೂಚಿಸಿದೆ ಮತ್ತು ಅವರ ಧೈರ್ಯವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಹೇಳಿದೆ.

Recommended Video

ಕೊರೋನಾ ಸೋಂಕಿತರಲ್ಲಿ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗ್ತಿರೋದು ಯಾಕೆ? | Oneindia Kannada

ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದು ಐದು ದಶಕಗಳಲ್ಲಿ ನಡೆದ ಅತಿದೊಡ್ಡ ಮಿಲಿಟರಿ ಮುಖಾಮುಖಿಯಾಗಿದೆ.

ಭಾರತೀಯ ಯೋಧರ ಮೇಲೆ ಹಲ್ಲೆಗೆ ಬಳಸಿದ ಆಯುಧ ಭಯಂಕರ!ಭಾರತೀಯ ಯೋಧರ ಮೇಲೆ ಹಲ್ಲೆಗೆ ಬಳಸಿದ ಆಯುಧ ಭಯಂಕರ!

"ಭಾರತದಲ್ಲಿನ ಯುಎಸ್ ಮಿಷನ್ ಗಾಲ್ವಾನ್‌ನಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ಕಳುಹಿಸುತ್ತದೆ. ಅವರ ಧೈರ್ಯವನ್ನು ಮರೆಯಲಾಗುವುದಿಲ್ಲ" ಎಂದು ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಟ್ವೀಟ್ ಮಾಡಿದ್ದಾರೆ.

India-China Fight: Bravery Of Indian Soldiers Killed In Galwan Valley Will Not Be Forgotten Says US

ಜೊತೆಗೆ ಇಲ್ಲಿನ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಸೈನಿಕರ ಸಾವಿನ ಬಗ್ಗೆ ಭಾರತಕ್ಕೆ ಸಂತಾಪ ಸೂಚಿಸಿದ್ದಾರೆ.

"ಕಳೆದ ಕೆಲವು ದಿನಗಳಿಂದ ಕರ್ತವ್ಯದ ಸಾಲಿನಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭಾರತೀಯ ಸೈನಿಕರ ಶೋಕ ಕುಟುಂಬಗಳಿಗೆ ಭಾರತದ ಜನರಿಗೆ ನಮ್ಮ ಹೃತ್ಪೂರ್ವಕ ಸಂತಾಪ" ಎಂದು ಲೆನೈನ್ ಟ್ವೀಟ್ ಮಾಡಿದ್ದಾರೆ.

Fake: Tik Tok ಸೇರಿದಂತೆ ಚೀನಿ App Remove ಮಾಡಿ: ಸರ್ಕಾರFake: Tik Tok ಸೇರಿದಂತೆ ಚೀನಿ App Remove ಮಾಡಿ: ಸರ್ಕಾರ

ಭಾರತದ ಪರ 20 ಸೈನಿಕರು ಹುತಾತ್ಮರಾಗಿದ್ದು, ಚೀನಾದ ಕಡೆಯ ಘರ್ಷಣೆಯಿಂದ ಸಂಭವಿಸಿದ ಸಾವು-ನೋವು ಇನ್ನೂ ತಿಳಿದುಬಂದಿಲ್ಲ.

English summary
The US on Friday condoled the death of Indian soldiers, killed in a violent face-off with Chinese troops in eastern Ladakh, and said their bravery will not be forgotten.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X