ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾಗೆ ಹೊರಗಿನವರ ಸಹಾಯ ಬೇಡ- ರಷ್ಯಾ ಸಚಿವ

|
Google Oneindia Kannada News

ದೆಹಲಿ, ಜೂನ್ 23: ಚೀನಾ ಮತ್ತು ಭಾರತದ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ''ಎರಡೂ ರಾಷ್ಟ್ರಗಳಿಗೂ ಹೊರಗಿನವರ ಸಹಾಯ ಬೇಕು ಎಂದು ನನಗೆ ಅನಿಸುತ್ತಿಲ್ಲ'' ಎಂದು ರಷ್ಯಾ ಸಚಿವ ತಿಳಿಸಿದ್ದಾರೆ.

Recommended Video

ಪೌರಕಾರ್ಮಿಕರು ನೀರು ಕೇಳಿದ್ದಕ್ಕೆ ಅಮಾನವೀಯವಾಗಿ ನಡೆದುಕೊಂಡ‌ ಮಹಿಳೆ | Oneindia Kannada

ಚೀನಾ-ಭಾರತ ಹಾಗೂ ರಷ್ಯಾ ದೇಶಗಳ ವಿದೇಶಾಂಗ ಸಚಿವರ ಸಭೆ ನಡೆದಿದ್ದು, ಈ ಸಭೆಯ ಬಳಿಕ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ''ಚೀನಾ ಮತ್ತು ಭಾರತಕ್ಕೆ ಹೊರಗಿನವರ ಸಹಾಯ ಬೇಕು ಎಂದು ನನಗೆ ಅನಿಸುತ್ತಿಲ್ಲ. ಅವರಿಗೆ ಸಹಾಯ ಮಾಡಬೇಕು ಎಂದು ನಾನು ಅಂದುಕೊಂಡಿಲ್ಲ. ದೇಶದ ಸಮಸ್ಯೆಗಳು ಆಗಿರುವುದರಿಂದ ತಾವೇ ಬಗೆಹರಿಸಿಕೊಳ್ಳಬಹುದು'' ಎಂದು ಹೇಳಿದ್ದಾರೆ.

11 ಗಂಟೆಗಳ ಸಭೆಯಲ್ಲಿ ಭಾರತ-ಚೀನಾ ಕಮಾಂಡರ್ಸ್ ಚರ್ಚಿಸಿದ್ದೇನು?11 ಗಂಟೆಗಳ ಸಭೆಯಲ್ಲಿ ಭಾರತ-ಚೀನಾ ಕಮಾಂಡರ್ಸ್ ಚರ್ಚಿಸಿದ್ದೇನು?

''ಈ ವಿಚಾರದಲ್ಲಿ ಶಾಂತಿಯುತ ಪರಿಹಾರಕ್ಕಾಗಿ ದೆಹಲಿ ಮತ್ತು ಬೀಜಿಂಗ್ ಬದ್ದತೆ ತೋರಿದೆ. ಎರಡೂ ರಾಷ್ಟ್ರಗಳ ಮೇಜರ್ ಜನರಲ್ ಮಟ್ಟದ ಸಭೆ, ವಿದೇಶಾಂಗ ಸಚಿವಾಲಯದ ಮಾತುಕತೆ ಆಯಿತು. ಎಲ್ಲಿಯೂ ಏಕಪಕ್ಷೀಯ ಹೇಳಿಕೆಗಳು ಕಾಣಲಿಲ್ಲ. ಇದು ಎರಡೂ ರಾಷ್ಟ್ರಗಳು ರಾಜತಾಂತ್ರಿಯ ಪರಿಹಾರದ ಮಾರ್ಗದಲ್ಲಿದ್ದಾರೆ ಎಂದು ಸೂಚಿಸುತ್ತದೆ'' ಎಂದು ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.

'ಪರಿಸ್ಥಿತಿ ಶಾಂತಿಯುತವಾಗಿ ಮುಂದುವರೆಯುತ್ತದೆ ಹಾಗೂ ಶಾಂತಿಯುತವಾಗಿ ಸಮಸ್ಯೆ ಬಗೆಹರಯಬಹುದು ಎಂದು ನಾನು ಭರವಸೆ ಇಟ್ಟಿದ್ದೇನೆ' ಎಂದು ರಷ್ಯಾ ಫಾರೀನ್ ಮಿನಿಸ್ಟರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

I dont think that India and China need any help from the outside said Russia

ಚೀನಾ ಮತ್ತು ಭಾರತದ ಘರ್ಷಣೆಯಲ್ಲಿ ರಷ್ಯಾ ಸರ್ಕಾರ ಭಾರತಕ್ಕೆ ಬೆಂಬಲ ನೀಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ. ಸದ್ಯದ ಹೇಳಿಕೆ ಗಮನಿಸಿದರೆ, ಈ ವಿಚಾರದಲ್ಲಿ ರಷ್ಯಾ ತಟಸ್ಥವಾಗಿ ಉಳಿಯಬಹುದು.

English summary
I don't think that India & China need any help from the outside. I don't think they need to be helped,especially when it comes to country issue - Russian Foreign Minister Sergei Lavrov.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X