ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕ್ಯಾನ್ಸರ್ ಕಂಟಕ ಹೆಚ್ಚಾಗುತ್ತಿರುವ ಬಗ್ಗೆ ಎಚ್ಚರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್.20: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಜೀವ ಹಿಂಡುತ್ತಿರುವ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಮತ್ತೊಂದು ಆಘಾತಕಾರಿ ಅಂಶವನ್ನು ಬಚ್ಚಿಟ್ಟಿದೆ.

ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯು ಶೇ.12ರಷ್ಟು ಹೆಚ್ಚಳವಾಗಲಿದೆ ಎಂದು ಐಸಿಎಂಆರ್ ತಿಳಿಸಿದೆ. ಪ್ರಸ್ತುತ 2020ರಲ್ಲಿ 1.39 ಮಿಲಿಯನ್ ನಷ್ಟು ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಸಂಖ್ಯೆಯು 2025ರ ವೇಳೆಗೆ 1.5 ಮಿಲಿಯನ್ ಗೆ ಏರಿಕೆಯಾಗಲಿದೆ ಎಂದು ತಿಳಿಸಿದೆ.

ಕೆಲವೇ ತಿಂಗಳಲ್ಲಿ ರಾಮನಗರದಲ್ಲಿ ಜಾಗತಿಕ ಗುಣಮಟ್ಟದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಕೆಲವೇ ತಿಂಗಳಲ್ಲಿ ರಾಮನಗರದಲ್ಲಿ ಜಾಗತಿಕ ಗುಣಮಟ್ಟದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

2020ರ ಅಂಕಿ-ಅಂಶಗಳ ಪ್ರಕಾರ 6,79,421 ಪುರುಷರು, 7,63,575 ಮಹಿಳೆಯರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. 2025ರಲ್ಲಿ ಈ ಅಂಕಿ-ಸಂಖ್ಯೆಗಳು ಹೆಚ್ಚಾಗಲಿದ್ದು, 7,12,758 ಪುರುಷರು ಮತ್ತು 8,06,218 ಮಹಿಳೆಯರಿಗೆ ಕ್ಯಾನ್ಸರ್ ತಗಲಿರುವ ಸಾಧ್ಯತೆಯಿದೆ.

India: Cancer Cases Could Increase By 12% In Next 5 Years


ಮಹಿಳೆಯರಿಗೆ ಹೆಚ್ಚಿನ ಕ್ಯಾನ್ಸರ್ ಆತಂಕ:

ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಆತಂಕ ಮಹಿಳೆಯರಿಗೆ ಹೆಚ್ಚಾಗಿ ಕಾಡುತ್ತಿದೆ. ಈ ಪೈಕಿ ಶೇ.14.8ರಷ್ಟು ರೋಗಿಗಳು ಸ್ತನ ಕ್ಯಾನ್ಸರ್ ನಿಂದ ಬಳಲುವ ಸಾಧ್ಯತೆಯಿದೆ. ಶೇ.5.4ರಷ್ಟು ಮಹಿಳೆಯರು ಗರ್ಭಕೋಶದ ಕ್ಯಾನ್ಸರ್, ಶೇ.19.7ರಷ್ಟು ಜನರು ಜೀರ್ಣಾಂಗ ವ್ಯೂಹದ ಕ್ಯಾನ್ಸರ್ ನಿಂದ ಬಳಲಲಿದ್ದಾರೆ ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ.

ಈ ವರ್ಷ ಐಸಿಎಂಆರ್ ನೀಡಿರುವ ವರದಿಯ ಪ್ರಕಾರ, ತಂಬಾಕು ಸೇವನೆಯಿಂದ ಕ್ಯಾನ್ಸರ್ ಗೆ ತುತ್ತಾಗಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಶೇ.27.1ರಷ್ಟು ಪುರುಷರಲ್ಲಿ ಬಾಯಿ, ಶ್ವಾಸಕೋಶ, ಹೊಟ್ಟೆಯ ಕ್ಯಾನ್ಸರ್ ಕಾಣಿಸಿಕೊಂಡಿದೆ. ಮಹಿಳೆಯರಲ್ಲಿ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸರ್ಜರಿ, ಕಿಮೋಥೆರಪಿ ಮತ್ತು ರೇಡಿಯೇಷನ್ ಥೆರಪಿಗಳ ಮೂಲಕ ಕ್ಯಾನ್ಸರ್ ನ್ನು ಗುಣಪಡಿಸಬಹುದು ಎಂದು ಐಸಿಎಂಆರ್ ತಿಳಿಸಿದೆ.

English summary
India: Cancer Cases Could Increase By 12% In Next 5 Years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X