ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ನಲ್ಲಿ ಭಾರತ-ಅಮೆರಿಕ ಜಂಟಿ ಸಮರಾಭ್ಯಾಸ

|
Google Oneindia Kannada News

ನವದೆಹಲಿ ಜೂನ್ 8: ಅಕ್ಟೋಬರ್‌ನಲ್ಲಿ ಹಿಮಾಲಯದ 10,000 ಅಡಿ ಎತ್ತರದ ಪ್ರದೇಶಗಳಲ್ಲಿ ಭಾರತ ಮತ್ತು ಅಮೆರಿಕ ದೇಶಗಳು ಜಂಟಿಯಾಗಿ ಸಮರಾಭ್ಯಾಸ ನಡೆಸಲಿವೆ. ಇನ್ನೊಂದೆಡೆ ಅಮೆರಿಕದ ಅಲಾಸ್ಕದಲ್ಲಿನ ವಿಪರೀತ ಚಳಿಯ ವಾತಾವರಣದಲ್ಲಿ ಭಾರತೀಯ ಯೋಧರಿಗೆ ತರಬೇತಿ ನೀಡಲಾಗುತ್ತದೆ.

ಅತಿ ಎತ್ತರದ ಯುದ್ಧ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಸೇನೆಯನ್ನು ಸಜ್ಜುಗೊಳಿಸುವ ಉದ್ದೇಶದಿಂದ ಹಾಗೂ ಉನ್ನತ ಮಟ್ಟದ ಜಂಟಿ ಕಾರ್ಯಾಚರಣೆಗಳಿಗಾಗಿ ಈ ರೀತಿಯ ಸಮರಾಭ್ಯಾಸವನ್ನು ನಡೆಸಲಾಗುತ್ತದೆ. ಇದು ಅತ್ಯಾಧುನಿಕ ತಂತ್ರಜ್ಞಾನ, ವಾಯುಪಡೆ ಸಲಕರಣೆಗಳು, ಯುದ್ಧ ವಿಮಾನ, ಸರಕುಗಳು ಒಳಗೊಂಡಂತೆ ಉನ್ನತ ಮಾಹಿತಿ ಹಂಚಿಕೆಯನ್ನು ಒಳಗೊಂಡಿರಲಿದೆ.

ಚೀನಾ ಮಕ್ಕಳ ಅದ್ಬುತ ವ್ಯಾಯಾಮ: ನೋಡಿದ್ರೆ ನೀವು ವಾವ್ ಅಂತೀರ..ಚೀನಾ ಮಕ್ಕಳ ಅದ್ಬುತ ವ್ಯಾಯಾಮ: ನೋಡಿದ್ರೆ ನೀವು ವಾವ್ ಅಂತೀರ..

"ಈ ಸಮರಾಭ್ಯಸವು ಭಾರತ ಮತ್ತು ಅಮೆರಿಕ ಸೇನಾ ಪಡೆಗಳು ಬಳಸಿಕೊಳ್ಳಬಹುದಾದ ಅಮೂಲ್ಯ ಅವಕಾಶಗಳಾಗಿವೆ," ಎಂದು ಅಮೆರಿಕ ಸೇನೆಯ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ ಫ್ಲಿನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸೇನೆಯೊಂದಿಗೆ ನಿರಂತರ ಘರ್ಷಣೆ

ಭಾರತೀಯ ಸೇನೆಯೊಂದಿಗೆ ನಿರಂತರ ಘರ್ಷಣೆ

ಇನ್ನೊಂದೆಡೆ ಪೂರ್ವ ಲಡಾಖ್‌ನ ಪ್ಯಾಂಗಾಂಗ್ ತ್ಸೊ ಸರೋವರದ ಉದ್ದಕ್ಕೂ ಚೀನಾ ಯೋಧರು ಬೃಹತ್ ಸೇತುವೆ ನಿರ್ಮಾಣ ಮಾಡುತ್ತಿರುವುದು ಉಪಗ್ರಹ ಚಿತ್ರಗಳಿಂದ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆಗಳ ಜತೆ ಚೀನಾ ನಿರಂತರ ಸಂಘರ್ಷದಲ್ಲಿ ತೊಡಗಿದೆ. ಈ ಭಾಗದಲ್ಲಿ ಮೂಲ ಸೌಕರ್ಯಗಳ ನಿರ್ಮಾಣದ ಮೂಲಕ ಸೇನಾ ಜಮಾವಣೆ, ಸೇನಾ ಉಪಕರಣಗಳ ಸಂಗ್ರಹ ಮತ್ತು ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ. ಜತೆಗೆ ತನ್ನ ಭಾಗದ ಯುದ್ಧ ಭೂಮಿಯನ್ನು ಹಾಗೂ ರಸ್ತೆ ಮೂಲ ಸೌಕರ್ಯವನ್ನು ಅತ್ಯತ್ತಮವಾಗಿ ಚೀನಾ ಅಭಿವೃದ್ಧಿಪಡಿಸುತ್ತಿದೆ. ಇದು ಭಾರತದ ಪಾಲಿಗೆ ಚಿಂತಿಸಬೇಕಾದ ವಿಷಯವಾಗಿದೆ.

ಉತ್ತರ ಕೊರಿಯಾಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಯುಎಸ್ಉತ್ತರ ಕೊರಿಯಾಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಯುಎಸ್

ಚೀನಾದಿಂದ ಮೂಲ ಸೌಕರ್ಯಗಳ ನಿರ್ಮಾಣ

ಚೀನಾದಿಂದ ಮೂಲ ಸೌಕರ್ಯಗಳ ನಿರ್ಮಾಣ

ಹಿಮಾಲಯದಲ್ಲಿ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಚೀನಾ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಸೇನೆಯ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ ಫ್ಲಿನ್, " ಭಾರತದ ಲಡಾಖ್ ಸಮೀಪ ಚೀನಾ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯ ನಡೆಸುತ್ತಿದೆ. ಇದು ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಲಡಾಖ್ ಸಮೀಪದ ಚೀನಾ ಚಟುವಟಿಕೆಗಳು ಕಣ್ಣು ತೆರೆಸುವಂತಿವೆ. ಇದು ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ವರ್ತನೆ,'' ಎಂದು ವ್ಯಾಖ್ಯಾನಿಸಿದ್ದಾರೆ.

ಭಾರತ-ಅಮೆರಿಕ ಒಟ್ಟಿಗೆ ಕೆಲಸ ಮಾಡಬೇಕಿದೆ

ಭಾರತ-ಅಮೆರಿಕ ಒಟ್ಟಿಗೆ ಕೆಲಸ ಮಾಡಬೇಕಿದೆ

"ವೆಸ್ಟರ್ನ್ ಥಿಯೇಟರ್ ಕಮಾಂಡ್‌ನಲ್ಲಿ ಚೀನಾ ನಿರ್ಮಿಸುತ್ತಿರುವ ಮೂಲಸೌಕರ್ಯಗಳು ಎಚ್ಚರಿಕೆ ಗಂಟೆಯಾಗಿದೆ ಎಂದು ನನಗೆ ಅನಿಸುತ್ತದೆ. ಅದು ಎಲ್ಲಾ ಕಡೆ ಮಿಲಿಟರಿ ಶಸ್ತ್ರಾಗಾರಗಳನ್ನು ನಿರ್ಮಿಸಿದಂತೆಯೇ , ಇಲ್ಲಿ ಕೂಡ ನಿರ್ಮಿಸುತ್ತಿದೆ. ಇದನ್ನು ನಾವು ಪ್ರಶ್ನಿಸಬೇಕಿದೆ," ಎಂದು ಏಷ್ಯಾ ಪೆಸಿಫಿಕ್ ಪ್ರದೇಶದ ಸೇನಾ ಚಟುವಟಿಕೆಗಳ ಬಗ್ಗೆ ನಿಗಾವಹಿಸಿರುವ ಜನರಲ್ ಚಾರ್ಲ್ಸ್ ಎ ಫ್ಲಿನ್ ತಿಳಿಸಿದ್ದಾರೆ.

ಅಮೆರಿಕ ಸೇನಾಧಿಕಾರಿ ಕಿಡಿ

ಅಮೆರಿಕ ಸೇನಾಧಿಕಾರಿ ಕಿಡಿ

"ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ದ್ರೋಹದ ನಡೆಯು ಹಾಗೂ ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ವರ್ತನೆಯು ಸರಿಯಲ್ಲ. ಚೀನಾ ಪ್ರದರ್ಶಿಸುತ್ತಿರುವ ಆ ವಿನಾಶಕಾರಿ ಮತ್ತು ಭ್ರಷ್ಟ ನಡೆಗೆ ಪ್ರತಿಯಾಗಿ ನಾವು ಒಟ್ಟಿಗೆ ಕೆಲಸ ಮಾಡುವುದು ಸೂಕ್ತ,'' ಎಂದು ಅಭಿಪ್ರಾಯಪಟ್ಟಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
India and the US are set to conduct high-altitude training missions at an altitude of 10,000 feet in the Himalayas as part of the Yuddh Abhyas exercises this October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X