ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವತ್ತ ನಮ್ಮ ಚಿತ್ತ': ಕೆಂಪು ಕೋಟೆಯಲ್ಲಿ ಪ್ರಧಾನಿ

|
Google Oneindia Kannada News

ನವದೆಹಲಿ, ಆ. 15: ದೇಶವು ಇಂದು ಸ್ವಾತಂತ್ಯ್ರ ದಿನದ 75 ನೇ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸ್ವಾಂತ್ರತ್ಯ್ರದ ಈ ಅಮೃತ ಮಹೋತ್ಸವದಲ್ಲಿ ಎಲ್ಲರಿಗೂ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಸ್ವಾತ್ರಂತ್ಯ್ರ ಹೋರಾಟಗಾರರಿಗೆ ಈ ಸಂದರ್ಭದಲ್ಲಿ ನಮಿಸುತ್ತೇವೆ. ಹಾಗೆಯೇ ಮಹಾತ್ಮ ಗಾಂಧಿ, ಭಗತ್‌ ಸಿಂಗ್‌, ಬಾಬಾ ಸಾಹೇಬ್‌ ಅಂಬೇಡ್ಕರ್‌ ಸೇರಿದಂತೆ ಈ ದೇಶವನ್ನು ರೂಪಿಸಿದ ಎಲ್ಲರನ್ನೂ ನೆನೆಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

75th Independence Day 2021 Live Updates: ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ75th Independence Day 2021 Live Updates: ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

''ಸೋಲು ಗೆಲುವು ಬಂದರೂ ಕೂಡಾ ಭಾರತವು ಸ್ವಾತಂತ್ಯ್ರದ ನಿಟ್ಟಿನಲ್ಲಿ ಹೋರಾಡಿದೆ'' ಎಂದು ಹೇಳಿದ ಪ್ರಧಾನಿ ಮೋದಿ, ಕೊರೊನಾ ಮಾಹಾಮಾರಿ ಸಂದರ್ಭದಲ್ಲಿ ಡಾಕ್ಟರ್‌, ನರ್ಸಿಂಗ್‌, ಪೌರಕಾರ್ಮಿಕರನ್ನು ನೆನಪಿಸಿಕೊಂಡರು. ''ಕೋವಿಡ್‌ ಲಸಿಕೆ ಮಾಡಿದ ವಿಜ್ಞಾನಿಗಳು, ಸೇವೆ ಮಾಡುತ್ತಿರುವ ಕೋಟ್ಯಾಂತರ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಬೇಕು,'' ಎಂದು ಪ್ರಧಾನಿ ಹೇಳಿದರು. ''ಕೊರೊನಾ ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರ್ಕಾರ ಈ ಜನರೊಂದಿಗೆ ಇದೆ,'' ಎಂದು ಕೂಡಾ ಹೇಳಿದರು.

 Independence Day 2021: Prime minister Narendra modi speech Highlights

ಪ್ರಧಾನಿ ಭಾಷಣದ ಮುಖ್ಯಾಂಶಗಳು

ಒಲಿಂಪಿಕ್ಸ್‌ನಲ್ಲಿ ಭಾರತದ ಹೆಸರನ್ನು ಎತ್ತರಕ್ಕೆ ಏರಿಸಿದ ಅಥ್ಲೆಟ್‌ಗಳಿಗೆ ಚಪ್ಪಾಳೆಯ ಮೂಲಕ ಎಲ್ಲರೂ ಅಭಿನಂದಿಸಿದರು.

ನಿನ್ನೆಯಷ್ಟೆ ಭಾರತ ಭಾವನಾತ್ಮಕ ನಿರ್ಣಯವನ್ನು ಕೈಗೊಂಡಿದೆ. ಆಗಸ್ಟ್‌ 14 ಅನ್ನು ವಿಭಜಣೆಯ ನೆನಪಾಗಿ ಆಚರಿಸಲಾಗುತ್ತದೆ. ಈ ದಿನ ನಮ್ಮನ್ನು ಅಗಲಿದ ಎಲ್ಲಾ ಮಹಾತ್ಮರ ನೆನಪಿಸಲಾಗುವುದು

ಕೊರೊನಾ ಸಾಂಕ್ರಾಮಿಕ ನಮಗೆ ದೊಡ್ಡ ಸವಾಲಾಗಿದೆ. ಭಾರತ ವಾಸಿಗಳು ಅಸಾಧಾರಣವಾಗಿ ಈ ಕೊರೊನಾ ವಿರುದ್ದ ಹೋರಾಡಿದ್ದೇವೆ.

ನಾವು ಕೊರೊನಾ ಲಸಿಕೆಗಾಗಿ ಬೇರೆ ಯಾರ ಮೇಲೆಯೂ ಅವಲಂಭಿತರಾಗಬೇಕಾದ ಸ್ಥಿತಿ ನಮ್ಮ ವಿಜ್ಞಾನಿಗಳು ಬಾರದಂತೆ ನೋಡಿದ್ದಾರೆ, ನೀವು ಆಲೋಚಿಸಿ ಒಂದು ವೇಳೆ ಲಸಿಕೆ ನಮ್ಮ ದೇಶದಲ್ಲಿ ಇಲ್ಲದಿದ್ದರೆ ಹೇಗಿರುತ್ತಿತ್ತು

ಪ್ರಪಂಚದ ದೊಡ್ಡ ಲಸಿಕೆ ಕಾರ್ಯಕ್ರಮ ನಮ್ಮಲಿದೆ. 55 ಕೋಟಿಗೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ, ಕೋವಿನ್‌ ತಂತ್ರಜ್ಞಾನ ಪ್ರಪಂಚವನ್ನೇ ಆಕರ್ಷಿಸುತ್ತಿದೆ

ಮುಂದಿನ ತಲೆಮಾರಿನ ಮೂಲಸೌಕರ್ಯ, ವಿಶ್ವ ದರ್ಜೆಯ ತಯಾರಿಕೆ, ಹೊಸತನ ಮತ್ತು ಹೊಸ ಯುಗದ ತಂತ್ರಜ್ಞಾನಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು: ಪ್ರಧಾನಿ ಪ್ರತಿಜ್ಞೆ

ನಾವು ಹೇಗೆ ಎಲ್ಲರಿಗೂ ವಿದ್ಯುತ್‌ ಸಂಪರ್ಕ ಮಾಡಿದೆವು, ಹೇಗೆ ಶೌಚಾಲಯ ನಿರ್ಮಾಣ ಅಭಿಯಾನ ನಡೆಸಿದೆವು. ಹಾಗೆಯೇ ಈ ಎಲ್ಲಾ ಯೋಜನೆಯನ್ನು ಪೂರ್ಣಗೊಳಿಸುವತ್ತ ನಮ್ಮ ಚಿತ್ತ ನೆಡಬೇಕು.

ಸರ್ಕಾರದ ಯೋಜನೆಯಿಂದ ಯಾರೂ ಕೂಡಾ ವಂಚಿತರಾಗಬಾರದು. ಯಾವಾಗ ದೇಶದ ಎಲ್ಲಾ ಜನರಿಗೂ ಸರಿಯಾದ ಸೌಲಭ್ಯ ದೊರೆಯುತ್ತದೋ ಅಂದು ಭ್ರಷ್ಟಾಚಾರ ನಿಲ್ಲುತ್ತದೆ.

ಪ್ರತಿ ದೇಶದ ವಿಕಾಸ ಯಾತ್ರೆಯಲ್ಲಿ ದೇಶ ಹೊಸ ಸಂಕಲ್ಪದೊಂದಿಗೆ ಮುಂದೆ ಸಾಗುತ್ತದೆ. ಆ ಸಂದರ್ಭ ಭಾರತ ದೇಶಕ್ಕೆ ಬಂದಿದೆ. ನಾವು ಈ ಅಮೃತ ಮಹೋತ್ಸವವನ್ನು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿಸಬಾರದು ಹೊಸ ಸಂಕಲ್ಪವನ್ನು ಮಾಡಬೇಕು.

ಇಂದಿನಿಂದ ನಾವು ಶತಕ ವರ್ಷದ ಸಂದರ್ಭದೊಳಗೆ ಭಾರತವನ್ನು ವಿಕಾಸದ ಸಂಕಲ್ಪ ಮಾಡಬೇಕು.
ಭಾರತದ ಈ ಅಮೃತ ಮಹೋತ್ಸವದ ಸಂದರ್ಭದ ನಮ್ಮ ಮುಂದಿನ ಗುರಿ: ಭಾರತವನ್ನು ಭಾರತ ಹಾಗೂ ಭಾರತದ ನಾಗರಿಕರಿಗಾಗಿ ಸಮೃದ್ದಿ ಜೀವನದ ಆರೋಹಣ, ಗ್ರಾಮ ಹಾಗೂ ನಗರಗಳಲ್ಲಿ ಸಮಾನವಾದ ಸೌಕರ್ಯವಿರುವ ಸಮೃದ್ದ ಭಾರತ ನಿರ್ಮಾಣ, ನಾಗರಿಕರ ಜೀವನದಲ್ಲಿ ಸರ್ಕಾರ ಸುಖಾಸುಮ್ಮನೆ ಮೂಗು ತೂರಿಸದಂತಹ ಭಾರತ, ಪ್ರಪಂಚದ ಎಲ್ಲಾ ಮೂಲ ಸೌಕರ್ಯಗಳು ಇರುವ ಭಾರತ,

ಇದು ಕೋಟಿ ಕೋಟಿ ದೇಶವಾಸಿಗಳ ಸಂಕಲ್ಪ, ಆದರೆ ಈ ಸಂಕಲ್ಪ ಪೂರ್ಣವಾಗ ಬೇಕಾದರೆ ಪರಿಶ್ರಮ ಹಾಗೂ ಪರಾಕ್ರಮ ಮುಖ್ಯ

ಈ ಸಮಯವೇ ಸರಿಯಾದ ಸಮಯ. ನಾವು ದೇಶವನ್ನು ಬದಲಾಯಿಸಬೇಕು. ನಾವು ನಾಗರಿಕರಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು.

ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌ ನಮ್ಮ ಎಲ್ಲಾ ಗುರಿ ತಲುಪಲು ಬಹುಮುಖ್ಯ

ಹಲವಾರು ಸರ್ಕಾರದ ಯೋಜನೆಗಳನ್ನು ನೆನಪಿಸಿಕೊಂಡ ಪ್ರಧಾನಿ ನಾವು ಈ ಯೋಜನೆಯನ್ನು ವೇಗಗೊಳಿಸಿದ್ದೇವೆ. ಆದರೆ ಇಲ್ಲಿಗೆ ನಿಲ್ಲದು. ನಾವು ಈ ಯೋಜನೆಯನ್ನು ಪೂರ್ಣಗೊಳಿಸಬೇಕು. ಎಲ್ಲರಿಗೂ ಈ ಯೋಜನೆಯ ಫಲ ದೊರೆಯಬೇಕು.

ಉಜ್ವಲಾ ಯೋಜನೆಯ ಪ್ರಯೋಜನ ಎಲ್ಲರಿಗೂ ದೊರೆಯಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕು

ಶೀಘ್ರದಲ್ಲೇ ಭಾರತದ ಎಲ್ಲಾ ಆಸ್ಪತ್ರೆಗಳಲ್ಲಿ ತಮ್ಮದೇ ಆದ ಆಕ್ಸಿಜನ್‌ ಪ್ಲಾಂಟ್‌ ಇರುತ್ತದೆ

ಸಮಾಜದ ವಿಕಾಸದ ಯಾತ್ರೆಯಲ್ಲಿ ಯಾರನ್ನೂ ಕಡೆಗಣಿಸದಂತೆ ನಾವು ಕಾರ್ಯ ನಿರ್ವಹಿಸಬೇಕು. ವಿಕಾಸ ಎಲ್ಲಾ ಕ್ಷೇತ್ರಗಳಲ್ಲೂ ಆಗಬೇಕು ನಾವು ಆಗ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಯಾವುದೇ ವರ್ಗವನ್ನು ಕಡೆಗಣಿಸಬಾರದು.

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ನಡೆಯುತ್ತಿದೆ.

ನಮ್ಮ ಮಂತ್ರ: 'ಛೋಟಾ ಕಿಸಾನ್ ಬಾನೆ ದೇಶ್ ಕಿ ಶಾನ್'. (ಸಣ್ಣ ರೈತ ದೇಶದ ಹೆಮ್ಮೆ). ಇದು ನಮ್ಮ ಕನಸು.

ಮುಂಬರುವ ವರ್ಷಗಳಲ್ಲಿ, ನಾವು ದೇಶದ ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು, ನಾವು ಅವರಿಗೆ ಹೊಸ ಸೌಲಭ್ಯಗಳನ್ನು ಒದಗಿಸಬೇಕು.

'ಕಿಸಾನ್ ರೈಲು' ಇಂದು ದೇಶದ 70 ಕ್ಕೂ ಹೆಚ್ಚು ರೈಲು ಮಾರ್ಗಗಳಲ್ಲಿ ಚಲಿಸುತ್ತದೆ.

75 ವಂದೇ ಭಾರತ್ ರೈಲುಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವದ 75 ವಾರಗಳಲ್ಲಿ ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸುತ್ತದೆ: ಪ್ರಧಾನಿ ಮೋದಿ

ಮೂಲ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ದಲಿತರು, ಹಿಂದುಳಿದವರು, ಬುಡಕಟ್ಟುಗಳು, ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿ ಕಾಳಜಿ ವಹಿಸಿದ್ದೇವೆ

ಇತ್ತೀಚೆಗೆ ವೈದ್ಯಕೀಯ ಶಿಕ್ಷಣದಲ್ಲಿ ಅಖಿಲ ಭಾರತ ಕೋಟಾದ ಅಡಿಯಲ್ಲಿ ಒಬಿಸಿಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ರಾಜ್ಯಗಳಿಗೆ ತಮ್ಮದೇ ಆದ ಒಬಿಸಿ ಪಟ್ಟಿಗಳನ್ನು ಮಾಡುವ ಹಕ್ಕನ್ನು ನೀಡಲಾಗಿದೆ

ಮುಂದಿನ ದಿನಗಳಲ್ಲಿ, ನಾವು ಪಿಎಂ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತೇವೆ, 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದು ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಸಮಗ್ರ ಮಾರ್ಗವನ್ನು ನೀಡುತ್ತದೆ

ಇಂದು, ನಾವು 100 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸುವ ಮೊದಲು ಭಾರತವನ್ನು ಶಕ್ತಿಯ ಸ್ವತಂತ್ರವಾಗಿಸಲು ಪ್ರತಿಜ್ಞೆ ಮಾಡಬೇಕು.

ಭಾರತವು ವಿದ್ಯುತ್ ಚಲನಶೀಲತೆಯತ್ತ ಸಾಗಿದೆ ಮತ್ತು 2030 ರ ವೇಳೆಗೆ ನಿವ್ವಳ ಶೂನ್ಯ ಕಾರ್ಬನ್ ಎಮಿಟರ್ ಆಗುವ ಗುರಿಯೊಂದಿಗೆ ಭಾರತೀಯ ರೈಲ್ವೆಯ ಶೇ. 100 ವಿದ್ಯುದೀಕರಣದ ಕೆಲಸ ನಡೆಯುತ್ತಿದೆ

ಇಂದು, ಹವಾಮಾನ ಬದಲಾವಣೆಯ ದೃಷ್ಟಿಯಿಂದ ನಾನು ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಅನ್ನು ಘೋಷಿಸುತ್ತಿದ್ದೇನೆ. ನಾವು ಭಾರತವನ್ನು ಹಸಿರು ಜಲಜನಕದ ಉತ್ಪಾದನೆ ಮತ್ತು ರಫ್ತು ಮಾಡುವ ಕೇಂದ್ರವನ್ನಾಗಿಸಬೇಕು

(ಒನ್‌ಇಂಡಿಯಾ ಸುದ್ದಿ)

English summary
Independence Day 2021: Prime minister Narendra modi speech Highlights. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X