ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಮೆಟ್ರೋ ಸಂಚಾರಕ್ಕಾಗಿ ಸಿದ್ಧತೆ ಹೇಗಿದೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 03: ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಬಳಿಕ ಮೆಟ್ರೋ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮೆಟ್ರೋ ಸಂಚಾರಕ್ಕೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ನೀಡಿದೆ.

Recommended Video

Namma Metro ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ನಿಲ್ಲಲ್ಲ | Oneindia Kannada

ಸೆಪ್ಟೆಂಬರ್ 7ರಿಂದ ನವದೆಹಲಿ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಮೆಟ್ರೋ ಸೇವೆ ಆರಂಭವಾಗಲಿದೆ. ಇದಕ್ಕಾಗಿ ವಿವಿಧ ಮೆಟ್ರೋ ನಿಗಮಗಳು ಸಿದ್ಧತೆಯನ್ನು ಸಹ ಮಾಡಿಕೊಳ್ಳುತ್ತಿವೆ.

ಸೆ.7ರಿಂದ ಮೆಟ್ರೋ; 3 ಗಂಟೆ ಮಾತ್ರ ರೈಲು ಸಂಚಾರ ಸೆ.7ರಿಂದ ಮೆಟ್ರೋ; 3 ಗಂಟೆ ಮಾತ್ರ ರೈಲು ಸಂಚಾರ

ಮೆಟ್ರೋ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮುಂತಾದ ನಿಯಮಗಳನ್ನು ಜನರು ಪಾಲನೆ ಮಾಡಬೇಕಿದೆ.

ಸೆಪ್ಟೆಂಬರ್ 7 ರಿಂದ ನಮ್ಮ ಮೆಟ್ರೋ ಸಂಚಾರ: ಮಾರ್ಗಸೂಚಿ ರೆಡಿ ಸೆಪ್ಟೆಂಬರ್ 7 ರಿಂದ ನಮ್ಮ ಮೆಟ್ರೋ ಸಂಚಾರ: ಮಾರ್ಗಸೂಚಿ ರೆಡಿ

ನವದೆಹಲಿಯಲ್ಲಿ ಮೆಟ್ರೋ ಸಂಚಾರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೆಹಲಿಯಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,79,569. ಸಕ್ರಿಯ ಪ್ರಕರಣಗಳ ಸಂಖ್ಯೆ 16,502.

ಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿ

ಲಿಫ್ಟ್ ಮುಟ್ಟಬೇಡಿ

ಲಿಫ್ಟ್ ಮುಟ್ಟಬೇಡಿ

ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಲಿಫ್ಟ್ ಬಳಸುವಾಗ ಅದನ್ನು ಮುಟ್ಟಬೇಕಿಲ್ಲ. ಪೆಡಲ್ ಮೂಲಕ ಲಿಫ್ಟ್ ಬರಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಜನರು ಮೆಟ್ರೋ ನಿಗಮ ನೀಡುವ ಸೂಚನೆಯನ್ನು ಪಾಲಿಸಬೇಕು.

ಥರ್ಮಲ್ ಸ್ಕ್ಯಾನಿಂಗ್

ಥರ್ಮಲ್ ಸ್ಕ್ಯಾನಿಂಗ್

ಪ್ರತಿ ಪ್ರಯಾಣಿಕರು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಬೇಕು. ಆದರೆ, ಸಿಬ್ಬಂದಿ ನಿಮ್ಮನ್ನು ಸ್ಕ್ಯಾನ್ ಮಾಡುವುದಿಲ್ಲ. ಇದಕ್ಕಾಗಿ ಸ್ವಯಂ ಚಾಲಿತ ಯಂತ್ರದ ವ್ಯವಸ್ಥೆ ಮಾಡಲಾಗಿದೆ.

ನಿಲ್ದಾಣ ಸ್ಯಾನಿಟೈಸ್

ನಿಲ್ದಾಣ ಸ್ಯಾನಿಟೈಸ್

ಮೆಟ್ರೋದಲ್ಲಿ ಸ್ಮಾರ್ಟ್‌ ಕಾರ್ಡ್‌ ಇರುವ ಪ್ರಯಾಣಿಕರು ಮಾತ್ರ ಸಂಚಾರ ಮಾಡಬಹುದಾಗಿದೆ. ಮೆಟ್ರೋ ನಿಲ್ದಾಣವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಸಿಬ್ಬಂದಿಗೆ ಪ್ರಯಾಣಿಕರಿಗೆ ಯಾವ ಸೂಚನೆ ಕೊಡಬೇಕು ಎಂದು ತರಬೇತಿ ನೀಡಲಾಗಿದೆ.

ಮೆಟ್ರೋ ರೈಲು ಸ್ಯಾನಿಟೈಸ್

ಮೆಟ್ರೋ ರೈಲು ಸ್ಯಾನಿಟೈಸ್

ಮೆಟ್ರೋ ರೈಲಿನಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೀಟಿನ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ಬೋಗಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಪ್ರತಿ ಟ್ರಿಪ್ ಪೂರ್ಣಗೊಂಡ ಬಳಿಕ ರೈಲನ್ನು ಸ್ಯಾನಿಟೈಸ್ ಮಾಡಲಾಗುತ್ತದೆ.

English summary
Delhi metro employees busy in the preparations for start metro service from September 7, 2020. Metro service will resume with restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X