ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

600 ಕೋಟಿ ಒಡೆಯ, ನೂರು ಕೋಟಿ ಖರ್ಚು ಮಾಡಿ ಸನ್ಯಾಸಿಯಾದ!

|
Google Oneindia Kannada News

ನವದೆಹಲಿ, ಜೂ. 03 : ಎಲ್ಲಾ ಬಂಧನವನ್ನು ಕಳಚಿಕೊಂಡು ಸನ್ಯಾಸಿಯಾಗಲು ಹೊರಟ ವ್ಯಕ್ತಿ ಅದಕ್ಕಾಗಿ ಖರ್ಚು ಮಾಡಿದ ಹಣವೆಷ್ಟು ಗೊತ್ತೆ? 100 ಕೋಟಿ. ದೆಹಲಿಯ ಪ್ಲಾಸ್ಟಿಕ್ ಕಿಂಗ್ ಎಂದು ಖ್ಯಾತಿ ಪಡೆದಿರುವ ಭನ್ವರ್‌ಲಾಲ್ ರಘುನಾಥ್ ದೋಶಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಜೈನ ದೀಕ್ಷೆ ಪಡೆದಿದ್ದಾರೆ.

600 ಕೋಟಿ ರೂ.ಗಳ ಒಡೆಯ ರಘುನಾಥ ದೋಶಿ ಜೈನ ಧರ್ಮದತ್ತ ಆಕರ್ಷಿತರಾಗಿ, ಭಾನುವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ದೀಕ್ಷೆ ಕಾರ್ಯಕ್ರಮಕ್ಕೆ ಅವರು 100 ಕೋಟಿ ರೂ.ಹಣವನ್ನು ಖರ್ಚು ಮಾಡಿದ್ದಾರೆ.

ಸುಮಾರು ಒಂದೂವರೆ ಲಕ್ಷ ಜನರ ಸಮ್ಮುಖದಲ್ಲಿ ರಘುನಾಥ ದೋಶಿ ಅವರು ಜೈನ ಆಚಾರ್ಯ ಶ್ರೀ ಗೌತಮ ಸುರೀಶ್ವರಜೀ ಮಹಾರಾಜ್ ಅವರ 104ನೇ ಶಿಷ್ಯರಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ಹಡಗಿನ ಆಕಾರದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಕಲ ಸಂಪತ್ತನ್ನು ತ್ಯಜಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.

ತಮ್ಮ ಉದ್ಯಮದ ನಡುವೆಯೂ 1982ರಿಂದಲೇ ಜೈನ ಪ್ರವಚನಗಳಿಗೆ ಹಾಜರಾಗುತ್ತಿದ್ದ ದೋಶಿ ಅವರು, ಸನ್ಯಾಸಿಯಾಗಲು ಹಂಬಲಿಸಿದ್ದರು. ಆದರೆ, ಅವರ ಪತ್ನಿ ಮತ್ತು ಮೂವರು ಮಕ್ಕಳು ಇದನ್ನು ವಿರೋಧಿಸಿದ್ದರು. ಎಲ್ಲರ ಮನವೊಲಿಸಿ ಕೊನೆಗೂ ಸನ್ಯಾಸಿಯಾಗಿದ್ದಾರೆ. ಸನ್ಯಾಸ ಸ್ವೀಕರಿಸಿದ ಚಿತ್ರಗಳು ಇಲ್ಲಿವೆ....

ಸನ್ಯಾಸ ದೀಕ್ಷೆ ಸ್ವೀಕರಿಸಿದ ಭನ್ವರ್‌ಲಾಲ್ ರಘುನಾಥ್ ದೋಶಿ

ಸನ್ಯಾಸ ದೀಕ್ಷೆ ಸ್ವೀಕರಿಸಿದ ಭನ್ವರ್‌ಲಾಲ್ ರಘುನಾಥ್ ದೋಶಿ

ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭನ್ವರ್‌ಲಾಲ್ ರಘುನಾಥ್ ದೋಶಿ ಅವರು ಜೈನ ಆಚಾರ್ಯ ಶ್ರೀ ಗೌತಮ ಸುರೀಶ್ವರಜೀ ಮಹಾರಾಜ್ ಅವರ 104ನೇ ಶಿಷ್ಯರಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ಹಡಗಿನ ಆಕಾರದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಕಲ ಸಂಪತ್ತನ್ನು ತ್ಯಜಿಸಿ ಸನ್ಯಾಸಿಯಾಗಿದ್ದಾರೆ.

ಭನ್ವರ್‌ಲಾಲ್ ರಘುನಾಥ್ ದೋಶಿ ಯಾರು?

ಭನ್ವರ್‌ಲಾಲ್ ರಘುನಾಥ್ ದೋಶಿ ಯಾರು?

ದೆಹಲಿಯ 'ಪ್ಲಾಸ್ಟಿಕ್ ಕಿಂಗ್' ಎಂದು ಖ್ಯಾತಿ ಪಡೆದಿರುವ ಭನ್ವರ್‌ಲಾಲ್ ಪಾಸ್ಟಿಕ್ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರದ್ದು ಸುಮಾರು 600 ಕೋಟಿ ರೂ. ವ್ಯವಹಾರ. ಸದ್ಯ ಆಸ್ತಿ, ಹಣ, ಮನೆ, ಬಂಗಲೆ, ಕುಟುಂಬವನ್ನು ತೆರೆದು ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಿದ್ದಾರೆ.

ದೀಕ್ಷೆ ಸಮಾರಂಭಕ್ಕೆ 100 ಕೋಟಿ ಖರ್ಚು

ದೀಕ್ಷೆ ಸಮಾರಂಭಕ್ಕೆ 100 ಕೋಟಿ ಖರ್ಚು

ಭನ್ವರ್‌ಲಾಲ್ ರಘುನಾಥ್ ದೋಶಿ ಭಾನುವಾರ ಅಹಮದಾಬಾದ್‌ನಲ್ಲಿ ದೀಕ್ಷೆ ಸ್ವೀಕರಿಸಲು 100ಕೋಟಿ ರೂ. ಖರ್ಚು ಮಾಡಿದ್ದಾರೆ. ಹಡಗಿನ ಆಕಾರದ ವೈಭೋವೋಪೇತ ವೇದಿಕೆಯಲ್ಲಿ ಸುಮಾರು ಒಂದೂವರೆ ಲಕ್ಷ ಜನರ ಸಮ್ಮುಖದಲ್ಲಿ ದೋಶಿ ಸನ್ಯಾಸಿಯಾಗಿದ್ದಾರೆ.

7 ಕಿ.ಮೀ.ನಡೆಯಿತು ಮೆರವಣಿಗೆ

7 ಕಿ.ಮೀ.ನಡೆಯಿತು ಮೆರವಣಿಗೆ

ಸನ್ಯಾಸ ದೀಕ್ಷೆ ಸಮಾರಂಭಕ್ಕೆ 1000 ಜೈನ ಸನ್ಯಾಸಿಗಳು, 12 ರಥಗಳು, 9 ಆನೆ, 9 ಒಂಟೆ ಗಾಡಿಗಳು ಮತ್ತು ಸಾಂಪ್ರದಾಯಿಕ ಸಂಗೀತಗಾರರೊಂದಿಗೆ 7 ಕಿ.ಮೀ. ಮೆರವಣಿಗೆಯನ್ನು ದೋಶಿ ನಡೆಸಿದರು. ಗುಜರಾತ್‌ನ ಅದಾನಿ ಸಮೂಹದ ಅಧ್ಯಕ್ಷ ಗೌತಮ್‌ ಅದಾನಿ ಸೇರಿದಂತೆ ಹಲವು ಗಣ್ಯರು ಸನ್ಯಾಸ ದೀಕ್ಷೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಎಲ್ಲರ ಮನವೊಲಿಸಿದ ದೋಶಿ

ಎಲ್ಲರ ಮನವೊಲಿಸಿದ ದೋಶಿ

ತಮ್ಮ ಪ್ಲಾಸ್ಟಿಕ್ ಉದ್ಯಮದ ನಡುವೆಯೇ 1982ರಿಂದಲೇ ಜೈನ ಪ್ರವಚನಗಳಿಗೆ ಹಾಜರಾಗುತ್ತಿದ್ದ ದೋಶಿ ಅವರು, ಸನ್ಯಾಸಿಯಾಗಲು ಹಂಬಲಿಸಿದ್ದರು. ಆದರೆ, ಅವರ ಪತ್ನಿ ಮತ್ತು ಮೂವರು ಮಕ್ಕಳು ಇದನ್ನು ವಿರೋಧಿಸಿದ್ದರು. ಎಲ್ಲರ ಮನವೊಲಿಸಿ ಕೊನೆಗೂ ಸನ್ಯಾಸಿಯಾಗಿದ್ದಾರೆ.

English summary
Delhi plastic king Bhanwarlal Doshi took Jain diksha in Ahmedabad on Sunday. Father of two sons and a daughter, Doshi has left a Rs 600 core empire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X