ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಹ್ಯಾಂಗ್ ಔಟ್ ನಲ್ಲಿ ಅರುಣ್ ಜೇಟ್ಲಿ

By Mahesh
|
Google Oneindia Kannada News

ನವದೆಹಲಿ, ಮಾ.25: ಎಬಿವಿಪಿ ಮೂಲಕ ವಿದ್ಯಾರ್ಥಿ ನಾಯಕರಾಗಿ ಬೆಳೆದ ಅರುಣ್ ಜೇಟ್ಲಿ ಅವರು ಇಂದು ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಬಿಜೆಪಿಯ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅರುಣ್ ಜೇಟ್ಲಿ ಉಪಸ್ಥಿತಿ ಬೇಕಾಗುತ್ತದೆ.

ರಾಜ್ಯಸಭೆ ಸದಸ್ಯರಾಗಿರುವ ಅರುಣ್ ಜೇಟ್ಲಿ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಮೃತಸರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಗುರು ಜೇಟ್ಲಿ ಅವರಿಗಾಗಿ ಮೂರು ಬಾರಿ ಸಂಸದ ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. 61 ವರ್ಷ ಜೇಟ್ಲಿ ಅವರು ರಾಜ್ಯಸಭೆಯ ವಿಪಕ್ಷ ನಾಯಕರಲ್ಲದೆ ಕ್ರಿಕೆಟ್ ಸಂಸ್ಥೆಗಳಲ್ಲೂ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಬಿಜೆಪಿಯ ರಣತಂತ್ರ ವಿನ್ಯಾಸಗಾರರಾಗಿರುವ ಜೇಟ್ಲಿ ಅವರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ನಿಮಗೆ ನೀಡಲಾಗುತ್ತಿದೆ.

In Conversation with Arun Jaitley on March 25, 2014

ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಮೂಲಕ ಅಭಿಮಾನಿಗಳನ್ನು ಹೊಂದಿರುವ ಜೇಟ್ಲಿ ಅವರನ್ನು ಈಗ ಗೂಗಲ್ ಹಾಗೂ ನೆಟ್ವರ್ಕ್ 18 ಸಂಸ್ಥೆ ಗೂಗಲ್ ಪ್ಲಸ್ ನ ಹ್ಯಾಂಗ್ ಔಟ್ ಗೆ ಕರೆತಂದಿದ್ದಾರೆ. ಮಂಗಳವಾರ ಸಂಜೆ 5 ಗಂಟೆಗೆ ಸಾರ್ವಜನಿಕರ ಜತೆ ನೇರವಾಗಿ ವಿಡಿಯೋ ಸಂವಾದ ನಡೆಸಲಿದ್ದಾರೆ.

ಮುಂದಿನ ಗೂಗಲ್ ಹ್ಯಾಂಗ್ ಔಟ್ ನಲ್ಲಿ ಮಾ.27 ರಂದು ಜೈರಾಮ್ ರಮೇಶ್, ಮಾ. 29 ರಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಾ.30 ರಂದು ಅಜಯ್ ಮಾಕೇನ್ ಅವರು ಕಾಣಿಸಿಕೊಳ್ಳಲಿದ್ದಾರೆ.

ಜೇಟ್ಲಿ ಅವರಿಗೆ ಕೇಳಲು ನಿಮ್ಮಲ್ಲೂ ಪ್ರಶ್ನೆಗಳಿದ್ದರೆ #Askjaitley ಎಂದು ಟೈಪಿಸಿ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ನೇರ ಪ್ರಸಾರದ ವಿಡಿಯೋ ಲಿಂಕ್ ಇಲ್ಲಿದೆ ತಪ್ಪದೇ ವೀಕ್ಷಿಸಿ...

ಲೈವ್ ಸಂವಾದ ವಿಡಿಯೋ ಇಲ್ಲಿ ನೋಡಿ..

English summary
Google and Network 18 presents : Don't miss the Google+ Hangout On Air with Rajyasabha Member Arun Jaitley on March 25 at 5 pm where he talks about the upcoming elections and future plans. If you have a question, send it via #Askjaitley
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X