ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷದಲ್ಲಿ 365 ಪದ, 92% ಹಾಜರಾತಿ: ಅಡ್ವಾಣಿ ಸಂಸತ್ ಲೆಕ್ಕಾಚಾರ

|
Google Oneindia Kannada News

ಬಿಜೆಪಿಯ 'ಲೋಹ ಪುರುಷ' ಎಲ್.ಕೆ.ಅಡ್ವಾಣಿ ಅಂದರೆ ಒಂದು ಕಾಲಕ್ಕೆ ಬೆಂಕಿಯುಂಡೆ. ಯುಪಿಎ ಸರಕಾರದ ಎರಡು ಅವಧಿಯಲ್ಲಿ ಅವರ ಬೆಂಕಿಯುಗುಳುವ ಮಾತು, ಚರ್ಚೆಗೆ ಅದೆಂಥ ಅಡೆ-ತಡೆ ಒಡ್ಡಿದರೂ ತಾವು ಹೇಳಬೇಕಾದ ವಿಚಾರವನ್ನು ಪೂರ್ತಿಯಾಗಿ- ಸ್ಪಷ್ಟವಾಗಿ ಹೇಳದ ಹೊರತು ಸುಮ್ಮನಾಗದ ವ್ಯಕ್ತಿ ಅವರು. ಆದರೆ ಕಾಲ ಹೇಗೆ ಬದಲಾಗಿದೆ ಗೊತ್ತೆ?

‌ಅಕ್ರಮವಾಗಿ ಅಸ್ಸಾಂನಲ್ಲಿ ಒಳನುಸುಳುವಿಕೆ ಭಾರೀ ದೊಡ್ಡ ಮಟ್ಟದ ಹಿಂಸಾಚಾರ ಆಗಿತ್ತು. ಅದರ ಬಗ್ಗೆ ಆಗಸ್ಟ್ 8, 2012ರಂದು ಚರ್ಚೆ ಆರಂಭಿಸಿದ್ದರು ಅಡ್ವಾಣಿ. ಅವರ ಮಾತಿಗೆ ನಿರಂತರವಾಗಿ ತಡೆಯೊಡ್ಡಲು ಆರಂಭವಾಯಿತು. ಟ್ರೆಷರಿ ಬೆಂಚ್ ನಲ್ಲಿ ಕೂತಿದ್ದವರ ಕಡೆಯಿಂದ ಕನಿಷ್ಠ ಐವತ್ತು ಸಲ ಭಾಷಣಕ್ಕೆ ಅಡ್ಡಿಪಡಿಸಲಾಯಿತು. ಆದರೂ ತಾವು ಹೇಳಬೇಕಾಗಿದ್ದ 4957 ಪದವನ್ನು ಒಳಗೊಂಡ ವಿಷಯವನ್ನು ಹೇಳಿದ ನಂತರವೇ ಅವರು ಮಾತು ಪೂರ್ಣಗೊಳಿಸಿದ್ದು.

ವೈರಲ್ ವಿಡಿಯೋ : ಅಡ್ವಾಣಿಯನ್ನು ಕಡೆಗಣಿಸಿದರೆ ಮೋದಿ? ವೈರಲ್ ವಿಡಿಯೋ : ಅಡ್ವಾಣಿಯನ್ನು ಕಡೆಗಣಿಸಿದರೆ ಮೋದಿ?

ಆದರೆ, ಈ ವರ್ಷದ ಜನವರಿ ಎಂಟನೇ ತಾರೀಕು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ನಾಗರಿಕ ತಿದ್ದುಪಡಿ ಮಸೂದೆ ಮಂಡಿಸಿತು. ಒಂದು ವೇಳೆ ಈ ಮಸೂದೆಗೆ ಒಪ್ಪಿಗೆ ಸಿಕ್ಕರೆ (ರಾಜ್ಯ ಸಭೆಯಲ್ಲಿ ಇನ್ನೂ ಮಂಡಿಸಬೇಕಿದೆ, ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ) ಅಸ್ಸಾಂ ರಾಜ್ಯದ ಸಾಮಾಜಿಕ-ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಐವತ್ತು ಸಲ ತಡೆ ಒಡ್ಡಿದ್ದರೂ ಮಾತನಾಡಿದ್ದರು

ಐವತ್ತು ಸಲ ತಡೆ ಒಡ್ಡಿದ್ದರೂ ಮಾತನಾಡಿದ್ದರು

ನಾಗರಿಕ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡಿಸಿದ ದಿನ ಚರ್ಚೆ ನಡೆದಾಗ ಅಡ್ವಾಣಿ ಹಾಜರಿದ್ದರು. ಮಸೂದೆ ಬಹಳ ಮುಖ್ಯವಾಗಿದ್ದರೂ ಅವರು ಒಂದೇ ಒಂದು ಮಾತನಾಡಲಿಲ್ಲ. ಇದೇ ಅಡ್ವಾಣಿ ಏಳು ವರ್ಷದ ಹಿಂದೆ, ಐವತ್ತು ಸಲ ಅಡೆತಡೆ ಒಡ್ಡಿದರೂ ಲೆಕ್ಕಿಸದೆ ಇದೇ ವಿಷಯ ಮುಂದಕ್ಕೆ ಹಾಕುವಂತೆ ಒತ್ತಾಯ ಮಾಡಿದ್ದರು.

ಹೀಗೊಂದು ಹೋಲಿಕೆ

ಹೀಗೊಂದು ಹೋಲಿಕೆ

ಈ ಮಧ್ಯೆ ಸರಕಾರಗಳು ಬದಲಾಗಿವೆ. ಅಷ್ಟೇ ಅಲ್ಲ ಲಾಲ್ ಕೃಷ್ಣ ಅಡ್ವಾಣಿಯವರೂ ಬದಲಾಗಿದ್ದಾರೆ. ಲೋಕಸಭಾ ದಾಖಲೆಯ ಲಭ್ಯ ಮಾಹಿತಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸಂಸತ್ ನಲ್ಲಿ ಆಡಿರುವ ಪದಗಳ ಸಂಖ್ಯೆ 365 ಮಾತ್ರ. 2009-14ರ ಮಧ್ಯದ ಅವಧಿಗೆ ಒಂದು ಹೋಲಿಕೆ ಮಾಡಿ ನೋಡುವುದಾದರೆ, 42 ಚರ್ಚೆ/ಕಲಾಪಗಳಲ್ಲಿ ಅವರು ಪಾಲ್ಗೊಂಡಿದ್ದರು. 35,926 ಪದಗಳನ್ನು ಮಾತನಾಡಿದ್ದರು.

ಪ್ರಣಬ್ ನಡೆ ಸಮಕಾಲೀನ ಇತಿಹಾಸದಲ್ಲೇ ಮಹತ್ವದ್ದು: ಅಡ್ವಾಣಿ ಪ್ರಣಬ್ ನಡೆ ಸಮಕಾಲೀನ ಇತಿಹಾಸದಲ್ಲೇ ಮಹತ್ವದ್ದು: ಅಡ್ವಾಣಿ

ಡಿಸೆಂಬರ್ 19, 2014ರಿಂದ ಮಾತನಾಡಿಲ್ಲ

ಡಿಸೆಂಬರ್ 19, 2014ರಿಂದ ಮಾತನಾಡಿಲ್ಲ

ಇನ್ನೊಂದು ಲೆಕ್ಕಾಚಾರ ಹೇಳಬೇಕು ಅಂದರೆ, ಈ ಅವಧಿಯಲ್ಲಿ ಅವರು ಆಡಿದ 365 ಪದಗಳು ಕೂಡ 2014ನೇ ಇಸವಿಯಲ್ಲಿ. ಡಿಸೆಂಬರ್ 19, 2014ರಂದು ಅವರು ಮಾತನಾಡಿದ್ದರು. ಆ ನಂತರ ಲೋಕಸಭೆಯಲ್ಲಿ ಮಾತನಾಡಿಲ್ಲ. ಹಾಗಂತ ಅವರು ಸ್ವಭಾವತಃ ಹಾಗೇ ಇರಬಹುದಾ ಅಂದರೆ, ಅವರ ಆತ್ಮಕತೆ 'ಮೈ ಕಂಟ್ರಿ ಮೈ ನೇಷನ್' 1000 ಪುಟಗಳಿವೆ.

ಹಾಜರಿ ಪ್ರಮಾಣ ಶೇಕಡಾ 92.21

ಹಾಜರಿ ಪ್ರಮಾಣ ಶೇಕಡಾ 92.21

ಹಾಗಂತ ತೊಂಬತ್ತೊಂದು ವರ್ಷದ ಅಡ್ವಾಣಿ ಅವರು ವಯೋ ಸಹಜ ಹಾಗೂ ಅನಾರೋಗ್ಯ ಕಾರಣಕ್ಕೆ ಹೀಗೆ ಮಾಡುತ್ತಿರಬಹುದಾ ಎಂಬ ಅನುಮಾನ ಬರಬಹುದು. ಆದರೆ ಅವರು ಸಂಸತ್ ಗೆ ಹಾಜರಾಗಿರುವ ಪ್ರಮಾಣ ಗಮನಿಸಿದರೆ, ಅವರೆಷ್ಟು ಚಟುವಟಿಕೆಯಿದ್ದಾರೆ ಎಂಬ ಸಂಗತಿ. ಏಕೆಂದರೆ ಅಡ್ವಾಣಿ ಅವರು ಈ ಲೋಕಸಭಾ ಅವಧಿಯಲ್ಲಿ 92% ಹಾಜರಾತಿ ಹೊಂದಿದ್ದಾರೆ. ಜೂನ್ 4, 2014 ಮತ್ತು ಜನವರಿ 8, 2019ರ ಮಧ್ಯೆ ಲೋಕಸಭೆಯ 16 ಅಧಿವೇಶನದಲ್ಲಿ 321 ಬಾರಿ ಚರ್ಚೆಗಾಗಿ ಸೇರಿದ್ದು, ಆ ಪೈಕಿ 296 ದಿನ ಅಡ್ವಾಣಿ ಹಾಜರಾತಿ ಹಾಕಿದ್ದಾರೆ. ಅಂದರೆ ಹಾಜರಿ ಪ್ರಮಾಣ ಶೇಕಡಾ 92.21 ಆಗುತ್ತದೆ.

ಇವರನ್ನು ರಾಷ್ಟ್ರಪತಿ ಹುದ್ದೆಗೆ ಮೋದಿ ಏಕೆ ಆರಿಸಲಿಕ್ಕಿಲ್ಲ?ಇವರನ್ನು ರಾಷ್ಟ್ರಪತಿ ಹುದ್ದೆಗೆ ಮೋದಿ ಏಕೆ ಆರಿಸಲಿಕ್ಕಿಲ್ಲ?

English summary
An analysis of the Lok Sabha records available on its website shows that in the past five years, LK Advani has uttered just 365 words in the House. All the 365 words that Advani uttered in the present Lok Sabha were uttered in 2014. He hasn't spoken in the Lok Sabha since December 19, 2014, show Lok Sabha records for the past five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X