ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ, ನೇಪಾಳ ಬಿಟ್ಟರೆ ಭಾರತವೇ ಬಡರಾಷ್ಟ್ರ: ಐಎಂಎಫ್

|
Google Oneindia Kannada News

ನವದೆಹಲಿ, ಅಕ್ಟೋಬರ್.14: ಭಾರತದಲ್ಲಿ 2020ನೇ ಸಾಲಿನ ತಲಾ ಜಿಡಿಪಿ ದರದಲ್ಲಿ ಭಾರೀ ಕುಸಿತ ಕಂಡು ಬರಲಿದೆ. ಬಾಂಗ್ಲಾದೇಶ ಕೂಡಾ ಭಾರತವನ್ನು ಹಿಂದಿಕ್ಕಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪ್ರಸ್ತಾಪವನ್ನು ಇಟ್ಟಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಗೊಂದಲವನ್ನು ಹುಟ್ಟು ಹಾಕಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎಐಸಿಸಿ ಮಾಜಿ ಅಧ್ಯಕ್ಷ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಐಎಂಎಫ್ ಪ್ರಸ್ತಾಪವನ್ನೇ ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ದೇಶದ ಆರ್ಥಿಕತೆ ಚೇತರಿಕೆಗೆ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧ: ನಿರ್ಮಲಾ ಸೀತಾರಾಮನ್ದೇಶದ ಆರ್ಥಿಕತೆ ಚೇತರಿಕೆಗೆ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧ: ನಿರ್ಮಲಾ ಸೀತಾರಾಮನ್

"ದ್ವೇಷಪೂರಿತ ಸಾಂಸ್ಕೃತಿಕ ರಾಷ್ಟ್ರೀಯತೆಯೇ ಬಿಜೆಪಿಯ ಆರು ವರ್ಷಗಳ ಘನ ಸಾಧನೆಯಾಗಿದ್ದು, ಭಾರತವನ್ನೇ ಹಿಂದಿಕ್ಕಲು ಬಾಂಗ್ಲಾದೇಶ ಸಜ್ಜಾಗುತ್ತಿದೆ" ಎಂದು ಸಂಸದ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

IMF Predicts Bangladesh Overtakes India In Per Capita GDP Growth: Rahul Gandhi Slaps Govt

ಭಾರತದ ತಲಾ ಜಿಡಿಪಿ ಬಗ್ಗೆ ಐಎಂಎಫ್ ಹೇಳಿದ್ದೇನು?

ಜಾಗತಿಕ ಮಟ್ಟದಲ್ಲಿ ಭಾರತದ ತಲಾ ಜಿಡಿಪಿ ಪ್ರಮಾಣವು ತೀರಾ ಕೆಳಮಟ್ಟದಲ್ಲಿದೆ. ಒಂದು ಹಂತದಲ್ಲಿ ಬಾಂಗ್ಲಾದೇಶ ಕೂಡಾ ಭಾರತವನ್ನು ಹಿಂದಿಕ್ಕುವಂತಾ ಪರಿಸ್ಥಿತಿಯಿದೆ. ಬಹುಶಃ ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ತಲಾ ಜಿಡಿಪಿಯಲ್ಲಿ ಬೆಳವಣಿಗೆ ಕಂಡು ಬರಬಹುದು ಎಂದು ಐಎಂಎಫ್ ತಿಳಿಸಿದೆ.

ಮಂಗಳವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಿಶ್ವ ಆರ್ಥಿಕ ಔಟ್‌ಲುಕ್ ವರದಿಯನ್ನು ಬಿಡುಗಡೆಗೊಳಿಸಿದೆ. ಅದರ ಪ್ರಕಾರ 2021ರ ಮಾರ್ಚ್.31ಕ್ಕೆ ಆರ್ಥಿಕ ವರ್ಷದ ಅಂತ್ಯದಲ್ಲಿ ಭಾರತದ ತಲಾ ಜಿಡಿಪಿ ಶೇಕಡಾ 10.5 ರಷ್ಟು ಕುಸಿಯಲಿದ್ದು 1,877 ಡಾಲರ್‌ಗೆ ತಲುಪಲಿದೆ. ಇದರಿಂದ ಅತಿಕಡಿಮೆ ತಲಾ ಜಿಡಿಪಿಯನ್ನು ಹೊಂದಿರುವ ದಕ್ಷಿಣ ಏಷ್ಯಾದ ಮೂರನೇ ರಾಷ್ಟ್ರವಾಗಿ ಭಾರತವು ಗುರುತಿಸಿಕೊಳ್ಳಲಿದೆ. ಅತಿ ಕಡಿಮೆ ತಲಾ ಜಿಡಿಪಿ ಹೊಂದಿರುವ ಮೊದಲ ರಾಷ್ಟ್ರ ಪಾಕಿಸ್ತಾನವಾಗಿದ್ದು, ನೇಪಾಳ ಎರಡನೇ ಸ್ಥಾನದಲ್ಲಿದೆ.

ದಕ್ಷಿಣ ಏಷ್ಯಾದಲ್ಲೇ ಇರುವ ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ನಂತಾ ರಾಷ್ಟ್ರಗಳಲ್ಲಿಯೇ ತಲಾ ಜಿಡಿಪಿ ಭಾರತಕ್ಕಿಂತ ಉತ್ತಮವಾಗಿದೆ. ಬಾಂಗ್ಲಾದೇಶದ ತಲಾ ಜಿಡಿಪಿಯು ಭಾರತಕ್ಕೆ ಹೋಲಿಸಿದರೆ ಶೇ.4ರಷ್ಟು ಏರಿಕೆಯಾಗಲಿದೆ ಎಂದು ಐಎಂಎಫ್ ತಿಳಿಸಿತ್ತು.

English summary
IMF Predicts Bangladesh Overtakes India In Per Capita GDP Growth: Rahul Gandhi Slaps Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X