ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 3ರ ವೇಳೆಗೆ ಮಹಾರಾಷ್ಟ್ರ, ಗುಜರಾತ್‌ ಮೇಲೆ ಚಂಡಮಾರುತ ಸಂಭವ

|
Google Oneindia Kannada News

ನವದೆಹಲಿ, ಮೇ 31; ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಮತ್ತು ಲಕ್ಷದ್ವೀಪದ ಸಮೀಪ ಭಾನುವಾರ ಉಂಟಾಗಿರುವ ಕಡಿಮೆ ಒತ್ತಡದ ಕಾರಣದಿಂದ ಉತ್ತರ ಮಹಾರಾಷ್ಟ್ರ ಹಾಗೂ ಗುಜರಾತ್‌ನ ಕರಾವಳಿ ಮೇಲೆ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Recommended Video

ಫ್ಲೈಟ್ ಹತ್ತಿ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿದ 5 ವರ್ಷದ ಪೋರ | 5 year old reunited with Mom

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ ಮೊಹಪಾತ್ರ ಭಾನುವಾರ ಎಎನ್ಐಗೆ ಈ ವಿಷಯ ಖಚಿತ ಪಡಿಸಿದ್ದು, ''ಜೂನ್ 3 ರ ಸಂಜೆಯ ವೇಳೆಗೆ ದೇಶದ ಪಶ್ಚಿಮ ಕರಾವಳಿಯ ಉತ್ತರದ ಕಡೆಗೆ ಈ ಚಂಡಮಾರುತ ಬೀಸಲಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುವ ಸಂಭವ ತೀರಾ ಕಡಿಮೆ'' ಎಂದು ತಿಳಿಸಿದ್ದಾರೆ.

ಉತ್ತರ ಭಾರತದಾದ್ಯಂತ ಇನ್ನೊಂದು ದಿನದೊಳಗೆ ಉಷ್ಣಗಾಳಿ ತಗ್ಗುವ ಸಾಧ್ಯತೆಉತ್ತರ ಭಾರತದಾದ್ಯಂತ ಇನ್ನೊಂದು ದಿನದೊಳಗೆ ಉಷ್ಣಗಾಳಿ ತಗ್ಗುವ ಸಾಧ್ಯತೆ

ಅಂಫಾನ್ ಈ ತಿಂಗಳಲ್ಲಿ ಕರಾವಳಿ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳನ್ನು ಧ್ವಂಸ ಮಾಡಿದ ಬೆನ್ನಲ್ಲೇ ಮತ್ತೊಂದು ಚಂಡಮಾರುತದ ಮುನ್ಸೂಚನೆ ಬಂದಿರುವುದು ಆತಂಕ ತಂದೊಡ್ಡಿದೆ.

 IMD Cyclonic Storm Warn tO Gujarat And North Maharashtra Coast

ಏತನ್ಮಧ್ಯೆ, ಮುಂದಿನ ಒಂದು ವಾರ ಉತ್ತರ ಭಾರತದಲ್ಲಿ ಮಳೆ ಹಾಗೂ ಬಿಸಿ ಗಾಳಿ ಪ್ರಮಾಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 8 ರವರೆಗೆ ದೆಹಲಿಯಲ್ಲಿ ಮರುಕಳಿಸುವ ಸಾಧ್ಯತೆಯಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಈ ವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಇರಲಿದೆ.

English summary
IMD Cyclonic Storm Warn TO Gujarat And North Maharashtra Coast nearly June 3rd. IMD Director Mrutyunjay Mohapatra Confirms It.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X