ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಇಲಾಖೆ ಫೇಸ್‌ಬುಕ್‌ ಖಾತೆಯಲ್ಲಿ 'ಗುಂಡಿನ ಪಾರ್ಟಿ': ಪೇಚಿಗೆ ಸಿಲುಕಿದ ಅಮಿತ್ ಶಾ

|
Google Oneindia Kannada News

ದೆಹಲಿ, ಮೇ 28: ಅಮಿತ್ ಶಾ ಅವರ ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಎಡವಟ್ಟಿನ ಘಟನೆಯೊಂದು ನಡೆದಿದೆ. ಮನೆಯೊಂದರಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವ ಫೋಟೋಗಳು ಗೃಹ ಇಲಾಖೆಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೆಯಾಗಿದೆ.

ಎರಡು ಫುಲ್ ಬಾಟಲ್ ರಾಯಲ್ ಸ್ಟಾಗ್ ಮತ್ತು ಅದರ ಜೊತೆಗೆ ತಿಂಡಿ, ನೀರಿನ ಬಾಟಲ್‌ಗಳು ಇದ್ದವು. ಜೊತೆಗೆ ವ್ಯಕ್ತಿಯೊಬ್ಬರು ಕಾಲಿನ ದೃಶ್ಯವೂ ಕಾಣಿಸುತ್ತಿದೆ. ಈ ಫೋಟೋ ಗೃಹ ಇಲಾಖೆಯಲ್ಲಿ ಪೋಸ್ಟ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.

ದೇಶದಲ್ಲಿ ಕೊವಿಡ್ ಲೆಕ್ಕಾಚಾರ: ಕೇರಳ, ಅಸ್ಸಾಂನಲ್ಲಿ ಸೋಂಕು ದ್ವಿಗುಣದೇಶದಲ್ಲಿ ಕೊವಿಡ್ ಲೆಕ್ಕಾಚಾರ: ಕೇರಳ, ಅಸ್ಸಾಂನಲ್ಲಿ ಸೋಂಕು ದ್ವಿಗುಣ

ಅನೇಕರು ಆ ಪೋಸ್ಟ್ ಗೆ ವಿಧವಿಧವಾಗಿ ಕಾಮೆಂಟ್ ಮಾಡಿದ್ದಾರೆ. ಗೃಹ ಇಲಾಖೆಯ ಖಾತೆಯಲ್ಲಿ ಇಂತಹ ಫೋಟೋ ಹೇಗೆ ಸಾಧ್ಯ ಎಂಬ ಗೊಂದಲ ಉಂಟಾಗಿದೆ. ಇದಕ್ಕೆ ಯಾರು ಹೊಣೆ? ಈ ಪೇಜ್ ನಿಯಂತ್ರಿಸುತ್ತಿರುವ ಅಡ್ಮಿನ್ ಏನಪ್ಪಾ ಇದು? ಎಂದು ಟೀಕೆ ವ್ಯಕ್ತವಾಗಿದೆ.

Image of Whiskey Bottles Posted on Ministry of Home Affairs Facebook Page

ಇನ್ನು ಕೆಲವರು ಈ ಪೋಸ್ಟ್ ಗೆ ಕಾಲೆಳೆದಿದ್ದಾರೆ. ಅಂಫಾನ್ ಚಂಡಮಾರುತ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅನೇಕ ಫೋಟೋಗಳು ಈ ಹಿಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಆಗಿದ್ದವು. ಅದಕ್ಕೆ ಹೋಲಿಸಿ, ಅಂಫಾನ್ ಚಂಡಮಾರುತ ಪರಿಸ್ಥಿತಿ ನಿಯಂತ್ರಿಸಿ ರಿಲ್ಯಾಕ್ಸ್ ಮಾಡ್ತಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಇಲಾಖೆ ''ಕಿರಿಯ ವ್ಯಕ್ತಿಯೊಬ್ಬರು ಖಾತೆಯನ್ನು ನಿರ್ವಹಿಸಿರುವುದರಿಂದ ಇಂತಹ ತಪ್ಪು ಸಂಭವಿಸಿದೆ. ವೈಯಕ್ತಿಕ ಮತ್ತು ಅಧಿಕೃತ ಖಾತೆಯನ್ನು ಪಟ್ಟಿ ನಿಯಂತ್ರಿಸುವ ಭರದಲ್ಲಿ ಎಡವಟ್ಟು ಆಗಿದೆ ಎಂದಿದೆ.

ಬೆಳಿಗ್ಗೆ 9.32ರ ಸಮಯದಲ್ಲಿ ಈ ಪೋಸ್ಟ್ ನ್ನು ಫೇಸ್‌ಬುಕ್ ಖಾತೆಯಿಂದ ತೆಗೆದು ಹಾಕಲಾಗಿದೆ. ಸುಮಾರು 15 ನಿಮಿಷಗಳ ಕಾಲ ಈ ಫೋಟೋಗಳು ಪೇಜ್‌ನಲ್ಲಿತ್ತು ಎಂದು ಹೇಳಲಾಗಿದೆ. ಕೇಂದ್ರ ಗೃಹ ಇಲಾಖೆಯ ಖಾತೆಗೆ 2.9 ಲಕ್ಷ ಫಾಲೋವರ್ಸ್ ಇದ್ದಾರೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಯಾವುದೇ ಸ್ಪಷ್ಟನೆ ನೀಡಿಲ್ಲ.

English summary
Image of whiskey bottles posted on ministry of home affairs facebook page. this is an inadvertent mistake on part of the member handling the MHA page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X