ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ವರ್ಷದ ಬಾಲಕನಿಗೆ ಕೊರೊನಾ ಎಂದು ಸುಳ್ಳು ಸುದ್ದಿ

|
Google Oneindia Kannada News

ನವ ದೆಹಲಿ, ಮೇ 7: 8 ವರ್ಷದ ಬಾಲಕನಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎನ್ನುವ ಪೋಸ್ಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಎಲ್ಲರೂ ಆ ಸುದ್ದಿ ನಿಜ ಎಂದು ನಂಬಿದ್ದರು. ಆದರೆ, ಇದೀಗ ಈ ಪೋಸ್ಟ್ ಫೇಕ್ ಎಂದು ತಿಳಿದುಬಂದಿದೆ.

Recommended Video

ಬೆಂಗಳೂರಿನಿಂದ ನಡೆದುಕೊಂಡೇ ಉತ್ತರಪ್ರದೇಶಕ್ಕೆ ಹೋಗ್ತಿದ್ದಾರೆ ವಲಸೆ ಕಾರ್ಮಿಕರು | UP | Oneindia Kannada

ಮೂಗಿನಲ್ಲಿ ಟ್ಯೂಬ್ ಅಳವಡಿಸಿ, ಹಾಸಿಗೆಯ ಮೇಲೆ ಮಲಗಿರುವ 8 ವರ್ಷದ ಬಾಲಕನ ಚಿತ್ರ ಫೇಸ್‌ ಬುಕ್‌ನಲ್ಲಿ ವೈರಲ್ ಆಗಿತ್ತು. ಆ ಪೋಸ್ಟ್‌ನಲ್ಲಿ ಆ ಹುಡುಗ ಕೊರೊನಾ ವೈರಸ್‌ನಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿತ್ತು.

Fake: ಜಿಎಸ್‌ಟಿ ಮರುಪಾವತಿ ಬಗ್ಗೆ ಈ ಸಂದೇಶ ನಂಬಬೇಡಿFake: ಜಿಎಸ್‌ಟಿ ಮರುಪಾವತಿ ಬಗ್ಗೆ ಈ ಸಂದೇಶ ನಂಬಬೇಡಿ

''ದಯಮಾಡಿ ನಿಮ್ಮ ಕೆಲವು ನಿಮಿಷಗಳನ್ನು ನೀಡಿ. ಈ ಪೋಸ್ಟ್‌ ಅನ್ನು ನಾಲ್ಕು ಗ್ರೂಪ್‌ಗಳಿಗೆ ಶೇರ್ ಮಾಡಿ. ಈ ಹುಡುಗನಿಗೆ ಹೆಚ್ಚು ಪ್ರಾರ್ಥನೆ ತಲುಪುವಂತೆ ಮಾಡಿ. 8 ವರ್ಷದ ಈ ಬಾಲಕನಿಗೆ ಕೊರೊನಾ ವೈರಸ್ ಸೋಂಕು ಇದೆ. ನನ್ನ ಮಗ ಹೆಚ್ಚು ಪ್ರಾರ್ಥನೆ ಪಡೆಯುತ್ತಾನೆ.'' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆಯಲಾಗಿತ್ತು.

Image Of 8 Year Old Boy Suffering From Coronavirus News is Fake

ಬಾಲಕನ ಪೋಸ್ಟ್‌ ನೋಡಿ ಅನೇಕರು ಬೇಸರಪಟ್ಟರು. ಈ ಪೋಸ್ಟ್ 80,000 ಕಾಮೆಂಟ್‌ಗಳನ್ನು ಪಡೆಯಿತು. 2,15,000 ಜನರು ಶೇರ್ ಮಾಡಿದರು. Prayer Request Chaple ಎಂದು ಫೇಕ್ ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.

ಆದರೆ, ಇದೊಂದು ಸುಳ್ಳು ಸುದ್ದಿ ಎನ್ನುವುದು ತಿಳಿದುಬಂದಿದೆ. ಸೋಷಿಯಲ್ ಮೀಡಿಯದಲ್ಲಿ ಬಾಲಕನ ಹೆಸರಿನಲ್ಲಿ ಈ ರೀತಿ ಫೇಕ್‌ ಸುದ್ದಿಗಳನ್ನು ಹರಿಬಿಟ್ಟಿದ್ದಾರೆ.

English summary
Image of 8 year old boy suffering from coronavirus is incorrect. The post viral in facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X