ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಆವಿಷ್ಕಾರ: ಐದೇ ಸೆಕೆಂಡ್‌ಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಬಹುದು

|
Google Oneindia Kannada News

ನವದೆಹಲಿ, ಏಪ್ರಿಲ್ 24: ಕೇವಲ ಐದೇ ಸೆಕೆಂಡುಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಬಹುದಾದ ಸಾಫ್ಟ್‌ವೇರ್‌ನ್ನು ಐಐಟಿ ಪ್ರೊಫೆಸರ್ ಅಭಿವೃದ್ಧಿಪಡಿಸಿದ್ದಾರೆ.
ಶಂಕಿತ ರೋಗಿಗೆ ಎಕ್ಸ್​ರೇ ಸ್ಕ್ಯಾನ್ ಮಾಡಿದರೆ ಸಾಕು ಅದರಿಂದ ಸೋಂಕನ್ನು ಪತ್ತೆ ಹಚ್ಚಬಹುದಾಗಿದೆ.

ಕಮಲ್ ಜೈನ್ ಅವರ ಸಾಫ್ಟ್​ವೇರ್ ಮಿಕ್ಕ ಪತ್ತೆದಾರಿ ಕೆಲಸ ಮಾಡುತ್ತದೆ. ರೋಗಿಯ ನ್ಯುಮೋನಿಯಾ ರೋಗಕ್ಕೆ ಕೊವಿಡ್ ಕಾರಣವೇ ಅಥವಾ ಅವರಲ್ಲಿರುವ ಸೋಂಕು ಬೇರೆಯದ್ದೇ ಎಂಬುದನ್ನು ಈ ತಂತ್ರಾಂಶ ಕಂಡುಹಿಡಿಯಬಲ್ಲದಾಗಿದೆ.

ವಿಡಿಯೋ: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಕೊರೊನಾ ಸೋಂಕಿತರೊಂದಿಗೆ ಇರುವ ಶಿಕ್ಷೆ ವಿಡಿಯೋ: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಕೊರೊನಾ ಸೋಂಕಿತರೊಂದಿಗೆ ಇರುವ ಶಿಕ್ಷೆ

ರೋಗಿಯ ಎಕ್ಸ್ ರೇ ಸ್ಕ್ಯಾನ್ ಮಾಡಿ ಆ ಚಿತ್ರವನ್ನು ಅಪ್​ಲೋಡ್ ಮಾಡಬೇಕು. ಬಳಿಕ ಸಾಫ್ಟ್​ವೇರ್ ಅನಲೈಸ್ ಮಾಡುತ್ತದೆ.ಕೊವಿಡ್ ಸೋಂಕು ಇದೆಯಾ, ಸೋಂಕಿನ ತೀವ್ರತೆ ಎಷ್ಟಿದೆ, ಬ್ಯಾಕ್ಟೀರಿಯಾದಿಂದ ಸೋಂಕು ತಗುಲಿದೆಯೇ ಎಂಬಿತ್ಯಾದಿಯನ್ನು ಈ ಸಾಫ್ಟ್​ವೇರ್ ಐದು ಸೆಕೆಂಡಲ್ಲಿ ವಿಶ್ಲೇಷಿಸಿ ರಿಸಲ್ಟ್ ನೀಡಬಲ್ಲುದು ಎಂದು ಇವರು ಮಾಹಿತಿ ನೀಡಿದ್ದಾರೆ.

IIT Professor Develops Software To Detect COVID-19

ಐಐಟಿ ಪ್ರೊಫೆಸರ್ ಅವರಿಗೆ ಈ ಸಾಫ್ಟ್​ವೇರ್ ಅಭಿವೃದ್ಧಿಪಡಿಸಲು 40 ದಿನ ಬೇಕಾಯಿತಂತೆ. ಕಮಲ್ ಜೈನ್ ಅವರ ಈ ಆವಿಷ್ಕಾರಕ್ಕೆ ಇದೂವರೆಗೂ ಯಾವ ವೈದ್ಯಕೀಯ ಸಂಸ್ಥೆಯು ಮಾನ್ಯತೆ ನೀಡಿಲ್ಲ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅವರ ಪರಾಮರ್ಶೆಗೆ ಇವರು ಕಳುಹಿಸಿದ್ದಾರೆ. ಹಾಗೆಯೇ ತಮ್ಮ ತಂತ್ರಾಂಶಕ್ಕೆ ಪೇಟೆಂಟ್ ಪಡೆಯಲು ಅರ್ಜಿ ಹಾಕಿದ್ದಾರೆ.

ಕೊರೊನಾ ಪತ್ತೆಗೆ ಟೆಸ್ಟ್ ಕಿಟ್​ಗಳು ನಿತ್ಯವೂ ಆವಿಷ್ಕಾರಗೊಳ್ಳುತ್ತಿವೆ. ಕೊರೊನಾ ಪರೀಕ್ಷೆಯ ಫಲಿತಾಂಶಕ್ಕೆ ಮೊದಲು ವಾರಗಟ್ಟಲೆ ಕಾಯಬೇಕಾಗಿತ್ತು. ಈಗ ಕೆಲವೇ ಗಂಟೆಯಲ್ಲಿ ಫಲಿತಾಂಶ ಲಭ್ಯ ಸಾಧ್ಯವಾಗಿದೆ. ಆದರೆ, ಐಐಟಿಯ ಪ್ರೊಫೆಸರ್​​ವೊಬ್ಬರು ಐದೇ ಸೆಕೆಂಡಲ್ಲಿ ಫಲಿತಾಂಶ ನೀಡುವ ತಂತ್ರಜ್ಞಾನ ಆವಿಷ್ಕರಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಕೊರೊನಾ: ಸಂಚಾರಿ ಗಂಟಲು ದ್ರವ ಸಂಗ್ರಹ ಕೇಂದ್ರಕ್ಕೆ ಚಾಲನೆಕೊರೊನಾ: ಸಂಚಾರಿ ಗಂಟಲು ದ್ರವ ಸಂಗ್ರಹ ಕೇಂದ್ರಕ್ಕೆ ಚಾಲನೆ

ಉತ್ತರಾಖಂಡ್​ನಲ್ಲಿರುವ ರೂರ್ಕಿಯ ಐಐಟಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರೊಫೆಸರ್ ಕಮಲ್ ಜೈನ್ ಅವರು ಕೊವಿಡ್ ಪತ್ತೆ ಪರೀಕ್ಷೆ ಮಾಡುವ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದಾರೆ.

English summary
An IIT-Roorkee professor claims to have developed a software which can detect COVID-19 within five seconds using X-ray scan of the suspected patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X