ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ರಾಜ್ಯಗಳು, 28 ಜಿಲ್ಲೆಗಳು ಡೇಂಜರ್: IIT ದೆಹಲಿ ವರದಿ

|
Google Oneindia Kannada News

ನವ ದೆಹಲಿ, ಏಪ್ರಿಲ್ 25: ಭಾರತದಲ್ಲಿ ಕೊರೊನಾ ವೈರಸ್‌ ಹರಡುವಿಕೆಯ ಬಗ್ಗೆ IIT ದೆಹಲಿ ವರದಿ ಮಾಡಿದೆ. 7 ರಾಜ್ಯಗಳು, 28 ಜಿಲ್ಲೆಗಳಲ್ಲಿ ವೈರಸ್‌ ಹಬ್ಬುವಿಕೆಯ ವೇಗ ಹೆಚ್ಚಾಗುತ್ತಿದೆ ಎಂದು ಅವರಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಈವರೆಗೆ 24,506 ಜನರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. 775 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನ, ಝಾರ್ಖಂಡ್, ಗುಜರಾತ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ರಾಜ್ಯಗಳಲ್ಲಿ ಕೊರೊನಾ ಹರಡುತ್ತಿರುವುದು ಹೆಚ್ಚಾಗುತ್ತಿದೆ. ಈ ರಾಜ್ಯಗಳಲ್ಲಿ ಅಪಾಯ ಜಾಸ್ತಿ ಇದೆ. ದೇಶದ ಒಟ್ಟು ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಕೊರೊನಾ ಪ್ರಕರಣಗಳು ಈ ಏಳು ರಾಜ್ಯಗಳಲ್ಲಿ ಸಂಭವಿಸುತ್ತಿವೆ.

ಕೊರೊನಾ ರಣಕೇಕೆ: ಯಾವ ಯಾವ ದೇಶದಲ್ಲಿ ಎಷ್ಟು ಪ್ರಕರಣಗಳು?ಕೊರೊನಾ ರಣಕೇಕೆ: ಯಾವ ಯಾವ ದೇಶದಲ್ಲಿ ಎಷ್ಟು ಪ್ರಕರಣಗಳು?

ಐಐಟಿ ದೆಹಲಿ ಸಿದ್ಧಪಡಿಸಿದ ಹೊಸ ಡ್ಯಾಶ್‌ಬೋರ್ಡ್‌ PRACRITI ಯಿಂದ ಬಂದಿದೆ. ಐಐಟಿ ದೆಹಲಿಯ ಪ್ರೊಫೆಸರ್ ಹರಿಪ್ರಸಾದ್ ಕೊಡಮಣ ಅವರ ಸಹಯೋಗದೊಂದಿಗೆ ಪ್ರೊಫೆಸರ್ ಎನ್ ಎಂ ಅನೂಪ್ ಕೃಷ್ಣನ್ ನೇತೃತ್ವದಲ್ಲಿ ವರದಿಯೊಂದು ತಯಾರಾಗಿದೆ.

ರಾಷ್ಟ್ರೀಯ ಪ್ರಮಾಣಕ್ಕಿಂತ ಹೆಚ್ಚು

ರಾಷ್ಟ್ರೀಯ ಪ್ರಮಾಣಕ್ಕಿಂತ ಹೆಚ್ಚು

ಕೊರೊನಾ ವೈರಸ್ ಪ್ರಸರಣ ದರ ರಾಷ್ಟ್ರೀಯ ಮಟ್ಟದ ದರಕ್ಕಿಂತ ಹೆಚ್ಚಾಗಿ ಕೆಲವು ರಾಜ್ಯಗಳ ಪ್ರಸರಣ ದರ ಬೆಳೆಯುತ್ತಿದೆ ಎಂದು ಐಐಟಿ ದೆಹಲಿ ಸಂಶೋಧಕರು ತಿಳಿಸಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನ, ಝಾರ್ಖಂಡ್, ಗುಜರಾತ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ರಾಜ್ಯಗಳಲ್ಲಿ ವೈರಸ್ ಹಬ್ಬುತ್ತಿರುವ ಪ್ರಮಾಣ ಹೆಚ್ಚಿದೆ. 100 ಜಿಲ್ಲೆಗಳಲ್ಲಿ ದೇಶದ ಶೇಕಡ 60 ರಷ್ಟು ಪ್ರಕರಣಗಳು ದಾಖಲಾಗಿವೆ.

ಪ್ರಸರಣ ದರ ಅಂದರೆ ಏನು?

ಪ್ರಸರಣ ದರ ಅಂದರೆ ಏನು?

ಪ್ರಸರಣ ದರ ಅಂದರೆ ಒಬ್ಬ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡರೆ ಆತನಿಂದ, ಎಷ್ಟು ಜನರಿಗೆ ವೈರಸ್‌ ಹರಡಿದೆ ಎನ್ನುವುದಾಗಿದೆ. ಉದಾಹರಣೆಗೆ ಗುಜರಾತ್ ರಾಜ್ಯದಲ್ಲಿ ಪ್ರಸರಣ ದರ ಹೆಚ್ಚಿದೆ. ಅಂದರೆ, ಗುಜರಾತ್‌ನಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ಬಂದರೆ, ಅದು ಶೇಕಡ 3.3 ಜನರಿಗೆ ಹರಡುತ್ತಿದೆ. ರಾಷ್ಟ್ರೀಯ ಪ್ರಸರಣ ದರ 1.8 ಇದ್ದು, 28 ಜಿಲ್ಲೆಗಳಲ್ಲಿ ಪ್ರಸರಣ ದರ ಅದಕ್ಕಿಂತ ಹೆಚ್ಚಿದೆ.

ರೋಗದ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್: ಬೆಚ್ಚಿಬಿದ್ದ ಹೊಂಗಸಂದ್ರ ಜನತೆ!ರೋಗದ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್: ಬೆಚ್ಚಿಬಿದ್ದ ಹೊಂಗಸಂದ್ರ ಜನತೆ!

28 ಜಿಲ್ಲೆಗಳಲ್ಲಿ ಪ್ರಸರಣ ದರ ಹೆಚ್ಚು

28 ಜಿಲ್ಲೆಗಳಲ್ಲಿ ಪ್ರಸರಣ ದರ ಹೆಚ್ಚು

ಮಹಾರಾಷ್ಟ್ರ (3 ಜಿಲ್ಲೆಗಳು), ರಾಜಸ್ಥಾನ (5 ಜಿಲ್ಲೆಗಳು), ತಮಿಳು ನಾಡು (3 ಜಿಲ್ಲೆಗಳು), ಗುಜರಾತ್ (4 ಜಿಲ್ಲೆಗಳು), ಕರ್ನಾಟಕ (2 ಜಿಲ್ಲೆಗಳು), ಉತ್ತರ ಪ್ರದೇಶ (4 ಜಿಲ್ಲೆಗಳು) ತೆಲಂಗಾಣ (2 ಜಿಲ್ಲೆಗಳು), ಪಂಜಾಬ್ (1 ಜಿಲ್ಲೆ) ಹಾಗೂ ಮಧ್ಯ ಪ್ರದೇಶ (4 ಜಿಲ್ಲೆಗಳು) ಈ ರಾಜ್ಯಗಳ 28 ಜಿಲ್ಲೆಗಳಲ್ಲಿ ಕೊರೊನಾ ಹರಡುವ ಪ್ರಸರಣ ದರ ಜಾಸ್ತಿ ಇದೆ.

ಕೇರಳ, ಹರಿಯಾಣ ಹಾಗೂ ತಮಿಳುನಾಡು

ಕೇರಳ, ಹರಿಯಾಣ ಹಾಗೂ ತಮಿಳುನಾಡು

ಕೇರಳ, ಹರಿಯಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಪ್ರಸರಣ ದರ ಕಡಿಮೆ ಇದೆ. ಈ ರಾಜ್ಯಗಳಲ್ಲಿನ 6 ಜಿಲ್ಲೆಗಳಲ್ಲಿ ಪ್ರಸರಣ ದರ ಹೆಚ್ಚು ಇದೆ. ತಮಿಳುನಾಡಿನಲ್ಲಿ 6.27 ಪ್ರಸರಣ ದರ ಇದೆ. ಅಂದರೆ, ಒಬ್ಬ ವ್ಯಕ್ತಿಯಿಂದ 6 ಜನರಿಗೆ ಸೋಂಕು ಹರಡುತ್ತಿದೆ. 7 ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದೆ. ಆದರೆ, 9 ರಾಜ್ಯಗಳ 28 ಜಿಲ್ಲೆಗಳಲ್ಲಿ ಪ್ರಸರಣ ದರ ಹೆಚ್ಚಿದೆ. ಇಲ್ಲಿ ವೈರಸ್‌ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವೇಗವಾಗಿ ಹಬ್ಬುತ್ತಿದೆ.

English summary
IIT Delhi researchers has found that the COVID-19 outbreak in seven states. IIT Delhi prepared a Coronavirus dashboard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X