ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಸ್ಸಿಯ ಕೊರೊನಾ ಲಸಿಕೆ ಎಲ್ಲಾ ರೂಪಾಂತರಿ ವಿರುದ್ಧ ಪರಿಣಾಮಕಾರಿ

|
Google Oneindia Kannada News

ನವದೆಹಲಿ, ಜುಲೈ 16: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌(ಐಐಎಸ್ಸಿ) ಅಭಿವೃದ್ಧಿಪಡಿಸಿರುವ ಶಾಖ ಸಹಿಷ್ಣು ಕೊರೊನಾ ಲಸಿಕೆ ಎಲ್ಲಾ ರೂಪಾಂತರಿ ವಿರುದ್ಧ ಪರಿಣಾಮಕಾರಿ ಎಂದು ಅಧ್ಯಯನ ತಿಳಿಸಿದೆ.

ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗಿದೆ, ಎಲ್ಲಾ ರೂಪಾಂತರಿ ವಿರುದ್ಧ ಇದು ಪರಿಣಾಮಕಾರಿ ಎಂದು ಹೇಳಿದೆ. ಗುರುವಾರ ಎಸಿಎಸ್ ಸಾಂಕ್ರಾಮಿಕ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ಐಐಎಸ್ಸಿ ಇನ್ಕ್ಯುಬೇಟೆಡ್ ಬಯೋಟೆಕ್ ಸ್ಟಾರ್ಟ್ ಅಪ್ ಮೈನ್ ವಾಕ್ಸ್‌ನ ಲಸಿಕೆ ಸೂತ್ರೀಕರಣವನ್ನು ಇಲಿಗಳಲ್ಲಿ ಬಲವಾದ ರೋಗನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸಿದೆ ಎಂದು ತಿಳಿಸಿದೆ.

ವಿಶ್ವದ ಟಾಪ್ ಸಂಶೋಧನಾ ವಿವಿಯಲ್ಲಿ ಬೆಂಗಳೂರಿನ ಐಐಎಸ್ಸಿ ನಂ. 1ವಿಶ್ವದ ಟಾಪ್ ಸಂಶೋಧನಾ ವಿವಿಯಲ್ಲಿ ಬೆಂಗಳೂರಿನ ಐಐಎಸ್ಸಿ ನಂ. 1

ಹೆಚ್ಚಿನ ಲಸಿಕೆಗಳು ಪರಿಣಾಮಕಾರಿಯಾಗಿ ಉಳಿಯಲು ಶೈತ್ಯಾಗಾರದ ಅಗತ್ಯವಿರುತ್ತದೆ ಆದರೆ ಇದು ಶಾಖದಲ್ಲಿಯೂ 35 ದಿನಗಳ ಕಾಲ ಇರುತ್ತದೆ ಎಂದು ಹೇಳಲಾಗಿದೆ. ಭಾರತದಲ್ಲಿ ಕೋವಿಶೀಲ್ಡ್ ಆಸ್ಟ್ರಾಜೆನೆಕಾ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿಡಬೇಕು, ಹಾಗೂ ಫೈಜರ್ ಲಸಿಕೆಯನ್ನು ಮೂನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ವಿಶೇಷ ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಡಬೇಕಾಗುತ್ತದೆ.

IISCs Warm Covid Vaccine Effective Against All Major Variant Of Concern: Study

ಪ್ರಸ್ತುತ ಜಾಗತಿಕವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರಗಳ ವಿರುದ್ಧ ಹೋರಾಡುತ್ತದೆ. ಈ ಲಸಿಕೆಯ ಕುರಿತು ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ಯೋಜಿತ ಮಾನವ ಕ್ಲಿನಿಕಲ್ಪ್ರಯೋಗ ನಡೆಯುವ ಸಾಧ್ಯತೆ ಇದೆ.

ಐಐಎಸ್ಸಿ, ಸಿಎಸ್‌ಐಆರ್ಒ ಜತೆಗೆ ಬ್ರಿಟನ್‌ನ ಯಾರ್ಕ್ ವಿಶ್ವವಿದ್ಯಾಲಯ, ದೆಹಲಿಯ ಸಿಎಸ್‌ಐಆರ್ - ಐಜಿಐಬಿ, ಫರಿದಾಬಾದ್‌ನ ಟ್ರಾನ್ಸ್‌ಸ್ಲೇಷನ್ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ಚಂಡೀಗಢದ ಸಿಎಸ್‌ಐಆರ್-ಸೂಕ್ಷ್ಮ ಜೀವಿ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದಾರೆ.

ಇದು ಇಲಿಗಳನ್ನು ವೈರಸ್‌ನಿಂದ ರಕ್ಷಿಸಿದೆ ಎಂದಿರುವ ಸಂಶೋಧಕರು, ಒಂದು ತಿಂಗಳವರೆಗೆ 37 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮತ್ತು 90 ನಿಮಿಷಗಳವರೆಗೆ 100 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ ಎಂದಿದ್ದಾರೆ.

English summary
A heat-tolerant COVID-19 vaccine formulation developed by the Indian Institute of Science (IISc) Bengaluru has proven effective against all current SARS-CoV-2 variants of concern, according to a study in animals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X