ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PNG Price Hike : ದೇಶೀಯ ಪಿಎನ್‌ಜಿ ಬೆಲೆ 4.25 ರೂ ಏರಿಸಿದ ಐಜಿಎಲ್

|
Google Oneindia Kannada News

ನವದೆಹಲಿ, ಏಪ್ರಿಲ್ 14: ದೇಶದಲ್ಲಿ ಹಣದುಬ್ಬರವು ಹೆಚ್ಚಳವಾಗುತ್ತಿದೆ. ಈ ನಡುವೆ ನೈಸರ್ಗಿಕ ಅನಿಲ ವಿತರಣಾ ಕಂಪನಿ, ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಡೊಮೆಸ್ಟಿಕ್ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಬೆಲೆಯನ್ನು ಏಪ್ರಿಲ್‌ನಲ್ಲಿ ಎರಡನೇ ಬಾರಿಗೆ ಏರಿಕೆ ಮಾಡಿದೆ. ಬುಧವಾರ ಮಧ್ಯರಾತ್ರಿಯಿಂದ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (ಎಸ್‌ಸಿಎಂ) ರೂಪಾಯಿ 4.25 ರಷ್ಟು ಹೆಚ್ಚಿಸಿದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ನ ತಡರಾತ್ರಿಯ ಅಧಿಸೂಚನೆಯ ಪ್ರಕಾರ, ಹೊಸ ಬೆಲೆಗಳು ಏಪ್ರಿಲ್ 14, 2022 ರಿಂದ ಜಾರಿಗೆ ಬರುತ್ತವೆ. ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ಗ್ಯಾಸ್ ವೆಚ್ಚದಲ್ಲಿನ ಏರಿಕೆಯಿಂದಾಗಿ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ಈ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

BMTC: ದರ ಏರಿಕೆ ಶಾಕ್; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆBMTC: ದರ ಏರಿಕೆ ಶಾಕ್; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ

ಇನ್ನು ಈ ಪಿಎನ್‌ಜಿಯ ಹೊಸ ಏರಿಕೆ ಬೆಲೆಯು ದೆಹಲಿ, ಎನ್‌ಸಿಆರ್‌ಗೆ ಅನ್ವಯ ಆಗಲಿದೆ. ದೆಹಲಿಯಲ್ಲಿ ಪ್ರತಿ ಪಿಎನ್‌ಜಿ ಬೆಲೆಯು 41.21 ರೂಪಾಯಿ ಆಗಿದೆ. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಪ್ರತಿ ಎಸ್‌ಸಿಎಂಗೆ 41.71 ರೂಪಾಯಿ ಆಗಿದೆ.

IGL Hikes Domestic PNG Price by ₹4.25 per SCM, Heres Latest Rate

ದೇಶೀಯ ಪಿಎನ್‌ಜಿ ಬೆಲೆಯನ್ನು ಶೇಕಡ 16.5ರಷ್ಟು ಹೆಚ್ಚಿಸಿದ್ದ ಸಂಸ್ಥೆ

LPG Price In India : ಭಾರತದ ಎಲ್‌ಪಿಜಿ ದರ ವಿಶ್ವದಲ್ಲೇ ದುಬಾರಿ; ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಹೆಚ್ಚುLPG Price In India : ಭಾರತದ ಎಲ್‌ಪಿಜಿ ದರ ವಿಶ್ವದಲ್ಲೇ ದುಬಾರಿ; ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಹೆಚ್ಚು

ಹಿಂದಿನ ಏಪ್ರಿಲ್ 1 ರಂದು ಕಂಪನಿಯು ದೇಶೀಯ ಪಿಎನ್‌ಜಿ ಬೆಲೆಯನ್ನು ಶೇಕಡ 16.5ರಷ್ಟು ಹೆಚ್ಚಳ ಮಾಡಿತ್ತು. ಕಂಪನಿಯು ಹೇಳಿಕೆಯಲ್ಲಿ, ಪ್ರತಿ ಎಸ್‌ಸಿಎಂಗೆ 5.85 ಹೆಚ್ಚಾಗಿದೆ. ಇದು ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಇನ್‌ಪುಟ್ ಗ್ಯಾಸ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮಾರ್ಚ್ 24 ರಂದು ಪಿಎನ್‌ಜಿ ದರವು ಎಸ್‌ಸಿಎಂಗೆ ಒಂದು ರೂಪಾಯಿ ಏರಿಕೆ ಕಂಡಿತ್ತು.

IGL Hikes Domestic PNG Price by ₹4.25 per SCM, Heres Latest Rate

ದೆಹಲಿ, ಎನ್‌ಸಿಆರ್‌ನಲ್ಲಿನ ಚಿಲ್ಲರೆ ಬೆಲೆ ಇಲ್ಲಿದೆ...

ದೆಹಲಿ: ಪ್ರತಿ ಎಸ್‌ಸಿಎಂಗೆ 45.46 ರೂಪಾಯಿ

ಗಾಜಿಯಾಬಾದ್, ನೋಯ್ಡಾ & ಗ್ರೇಟರ್ ನೋಯ್ಡಾ: ಪ್ರತಿ ಎಸ್‌ಸಿಎಂಗೆ 45.96 ರೂಪಾಯಿ

ಕರ್ನಾಲ್ ಮತ್ತು ರೇವಾರಿ: ಪ್ರತಿ ಎಸ್‌ಸಿಎಂಗೆ 44.67 ರೂಪಾಯಿ

ಗುರುಗ್ರಾಮ್: ಪ್ರತಿ ಎಸ್‌ಸಿಎಂಗೆ 44.06 ರೂಪಾಯಿ

ಮುಜಾಫರ್‌ನಗರ, ಮೀರತ್ ಮತ್ತು ಶಾಮ್ಲಿ: ಪ್ರತಿ ಎಸ್‌ಸಿಎಂಗೆ 49.47 ರೂಪಾಯಿ

ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಬೆಲೆ ಏರಿಕೆ

ದೇಶದಲ್ಲಿ ಹಣದುಬ್ಬರದ ನಡುವೆ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಬೆಲೆ ಏರಿಕೆ ಕಂಡಿದೆ. ನಿರಂತರವಾಗಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಸದ್ಯ ಸ್ಥಿರವಾಗಿದೆ. ಏಪ್ರಿಲ್ ಆರಂಭದಲ್ಲಿ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ದೆಹಲಿ-ಎನ್‌ಸಿಆರ್‌ನಲ್ಲಿ ಸಂಕುಚಿತ ನೈಸರ್ಗಿಕ ಅನಿಲದ (ಸಿಎನ್‌ಜಿ) ಬೆಲೆಯನ್ನು ಪ್ರತಿ ಕೆಜಿಗೆ 2.50 ರೂ.ಗಳಷ್ಟು ಹೆಚ್ಚಿಸಿದೆ. ದರ ಪರಿಷ್ಕರಣೆ ಬಳಿಕ ದೆಹಲಿಯಲ್ಲಿ CNG ಈಗ ಪ್ರತಿ ಕೆಜಿಗೆ 66.61 ರೂ. ಗಾಜಿಯಾಬಾದ್, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ, ಸಿಎನ್‌ಜಿ ಬೆಲೆ ಕೆಜಿಗೆ 69.18 ರೂ.ಗೆ ಏರಿಕೆಯಾಗಿದ್ದು, ಗುರುಗ್ರಾಮದಲ್ಲಿ ಕೆಜಿಗೆ 74.94 ರೂ. ಆಗಿತ್ತು. ಆದರೆ ಈಗ ಮತ್ತೆ ಏರಿಕೆ ಮಾಡಲಾಗಿದೆ.

Recommended Video

Kieron Pollard ಔಟ್ ಆದ ನಂತರ ಪಿಚ್ ಮದ್ಯೆ ನಡೆದಿದ್ದೇನು | Oneindia Kannada

ಜಾಗತಿಕವಾಗಿ ಅನಿಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಈ ಹೆಚ್ಚಳವಾಗಿದೆ. IGL ದೇಶೀಯ ಕ್ಷೇತ್ರಗಳಿಂದ ನೈಸರ್ಗಿಕ ಅನಿಲವನ್ನು ಪಡೆಯುತ್ತದೆ ಮತ್ತು ಆಮದು ಮಾಡಿಕೊಂಡ LNG ಅನ್ನು ಖರೀದಿಸುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಸ್ಪಾಟ್ ಅಥವಾ ಪ್ರಸ್ತುತ ಮಾರುಕಟ್ಟೆಯಲ್ಲಿ LNG ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದು IGL ಗೆ ವೆಚ್ಚವನ್ನು ತಳ್ಳಿದೆ, ಬೆಲೆ ಏರಿಕೆಯ ಅವಶ್ಯಕತೆಯಿದೆ ಎಂದು ಸಂಸ್ಥೆಯು ಈ ಹಿಂದೆ ಹೇಳಿಕೊಂಡಿದೆ. (ಒನ್‌ಇಂಡಿಯಾ ಸುದ್ದಿ)

English summary
IGL Hikes Domestic PNG Price by ₹4.25 per SCM, Heres Latest Rate. Check latest rate in Delhi-NCR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X