ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬ್ಯುಲೆನ್ಸ್‌ಗೆ ಹೋಗೋಕೆ ಜಾಗ ಬಿಡಲ್ವಾ ಹಾಗಾದರೆ ದಂಡ ಕಟ್ಟಿ

|
Google Oneindia Kannada News

ನವದೆಹಲಿ, ಜುಲೈ 16: ಆಂಬ್ಯುಲೆನ್ಸ್‌ಗೆ ಹೋಗೋಕೆ ಜಾಗ ಬಿಡದಿದ್ದರೂ ಇನ್ನುಮುಂದೆ ದಂಡ ಕಟ್ಟಬೇಕಾಗುತ್ತದೆ.

ಹೌದು ಲೋಕಸಭೆಯಲ್ಲಿ ಮೋಟಾರು ವಾಹನ ಕಾಯಿದೆ 2019 ಮಂಡನೆಯಾಗಿದ್ದು, ನಿತಿನ್ ಗಡ್ಕರಿ ಇದನ್ನು ಮಂಡಿಸಿದ್ದಾರೆ. ಈ ಕಾಯ್ದೆ ಪ್ರಕಾರ ಸಂಚಾರ ನಿಯಮ ಉಲ್ಲಂಘಿಸಿದರೆ ಹೆಚ್ಚಿನ ದಂಡ ಕಟ್ಟಬೇಕಾಗುತ್ತದೆ. ಒಂದೊಮ್ಮೆ ಆಂಬುಲೆನ್ಸ್‌ಗೆ ದಾರಿ ಬಿಡದಿದ್ದರೆ 10 ಸಾವಿರ ರೂ ದಂಡ ಕಟ್ಟಬೇಕು ಎಂದು ಹೇಳಿದೆ.

ಜುಲೈ 20ರ ನಂತರ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರಿ ದಂಡಜುಲೈ 20ರ ನಂತರ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರಿ ದಂಡ

ಹಾಗೂ ವಾಹನಗಳು ಪರವಾನಗಿ ಹೊಂದಿರದಿದ್ದರೆ 5 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ. ಹಾಗೆಯೇ ಸಂಚಾರ ನಿಯಮ ಉಲ್ಲಂಘಿಸಿದರೆ ಕಟ್ಟಬೇಕಾದ ಶುಲ್ಕವನ್ನೂ ಪರಿಷ್ಕರಿಸಿದ್ದು, 100 ರೂ ಇದ್ದ ಶುಲ್ಕವನ್ನು 500 ರೂಗೆ ಹೆಚ್ಚಿಸಲಾಗಿದೆ. ಹಾಗೆಯೇ 2000 ರೂವರೆಗೂ ದಂಡ ವಿಧಿಸಬಹುದಾಗಿದೆ.

If you are blocking an Ambulance get ready to pay penalty

ಒಂದೊಮ್ಮೆ ಪರವಾನಗಿಯನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರೂ 5 ಸಾವಿರ ರೂ ದಂಡ ಕಟ್ಟಬೇಕು. ಒಂದೊಮ್ಮೆ ಪರವಾನಗಿ ಕಾಪಿಯನ್ನು ಚಾಲಕ ತನ್ನ ಬಳಿ ಇಟ್ಟುಕೊಳ್ಳದಿದ್ದರೂ ಕೂಡ 2 ಸಾವಿರ ರೂ ದಂಡ ಕಟ್ಟಬೇಕು. ಹೆಲ್ಮೆಟ್‌, ಸೀಟ್ ಬೆಲ್ಟ್‌ ಧರಿಸದಿದ್ದರೆ 1 ಸಾವಿರ ರೂ ದಂಡ ವಿಧಿಸಲಾಗುತ್ತದೆ.

ಒಂದೊಮ್ಮೆ ಬೇರೆಯವರ ಗಾಡಿ ಓಡಿಸುವಾಗ ಅಪಘಾತ ಸಂಭವಿಸಿದರೆ ಮಾಲೀಕರಿಗೆ 25 ಸಾವಿರ ರೂ ದಂಡ ವಿಧಿಸಲಾಗುತ್ತದೆ. ಮೂರು ವರ್ಷದವರೆಗೂ ಜೈಲು ವಾಸ ಅನುಭವಿಸಬೇಕಾಗುತ್ತದೆ. ಹಾಗೆಯೇ ವಾಹನದ ಪರವಾನಗಿ ರದ್ದುಗೊಳಿಸಲಾಗುತ್ತದೆ.

ವೇಗದ ಚಾಲನೆ ಮಾಡಿದರೆ 1-5 ಸಾವಿರ ರೂ ದಂಡ, ಕುಡಿದು ಗಾಡಿ ಚಲಾಯಿಸಿದರೆ 10 ಸಾವಿರ ರೂವರೆಗೂ ದಂಡ ವಿಧಿಸಲಾಗುತ್ತದೆ.

English summary
If you are blocking an Ambulance get ready to pay penalty, Union Transport Minister Nitin Gadkari is slated to reply in Lok Sabha on the Motor Vehicles (Amendment) Bill 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X