ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೋವಿಡ್‌ ಸಾವು ಸರಿಯಾಗಿ ವರದಿಯಾಗದಿದ್ದರೆ, ಅದು ರಾಜ್ಯದ ತಪ್ಪು': ಆರೋಗ್ಯ ಸಚಿವ

|
Google Oneindia Kannada News

ನವದೆಹಲಿ, ಜು.20: "ನಾವು ವಿರೋಧ ಪಕ್ಷದ ಸಂಸದರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದೇವೆ ಮತ್ತು ರಚನಾತ್ಮಕ ಚರ್ಚೆ ನಡೆಸಲು ನಾವು ನಿರ್ಧರಿಸಿದ್ದೇವೆ. ಆದರೆ ಚರ್ಚೆಯ ಸಮಯದಲ್ಲಿ ಏನಾದರೂ ಒಳ್ಳೆಯದನ್ನು ನಾವು ನೋಡಿದ್ದೇವೆ. ಎಲ್ಲಾ ಕೆಲಸದ ಕ್ರೆಡಿಟ್‌ ಮುಖ್ಯಮಂತ್ರಿಗಳಿಗೆ ಹೋಗಿದೆ. ಎಲ್ಲಾ ಕೊರತೆಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡಲಾಗಿದೆ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

"ಈ ಸಾಂಕ್ರಾಮಿಕದ ಸಂದರ್ಭದಲ್ಲಿ ರಾಜಕೀಯಕ್ಕೆ ಸ್ಥಾನವಿಲ್ಲ ಎಂದು ಪ್ರಧಾನಿ ಪದೇ ಪದೇ ಹೇಳಿದ್ದಾರೆ. ಅನೇಕ ರಾಜ್ಯಗಳು ಲಸಿಕೆಗಳಿಗಾಗಿ ಜಾಗತಿಕ ಟೆಂಡರ್ ಅನ್ನು ಮಾಡಿದೆ. ಆದರೆ ಅವುಗಳಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಈ ಕೋವಿಡ್‌ ಸಂದರ್ಭದಲ್ಲಿ ಕೋವಿಡ್‌ ಸಾವು ಸರಿಯಾಗಿ ವರದಿಯಾಗದಿದ್ದರೆ, ಅದು ರಾಜ್ಯದ ತಪ್ಪು," ಎಂದು ತಿಳಿಸಿದ್ದಾರೆ.

ಭಾರತದ ನೂತನ ಆರೋಗ್ಯ ಸಚಿವರಾಗಿ ಮನ್ಸುಖ್ ಮಾಂಡವೀಯಾ ಭಾರತದ ನೂತನ ಆರೋಗ್ಯ ಸಚಿವರಾಗಿ ಮನ್ಸುಖ್ ಮಾಂಡವೀಯಾ

"ಮೊದಲ ಪ್ರಕರಣವನ್ನು ಜನವರಿ 13, 2020 ರಂದು ದಾಖಲಿಸಲಾಗಿದೆ. ಅದಕ್ಕೂ ಮೊದಲು ಮೋದಿಜಿ ನಮ್ಮನ್ನು ಎಚ್ಚರಿಸಿದ್ದರು. ಅನೇಕ ದೇಶಗಳು ಔಷಧಿಗಳಿಗಾಗಿ ನಮ್ಮನ್ನು ಸಂಪರ್ಕಿಸಿದವು. ನಾವು 130 ಕ್ಕೂ ಹೆಚ್ಚು ದೇಶಗಳಿಗೆ ಔಷಧಿಗಳನ್ನು ಪೂರೈಸಿದ್ದೇವೆ. ಅಮೆರಿಕದ ಅಧ್ಯಕ್ಷರು ಸಹ ಮೊದಲ ಅಲೆಯ ಸಂದರ್ಭ ಸಹಾಯವನ್ನು ಕೋರಿದ್ದರು. ಹಾಗೆಯೇ ಭಾರತದ ಸಹಾಯವನ್ನು ಮರೆಯುವುದಿಲ್ಲ ಎಂದು ಹೇಳಿದ್ದಾರೆ," ಎಂದು ರಾಜ್ಯಸಭೆಯಲ್ಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಉಲ್ಲೇಖ ಮಾಡಿದ್ದಾರೆ.

If there is under reporting of Covid deaths, it is by the States: Health Minister in Rajya Sabha

"ಅನೇಕ ರಾಜ್ಯಗಳಲ್ಲಿ 10 ಲಕ್ಷ ಲಸಿಕೆಗಳು ಅಥವಾ 15 ಲಕ್ಷ ಲಸಿಕೆಗಳು ಬಳಕೆಯಾಗುವುದಿಲ್ಲ. ಆದರೆ ಇಲ್ಲಿ ಆ ರಾಜ್ಯಗಳ ಪ್ರತಿನಿಧಿಗಳು ಲಸಿಕೆ ಚುರುಕುಗೊಳಿಸುವಂತೆ ನನ್ನನ್ನು ಕೇಳುತ್ತಿದ್ದಾರೆ. ನಮ್ಮ ಸರ್ಕಾರ ಮೂಲಸೌಕರ್ಯವನ್ನು ಹೆಚ್ಚಿಸಲು ಸಹಾಯ ಮಾಡಿದೆ," ಎಂದು ಮಾಂಡವೀಯಾ ಮೊದಲ ಲಾಕ್‌ಡೌನ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

Profile: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಬಗ್ಗೆ ನಿಮಗೆಷ್ಟು ಗೊತ್ತು? Profile: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಬಗ್ಗೆ ನಿಮಗೆಷ್ಟು ಗೊತ್ತು?

"ನಾವು ವಸುದೈವ ಕುಟುಂಬಕಂ ಅನ್ನು ನಂಬುತ್ತೇವೆ, ಆದ್ದರಿಂದ ನಾವು ನಮ್ಮ ನೆರೆಹೊರೆಯವರಿಗೆ ಲಸಿಕೆಗಳನ್ನು ಒದಗಿಸಿದ್ದೇವೆ," ಎಂದು ಲಸಿಕೆ ದೇಶದಲ್ಲಿ ಜನರಿಗೆ ನೀಡುವ ಮುನ್ನವೇ ಬೇರೆ ದೇಶಗಳಿಗೆ ರಫ್ತು ಮಾಡಿದ ಬಗ್ಗೆ ಪ್ರತಿಕ್ರಿಯಿಸಿದರು. "ಇತಿಹಾಸದಲ್ಲಿ, ಸಾಂಕ್ರಾಮಿಕ ರೋಗ ಬಂದಾಗಲೆಲ್ಲಾ, ಸಾಂಕ್ರಾಮಿಕ ರೋಗಕ್ಕಿಂತ ಹೆಚ್ಚಿನ ಜನರು ಹಸಿವಿನಿಂದ ಸತ್ತರು. ಆದರೆ ನಾವು ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಎಲ್ಲರಿಗೂ ನಾವು ಉಚಿತ ಆಹಾರ ಧಾನ್ಯಗಳನ್ನು ಒದಗಿಸಿದ್ದೇವೆ," ಎಂದು ಹೇಳಿದರು.

ಇನ್ನು ಮಾಂಡವೀಯಾ ಮಗಳು ವೈದ್ಯಕೀಯ ಇಂಟರ್ನ್ ಆಗಿದ್ದು, ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲೇ "ಸಾವಿನ ವರದಿಯಲ್ಲಿನ ಕೇಂದ್ರದ ವಿರುದ್ದ ಆರೋಪಗಳನ್ನು ನಿರಾಕರಿಸಿದ್ದಾರೆ. ವರದಿಯು ಸರಿಯಾಗಿ ಆಗದಿದ್ದರೆ, ಅದು ರಾಜ್ಯಗಳಿಂದಲೇ ಹೊರತು ಕೇಂದ್ರ ಸರ್ಕಾರದಿಂದಲ್ಲ ಎಂದರು. ನಾವು ರಾಜ್ಯಗಳ ಡೇಟಾವನ್ನು ಮಾತ್ರ ಒಟ್ಟುಗೂಡಿಸಿ ದೇಶದ ಡೇಟಾ ಕೊಡುತ್ತೇವೆ," ಎಂದು ಸ್ಪಷ್ಟನೆ ನೀಡಿದರು.

(ಒನ್‌ಇಂಡಿಯಾ ಸುದ್ದಿ)

English summary
If there is under reporting of Covid deaths, it is by the States says Health Minister in Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X