ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಗಾಂಧಿ ಕಾರಣ: ಕೇಜ್ರಿವಾಲ್

|
Google Oneindia Kannada News

Recommended Video

ಫಲಿತಾಂಶಕ್ಕೂ ಮುನ್ನವೆ ಸೋಲಿನ ಹೊಣೆ ರಾಹುಲ್ ಹೆಗಲಿಗೆ.!? | Oneindia Kannada

ನವದೆಹಲಿ, ಮೇ 11 (ಪಿಟಿಐ) : ಇದು ಸೋಲಿನ ಭೀತಿಯೋ ಅಥವಾ ಹತಾಶೆಯೋ.. ಒಟ್ಟಿನಲ್ಲಿ ಚುನಾವಣಾ ಫಲಿತಾಂಶ ಬರುವ ಮುನ್ನವೇ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಅದಕ್ಕೆ ಈಗಲೇ ಒಬ್ಬರನ್ನು ಹೊಣೆಯಾಗಿಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಮತ್ತೆ ಪ್ರಧಾನಿಯಾದರೆ, ಅದಕ್ಕೆ ನೇರ ಕಾರಣ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೇ ಹೊರತು, ಬೇರಾರೂ ಅಲ್ಲ ಎಂದಿದ್ದಾರೆ.

ಬಿಜೆಪಿಗೆ ಮತಹಾಕುವುದು ಸರಿಯೇ ಎಂದು ಒಮ್ಮೆ ಯೋಚಿಸಿ ವೋಟ್ ಮಾಡಿ: ಕೇಜ್ರಿವಾಲ್ ಬಿಜೆಪಿಗೆ ಮತಹಾಕುವುದು ಸರಿಯೇ ಎಂದು ಒಮ್ಮೆ ಯೋಚಿಸಿ ವೋಟ್ ಮಾಡಿ: ಕೇಜ್ರಿವಾಲ್

ಬಿಜೆಪಿ ಎದುರಾಳಿ ಪಕ್ಷಗಳ ವಿರುದ್ದವೇ ರಾಹುಲ್ ಗಾಂಧಿ ಪ್ರಚಾರ ನಡೆಸುತ್ತಿದ್ದಾರೆ, ಇವರಿಗೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ಇಲ್ಲವೇ ಎಂದು ಪ್ರಶ್ನಿಸಿರುವ ಕೇಜ್ರಿವಾಲ್, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಮಾಡುತ್ತಿರುವುದೇನು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

If BJP comes to power Rahul Gandhi is responsible, Kejriwal

ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ದ ಕಾಂಗ್ರೆಸ್ ಸ್ಪರ್ಧೆ ಮಾಡುವಂತೆ ಪ್ರಚಾರ ನಡೆಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅದರ ಶ್ರೇಯಸ್ಸು ರಾಹುಲ್ ಗಾಂಧಿಗೂ ಸಲ್ಲಬೇಕು ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವುದು ನಮ್ಮ ಉದ್ದೇಶ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಮೋದಿಗಿಂತ ಮನಮೋಹನ್ ಸಿಂಗ್ ಉತ್ತಮ ಪ್ರಧಾನಿಯಾಗಿದ್ದರು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಒಂದು ವೇಳೆ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಲಿದ್ದಾರೆ. ಹಾಗಾಗಿ, ಎಲ್ಲಾ ಮತದಾರರು ಯೋಚಿಸಿ ಮತಹಾಕಬೇಕಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.

English summary
If BJP comes to power again AICC President Rahul Gandhi is responsible, Delhi CM Arvind Kejriwal in a interview with PTI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X