ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಚ್ಛೇದ 370 ಕಾಶ್ಮೀರದ ದಿಕ್ಕನ್ನೇ ಬದಲಿಸುವುದಾಗಿದ್ದರೆ ಅದು ತಾತ್ಕಾಲಿಕ ಏಕೆ?

|
Google Oneindia Kannada News

ನವದೆಹಲಿ, ಆಗಸ್ಟ್ 15: ಅನುಚ್ಛೇದ 370 ಕಾಶ್ಮೀರದ ದಿಕ್ಕನ್ನೇ ಬದಲಿಸುವುದಾಗಿದ್ದಿದ್ದರೆ ಅದಕ್ಕೆ ತಾತ್ಕಾಲಿಕ ವಿಶೇಷ ಸ್ಥಾನಮಾನ ಏಕೆ ನೀಡಿದ್ದರು. ಶಾಶ್ವತ ಸ್ಥಾನಮಾನ ನೀಡಬಹುದಿತ್ತಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಕೆಂಪುಕೋಟೆಯಲ್ಲಿಂದು 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದೊಮ್ಮೆ ಈ ವಿಶೇಷ ಸ್ಥಾನಮಾನದಿಂದ ಜಮ್ಮು ಮತ್ತು ಕಾಶ್ಮೀರ ಉದ್ಧಾರವಾಗುತ್ತದೆ ಎಂದು ನಿಮಗೆ ಅನಿಸಿದ್ದರೆ, ಅದಕ್ಕೆ ಶಾಶ್ವತವಾಗಿಯೇ ವಿಶೇಷ ಸ್ಥಾನ ಮಾನ ನೀಡಬಹುದಿತ್ತು ಎಂದರು.

ಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿ ಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿ

ಎರಡನೇ ಬಾರಿಗೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು 10 ದಿನಗಳಲ್ಲಿ ಈ ನಿರ್ಧಾರ ತೆಗದದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ತ್ರಿವಳಿ ತಲಾಖ್ ಕುರಿತು ಕೂಡ ವಿಶೇಷ ನಿರ್ಣಯ ಕೈಗೊಳ್ಳಲಾಗಿದೆ.

If Article 370 Is Changing Life of Kashmiris Why Temporary

ಜಮ್ಮು ಕಾಶ್ಮೀರ ಈಗ ರಾಜ್ಯವಾಗಿರದೆ ಕೇಂದ್ರಾಡಳಿತ ಪ್ರದೇಶವಾಗಿದೆ. ವಿಧಾನಸಭೆ ಇರಲಿದೆ. ದೇಶದಲ್ಲಿ ಬೇರೆ ರಾಜ್ಯಗಳಿಗೆ ಅನ್ವಯವಾಗುವ ಎಲ್ಲಾ ಕಾನೂನುಗಳು ಜಮ್ಮು ಕಾಶ್ಮೀರಕ್ಕೂ ಅನ್ವಯವಾಗಲಿದೆ.

''ದೇಶದಲ್ಲಿ ಯಾರು ಆರ್ಟಿಕಲ್ 370 ಗೆ ಬೆಂಬಲ ನೀಡುತ್ತೀರೋ ಅವರಿಗೆ ನನ್ನದೊಂದು ಪ್ರಶ್ನೆ. ಆರ್ಟಿಕಲ್ 370 ಯ ಅಗತ್ಯ ತುಂಬಾ ಇದೆ. ಇದು ಜಮ್ಮು ಕಾಶ್ಮೀರದ ದಿಕ್ಕನ್ನೇ ಬದಲಿಸಬಲ್ಲದು ಎಂದು ನಿಮಗನಿಸಿದ್ದರೆ, ಕಳೆದ 70 ವರ್ಷಗಳಿಂದ ಏಕೆ ಅದನ್ನು ತಾತ್ಕಾಲಿಕ ಸ್ಥಾನಮಾನ ನೀಡಲಾಗಿದೆ'' ಎಂದು ಕೇಳಿದ್ದಾರೆ.

ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ

ಸರ್ದಾರ್ ವಲ್ಲಭಬಾಯಿ ಪಟೇಲರ ಕನಸನ್ನು ನನಸು ಮಾಡಿದ್ದೇವೆ. ಒಂದು ರಾಷ್ಟ್ರ ಒಂದು ಸಂವಿಧಾನ ಕನಸು ಈಗ ನನಸಾಗಿದೆ ಎಂದು ಹೇಳಿದರು.

English summary
Prime minister Narendra Modi Asked Question article 370, If Article 370 is so helpful for the Jammu and Kashmir People why Temporary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X