ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ಮುಗಿದ ಬಳಿಕ ನಡೆಯಲಿದೆ ICSE, ISC ಪರೀಕ್ಷೆ

|
Google Oneindia Kannada News

ಕೋವಿಡ್-19 ತಡೆಗಟ್ಟಲು ಘೋಷಿಸಲಾಗಿರುವ ಲಾಕ್ ಡೌನ್ ಮುಗಿದ ಬಳಿಕ ಬಾಕಿ ಉಳಿದಿರುವ ಐ.ಎಸ್.ಸಿ ಮತ್ತು ಐ.ಸಿ.ಎಸ್.ಇ ಪರೀಕ್ಷೆಗಳನ್ನು ಸಿ.ಐ.ಎಸ್.ಸಿ.ಇ (ಕೌನ್ಸಿಲ್ ಫಾರ್ ದಿ ಇಂಡಿಯಾ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್) ನಡೆಸಲಿದೆ.

ಶನಿವಾರ ಮತ್ತು ಭಾನುವಾರವೂ ಸೇರಿದಂತೆ 6-8 ದಿನಗಳ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಿ.ಐ.ಎಸ್.ಸಿ.ಇ ತಿಳಿಸಿದೆ.

ಮೇ.3ರ ಬಳಿಕ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಮೇ.3ರ ಬಳಿಕ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ

ಲಾಕ್ ಡೌನ್ ನಿಂದಾಗಿ ಇತರೆ ಪಬ್ಲಿಕ್ ಪರೀಕ್ಷೆಗಳಂತೆ ಐ.ಎಸ್.ಸಿ ಮತ್ತು ಐ.ಸಿ.ಎಸ್.ಇ ಕೂಡ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿತ್ತು. 12ನೇ ತರಗತಿಯ ವಿದ್ಯಾರ್ಥಿಗಳು ಐ.ಎಸ್.ಸಿ ಮಂಡಳಿಯ ವ್ಯಾಪ್ತಿಗೆ ಬರುವ ಬಾಕಿ ಉಳಿದ ಎಂಟು ವಿಷಯಗಳ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾದರೆ, 10ನೇ ತರಗತಿಯ ವಿದ್ಯಾರ್ಥಿಗಳು ಆರು ಐ.ಸಿ.ಎಸ್‌.ಇ ಮಂಡಳಿ ವಿಷಯಗಳ ಪರೀಕ್ಷೆಗೆ ಕುಳಿತುಕೊಳ್ಳಬೇಕಾಗುತ್ತದೆ.

ICSE And ISC Board Exams 2020 Will Be Conducted Post Lockdown

* ಬಾಕಿ ಉಳಿದಿರುವ ಪರೀಕ್ಷೆಗಳು ಯಾವುವು?

- ಐ.ಸಿ.ಎಸ್.ಇ : ಜಿಯೋಗ್ರಫಿ ಎಚ್.ಸಿ.ಜಿ ಪೇಪರ್ 2, ಬಯಾಲಜಿ - ಸೈನ್ಸ್ ಪೇಪರ್ 3, ಎಕೊನಾಮಿಕ್ಸ್ ಗ್ರೂಪ್ಸ್ 3 ಎಲೆಕ್ಟಿವ್, ಹಿಂದಿಯಾ ಅಂಡ್ ಆರ್ಟ್ ಪೇಪರ್ 4

- ಐ.ಎಸ್.ಸಿ : ಬಯಾಲಜಿ ಪೇಪರ್ 1, ಬಿಸಿನೆಸ್ ಸ್ಟಡೀಸ್, ಜಿಯೋಗ್ರಫಿ, ಸೋಷಿಯಾಲಜಿ, ಸೈಕಾಲಜಿ, ಹೋಮ್ ಸೈನ್ಸ್ ಪೇಪರ್ 1, ಎಲೆಕ್ಟಿವ್ ಇಂಗ್ಲೀಷ್, ಆರ್ಟ್ ಪೇಪರ್ 5

ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿದ್ಮೇಲೆ, ಈ ಪರೀಕ್ಷೆಗಳನ್ನು ನಡೆಸಲಾಗಲಿಲ್ಲ.

* ಪರೀಕ್ಷಾ ವೇಳಾಪಟ್ಟಿ

ಲಾಕ್ ಡೌನ್ ಸಂಪೂರ್ಣವಾಗಿ ತೆರವುಗೊಂಡ ಬಳಿಕ ಬಾಕಿ ಉಳಿದಿರುವ ಪರೀಕ್ಷೆಗಳ ವೇಳಾಪಟ್ಟಿ ನೀಡಲಾಗುವುದು ಎಂದು ಸಿ.ಐ.ಎಸ್.ಸಿ.ಇ ಹೇಳಿದೆ.

ಪರೀಕ್ಷೆಗಳಿಗೂ 8 ದಿನಗಳ ಮುನ್ನ ವೇಳಾಪಟ್ಟಿ ಬಹಿರಂಗವಾಗಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪರೀಕ್ಷೆ ಮುಗಿದ ಬಳಿಕ 6-8 ವಾರಗಳ ನಂತರ ಫಲಿತಾಂಶ ಪ್ರಕಟವಾಗಲಿದೆ.

English summary
ICSE And ISC Board exams 2020 will be conducted post lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X