ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಸೂಚಿಸುವುದು ಅಸಾಧ್ಯ: ಐಸಿಎಂಆರ್

|
Google Oneindia Kannada News

ದೆಹಲಿ, ಸೆಪ್ಟೆಂಬರ್ 17: ದೇಶದಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿ ಎಂಟು ತಿಂಗಳುಗಳು ಕಳೆದಿವೆ. ಇದುವರೆಗೂ ಕೊವಿಡ್ 19 ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆಯನ್ನು ಸೂಚಿಸಲು ಸಾಧ್ಯವಾಗಿಲ್ಲ.

ಈ ಕುರಿತು ಐಸಿಎಂಆರ್ ಮಾಹಿತಿ ನೀಡಿದ್ದು, ಕೊರೊನಾ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಸೂಚಿಸುವುದು ಅಸಾಧ್ಯ ಎಂದು ಹೇಳಿದೆ.

8 ತಿಂಗಳ ಹಿಂದೆ ಅಂದರೆ ಜನವರಿ 30ರಂದು ದೇಶದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಈ ಮಾರಕ ಕೊರೋನಾ ವೈರಸ್ ಗೆ ಯಾವುದೇ ನಿರ್ಧಿಷ್ಟ ಚಿಕಿತ್ಸೆ ಸೂಚಿಸಲು ಸಾಧ್ಯವಿಲ್ಲ.

ಕೊರೊನಾ ಲಸಿಕೆಗಳು ಪ್ರಯೋಗಾತ್ಮಕ ಹಂತದಲ್ಲಿದ್ದು, ಈ ಪ್ರಯೋಗಗಳಿಗೆ ಯಾವುದೇ ರೀತಿಯ ಶಾರ್ಟ್ ಕಟ್ ಗಳಿಲ್ಲ. ಈ ಲಸಿಕೆಗಳ ಪ್ರಯೋಗಕ್ಕೆ ವರ್ಷಗಟ್ಟಲೆ ಹಿಡಿಯುತ್ತದೆ. ಪೋಲಿಯೋ ಗೆ ಲಸಿಕೆ ಹೊರಬರಲು ದಶಕಗಳೇ ಬೇಕಾಯಿತು.

ಆದರೆ ಕೊರೊನಾ ವೈರಸ್ ಗೆ ಇಷ್ಟು ಬೇಗ ಲಸಿಕೆ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇನ್ನು 6 ರಿಂದ 7ತಿಂಗಳ ಅವಧಿಯೊಳಗೆ ಲಸಿಕೆ ನಿರೀಕ್ಷಿಸಬಹುದು.

ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಬಿಬಿಎಂಪಿಯಿಂದ ಕೌನ್ಸಿಲಿಂಗ್ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಬಿಬಿಎಂಪಿಯಿಂದ ಕೌನ್ಸಿಲಿಂಗ್

ಈಗ 3 ವ್ಯಾಕ್ಸಿನ್ ಗಳು ಪ್ರಮುಖವಾಗಿ ಗಮನ ಸೆಳೆದಿದ್ದು, ಈ ಪೈಕಿ ಐಸಿಎಂಆರ್ ಜೊತೆ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್, ಜೈಡಸ್ ಕ್ಯಾಡಿಲಾ ಸಂಸ್ಥೆಯ ZyCoV-D ಮತ್ತು ಆಕ್ಸ್ ಫರ್ಡ್ ಮತ್ತು ಆಸ್ಟ್ರಾ ಜೆನೆಕಾ ಸಂಸ್ಥೆಯ ಲಸಿಕೆಗಳು ಪ್ರಯೋಗಕ್ಕೆ ಡಿಜಿಸಿಐನ ಅನುಮೋದನೆ ಪಡೆದು ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆಗಳ ಅಭಿವೃದ್ಧಿಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನ ಬಗ್ಗೆ ಅಧ್ಯಯನ ನಿರಂತರ

ಕೊರೊನಾ ಸೋಂಕಿನ ಬಗ್ಗೆ ಅಧ್ಯಯನ ನಿರಂತರ

ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಬೆಂಬಲಿಸಲು ಐಸಿಎಂಆರ್ ಯಾವುದೇ ವೈಜ್ಞಾನಿಕ ಪುರಾವೆಗಳನ್ನು ಕಂಡುಕೊಂಡಿಲ್ಲ. ಕೆಲವು ರೋಗಿಗಳ ಮೇಲೆ ಪರಿಣಾಮಕಾರಿ ಎಂದು ಕಂಡುಬಂದ ಯಾವುದೇ ಔಷಧಿಗಳನ್ನು, ರೋಗನಿರೋಧಕ ಅಥವಾ ಕೊವಿಡ್-19 ಚಿಕಿತ್ಸೆಗಾಗಿ ಬಹಳಷ್ಟು ಔಷಧಿಗಳನ್ನು ಮರು-ರೂಪಿಸಲಾಗಿದೆ. ಇದು ಹೊಸ ವೈರಸ್ ಆಗಿದ್ದು, ಇದರ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ. ಆದರೆ ನಿರಂತರ ಅಧ್ಯಯನ ಸಾಗುತ್ತಿದೆ ಎಂದು ಹೇಳಿದೆ.

ಪ್ಲಾಸ್ಮಾ ಥೆರಪಿ ಬೆಂಬಲಿಸಲು ಪುರಾವೆಗಳಿಲ್ಲ

ಪ್ಲಾಸ್ಮಾ ಥೆರಪಿ ಬೆಂಬಲಿಸಲು ಪುರಾವೆಗಳಿಲ್ಲ

ಈ ವರೆಗೂ ಪ್ಲಾಸ್ಮಾ ಥೆರಪಿ ಸೇರಿದಂತೆ ರೋಗ ನಿರೋಧಕ ಅಥವಾ ಚಿಕಿತ್ಸೆಯ ಒಂದು ನಿರ್ದಿಷ್ಟ ಚಿಕಿತ್ಸೆಯನ್ನು ಬೆಂಬಲಿಸಲು ಇನ್ನೂ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಾಗಿಲ್ಲ ಎಂದು ಗೋರಖ್‌ಪುರದ ಐಸಿಎಂಆರ್-ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (ಆರ್‌ಎಂಆರ್‌ಸಿ) ನಿರ್ದೇಶಕ ಡಾ.ರಜನಿ ಕಾಂತ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

ಪ್ಲೇಸಿಡ್ ಪ್ರಯೋಗ

ಪ್ಲೇಸಿಡ್ ಪ್ರಯೋಗ

ಕೊವಿಡ್ ಸೋಂಕು ಹರಡುವಿಕೆ ತಡೆಯಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ ಕೈಗಳನ್ನು ತೊಳೆದುಕೊಳ್ಳುವುದು ಅನಿವಾರ್ಯ ಎಂದು ಐಸಿಎಂಆರ್ ಹೇಳಿದೆ.

ಇದೇ ವಿಚಾರವಾಗಿ ಐಸಿಎಂಆರ್ ಪ್ಲೇಸಿಡ್ (PLACID) ಪ್ರಯೋಗದ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಕೊವಿಡ್ ಸೋಂಕಿತರಲ್ಲಿನ ಪ್ಲಾಸ್ಮಾ ಥೆರಪಿ ಮತ್ತು ಮಧ್ಯಮ ಅನಾರೋಗ್ಯ ಸೋಂಕಿತರಿಗೆ ನೀಡುವ ಪ್ಲಾಸ್ಮಾ ಥೆರಪಿ ಹೆಚ್ಚೇನು ಪರಿಣಾಮಕಾರಿಯಾಗಿಲ್ಲ ಅಥವಾ ವ್ಯತ್ಯಾಸ ಕಂಡುಬಂದಿಲ್ಲ.

Recommended Video

BSY ಪುತ್ರನಿಗೆ ರಾಜ್ಯ ರಾಜಕೀಯದಲ್ಲಿ ಏನು ಕೆಲಸ | Vijayendra | Oneindia Kannada
ಗುಣಮುಖರಾದವಲ್ಲೂ ಮತ್ತೆ ಸೋಂಕು

ಗುಣಮುಖರಾದವಲ್ಲೂ ಮತ್ತೆ ಸೋಂಕು

ಇದೇ ವೇಳೆ ಸೋಂಕಿನಿಂದ ಗುಣಮುಖರಾಗಿದ್ದವರಲ್ಲೂ ಮತ್ತೆ ಸೋಂಕು ಒಕ್ಕರಿಸುತ್ತಿರುವ ಕುರಿತಂತೆಯೂ ಐಸಿಎಂಆರ್ ನ ವಿಜ್ಞಾನಿಗಳು ಮಾತನಾಡಿದ್ದು, ಈ ಬಗ್ಗೆ ಈಗಲೇ ಒಂದು ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ.

ಪ್ರಸ್ತುತ ನಮ್ಮ ಗಮನ 3 ಕೋವಿಡ್ ಲಸಿಕೆಗಳ ಪ್ರಯೋಗದ ಮೇಲೆ ಕೇಂದ್ರೀಕೃತವಾಗಿದ್ದು, ಈ ಪೈಕಿ 2 ಲಸಿಕೆಗಳು ದೇಶೀಯವಾಗಿ ನಿರ್ಮಿತವಾಗಿವೆ. ವೈರಸ್ ವಿರುದ್ಧ ಹೋರಾಡಲು ವ್ಯಕ್ತಿಯಲ್ಲಿ ಪ್ರತಿಕಾಯಗಳ ಉಪಸ್ಥಿತಿ, ವ್ಯಾಪ್ತಿ ಮತ್ತು ಅವಧಿಯನ್ನು ಅವಲಂಬಿಸಿರುತ್ತದೆ. ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಸಾಂಕ್ರಾಮಿಕ ರೋಗ ಕೋವಿಡ್-19 ಯಾವ ಹಂತದಲ್ಲಿದೆ ಎಂದು ನಿರ್ಣಯಿಸುವುದು ಕಷ್ಟಕರವಾಗಿದ್ದು, ನಾವಿನ್ನೂ ಹರ್ಡ್ ಇಮ್ಯುನಿಟಿ ಪಡೆಯುವಷ್ಟು ಹತ್ತಿರವಾಗಿಲ್ಲ.

English summary
Eight months after the first Covid-19 case was reported in India on January 30, “there is still no scientific evidence to support a specific line of prophylactic or treatment including convalescent plasma (CP),
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X