ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ದಿನ Rapid ಟೆಸ್ಟ್ ಕಿಟ್ ಬಳಸದಂತೆ ರಾಜ್ಯಗಳಿಗೆ ಐಸಿಎಂಆರ್ ಸೂಚನೆ

|
Google Oneindia Kannada News

ದೆಹಲಿ, ಏಪ್ರಿಲ್ 21: ಕೊರೊನಾ ಸೋಂಕು ಪತ್ತೆ ಹಚ್ಚಲು ಬಳಸಲಾಗುತ್ತಿರುವ Rapid ಟೆಸ್ಟಿಂಗ್ ಕಿಟ್‌ಗಳನ್ನು ಎರಡು ದಿನದ ಮಟ್ಟಿಗೆ ಬಳಸಬೇಡಿ ಎಂದು ಐಸಿಎಂಆರ್ (Indian Council of Medical Research) ರಾಜ್ಯಗಳಿಗೆ ಸೂಚನೆ ನೀಡಿದೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೊವಿಡ್ ಸೋಂಕಿನ ದಿನನಿತ್ಯದ ವರದಿ ನೀಡುವ ಸಂದರ್ಭದಲ್ಲಿ ಐಸಿಎಂಆರ್ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಆರ್ ಗಂಗಾಖೇಡ್ಕರ್ Rapid ಟೆಸ್ಟ್ ಕಿಟ್ ಬಳಸದಂತೆ ಹೇಳಿದ್ದಾರೆ.

ಕೊರೊನಾ ವೈರಸ್ ನಿಂದ ಭಾರತೀಯರನ್ನು ರಕ್ಷಿಸಲು ಚೀನಾ ಅಸ್ತ್ರಕೊರೊನಾ ವೈರಸ್ ನಿಂದ ಭಾರತೀಯರನ್ನು ರಕ್ಷಿಸಲು ಚೀನಾ ಅಸ್ತ್ರ

''ಮುಂದಿನ ಎರಡು ದಿನ ಈ ಟೆಸ್ಟಿಂಗ್ ಕಿಟ್‌ಗಳನ್ನು ಬಳಸಬೇಡಿ. ಫಲಿತಾಂಶದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬ ದೂರು ಬಂದಿದೆ. ಎರಡು ದಿನದ ಬಳಿಕ ನಿಮಗೆ ಈ ಕುರಿತು ಸಲಹೆ ನೀಡುತ್ತೇವೆ'' ಎಂದು ಐಸಿಎಂಆರ್ ಮನವಿ ಮಾಡಿದೆ.

Stop Rapid Tests For 2 Days Says ICMR

ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳು ಚೀನಾದಿಂದ ಬಂದಿರುವ Rapid ಟೆಸ್ಟ್ ಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕಿಟ್‌ಗಳು ಸರಿಯಾಗಿಲ್ಲ, ಫಲಿತಾಂಶದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ದೂರಿದ್ದವು. ಈ ವಿಚಾರಕ್ಕೆ ಸಂಬಂಧಕ್ಕೆ ಪಟ್ಟಂತೆ ರಾಜಸ್ಥಾನ ಸರ್ಕಾರ ಐಸಿಎಂಆರ್ ಗೆ ದೂರು ನೀಡಿತ್ತು.

ರಾಜಸ್ಥಾನ ಮತ್ತು ಇತರೆ ರಾಜ್ಯಗಳಿಂದ ಬಂದ ದೂರಿನ ಅನ್ವಯ ಸದ್ಯಕ್ಕೆ ಕಿಟ್ ಬಳಸದಂತೆ ಸೂಚಿಸಿದೆ. ಈ ಕುರಿತು ಪರಿಶೀಲಿಸಿ ಮತ್ತೊಮ್ಮೆ ಪರೀಕ್ಷೆ ಮಾಡಲು ಐಸಿಎಂಆರ್ ಮುಂದಾಗಿದೆ. ಒಂದು ವೇಳೆ ಕಿಟ್‌ಗಳಲ್ಲಿ ದೋಷವಿದ್ದರೆ ಹಿಂತಿರುಗಿಸಲು ತೀರ್ಮಾನಿಸಿದೆ.

ಭಾರತದಲ್ಲಿ ಮಾತ್ರವಲ್ಲ ಸ್ಪೇನ್, ಇಟಲಿ ಹಾಗೂ ಇನ್ನಿತರ ದೇಶಗಳು ಚೀನಾದಿಂದ ಖರೀಸಿದ್ದ Rapid ಟೆಸ್ಟ್ ಕಿಟ್‌ಗಳು ದೋಷಪೂರಿತವಾದವು, ಉತ್ತಮ ಗುಣಮಟ್ಟ ಹೊಂದಿಲ್ಲ ಎಂದು ಆರೋಪಿಸಿದ್ದವು.

English summary
States advised not to use rapid testing kits for two days. A lot of variations, kits will be tested and validated by on-ground teams and we will give advisory in the next 2 days: ICMR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X