ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಅಸ್ಸಾಂ ಸಮುದಾಯದವರಿಗೆ ಕೊರೊನಾ ವೈರಸ್ ಬರಲ್ವಾ?

|
Google Oneindia Kannada News

ದೆಹಲಿ, ಏಪ್ರಿಲ್ 26: ಕೊರೊನಾ ವೈರಸ್‌ಗೆ ಯಾವುದೇ ಬೇಧ ಭಾವ ಇಲ್ಲ, ಯಾವುದೇ ನಿರ್ದಿಷ್ಟ ವಯಸ್ಸು, ಲಿಂಗ ಎಂಬ ಪ್ರತ್ಯೇಕತೆ ಇಲ್ಲ ಎಂದು ಅಂಕಿ ಅಂಶಗಳು ಹೇಳುತ್ತಿದೆ. ಆದರೆ, ಅಸ್ಸಾಂ ಜನ ಸಮುದಾಯದವರಿಗೆ ಕೊರೊನಾ ಸೋಂಕು ಬರಲ್ಲ ಎನ್ನುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

'ಅಸ್ಸಾಂ ಜನರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಯಾವೊಬ್ಬ ಅಸ್ಸಾಮಿ ವ್ಯಕ್ತಿಗೂ ಸೋಂಕು ತಗುಲಿಲ್ಲ. ಇಡೀ ಭಾರತದಲ್ಲಿ ಯಾವ ಅಸ್ಸಾಂ ವ್ಯಕ್ತಿಗೂ ಸೋಂಕು ಹರಡಿಲ್ಲ. ಈ ಕುರಿತು ಭಾರತದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಈ ಕುರಿತು ಐಸಿಎಂಆರ್ ಅಧ್ಯಯನ ಮಾಡಲಿದೆ' ಎಂಬ ಸುದ್ದಿ ವೈರಲ್ ಆಗಿದೆ.

ವದಂತಿ ಹಿಂದಿನ ಅಸಲಿ ಸತ್ಯ: ಪ್ರತಿಯೊಬ್ಬ ಭಾರತೀಯರಿಗೆ 1,000 ರೂಪಾಯಿ!ವದಂತಿ ಹಿಂದಿನ ಅಸಲಿ ಸತ್ಯ: ಪ್ರತಿಯೊಬ್ಬ ಭಾರತೀಯರಿಗೆ 1,000 ರೂಪಾಯಿ!

ಆದರೆ, ಈ ಸುದ್ದಿ ಸುಳ್ಳು ಎಂದು ಐಸಿಎಂಆರ್ ಹಿರಿಯ ಅಧಿಕಾರಿ ಡಿಜಿ ಫ್ರೋ. ಬಲರಾಮ್ ಭಾರ್ಗವ ಸ್ಪಷ್ಟಪಡಿಸಿದ್ದಾರೆ. ಐಸಿಎಂಆರ್ ಇಂತಹ ಯಾವುದೇ ಸಮುದಾಯದ ಬಗ್ಗೆ ಅಧ್ಯಯನ ಮಾಡುತ್ತಿಲ್ಲ ಎಂದು ಹೇಳಿದೆ.

ICMR Not Conducting Immunity Study Of Assamese Group

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ ಸಂದರ್ಭದಲ್ಲಿ ''ಕೊರೊನಾ ವೈರಸ್‌ಗೆ ಯಾವುದೇ ಮತ, ಧರ್ಮ, ಜಾತಿ, ಬಣ್ಣ, ಭಾಷೆ ಹಾಗೂ ಗಡಿ ಇರುವುದಿಲ್ಲ'' ಎಂದಿದ್ದರು. ಈ ಹೇಳಿಕೆಯನ್ನು ಈ ಸಮಯಕ್ಕೆ ಸ್ಮರಿಸಬಹುದು.

Fake:ಕೊವಿಡ್19 ರೋಗಿಗಳ ನಿಗಾ ಇಡಲು ಆರೋಗ್ಯ ಸೇತು Wristband?Fake:ಕೊವಿಡ್19 ರೋಗಿಗಳ ನಿಗಾ ಇಡಲು ಆರೋಗ್ಯ ಸೇತು Wristband?

ಅಂದ್ಹಾಗೆ, ಅಸ್ಸಾಂ ಸಮುದಾಯದ ಜನರು ಹೆಚ್ಚಿರುವ ಅಸ್ಸಾಂ ರಾಜ್ಯದಲ್ಲಿ ಈವರೆಗೂ 36 ಕೊವಿಡ್ ಪ್ರಕರಣಗಳು ದಾಖಲಾಗಿದೆ. 19 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.

English summary
Study on Immunity of Indigenous Assamese by ICMR as not a single case of COVID19. but, ICMR says 'No studies on this aspect at the moment'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X