ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರಕ್ಕೆ ಪ್ರಚೋದನೆ ಆರೋಪ: ಸುಗಂಧ ದ್ರವ್ಯ ಜಾಹೀರಾತಿಗೆ ನಿಷೇಧ

|
Google Oneindia Kannada News

ನವದೆಹಲಿ, ಜೂನ್ 4: ಸುಗಂಧ ದ್ರವ್ಯ ಬ್ಯ್ರಾಂಡ್ ಲೇಯರ್ ಅವರ ಹೊಸ ಬಾಡಿ ಸ್ಪ್ರೇ 'ಶಾಟ್‌' ಉತ್ಪನ್ನದ ಬಗ್ಗೆ ಪ್ರಸಾರ ಮಾಡುತ್ತಿರುವ ಜಾಹೀರಾತು ಆಕ್ರೋಶಕ್ಕೆ ಕಾರಣವಾಗಿದೆ. ವಿವಾದಾತ್ಮಕ ಜಾಹೀರಾತುಗಳನ್ನು ಅಮಾನತು ಮಾಡುವಂತೆ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯ ಶನಿವಾರ ಆದೇಶ ನೀಡಿದೆ.

ಲೇಯರ್ 'ಶಾಟ್‌'ನ ಹೊಸ ಜಾಹೀರಾತು ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಜಾಹೀರಾತು ನಿಯಮದ ಪ್ರಕಾರ ವಿಚಾರಣೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಪ್ರತಿಭಟನೆ: ಸುಮೈಯಾ ರಾಣಾ ಬಂಧನಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಪ್ರತಿಭಟನೆ: ಸುಮೈಯಾ ರಾಣಾ ಬಂಧನ

ವಿವಾದಾತ್ಮಕ ಜಾಹೀರಾತುಗಳನ್ನು ತೆಗೆದುಹಾಕಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಸೂಚನೆ ನೀಡಿದೆ. ಇತ್ತೀಚೆಗೆ ಲೇಯರ್ ಶಾಟ್ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿತ್ತು. ಅವುಗಳಲ್ಲಿ ಎರಡು ಜಾಹೀರಾತುಗಳಿಗೆ ಆಕ್ಷೇಪ ವ್ಯಕ್ತವಾಗಿದೆ. ಫೇಟ್‌ಬುಕ್ ಮತ್ತು ಟ್ವಿಟರ್‍‌ ಬಳಕೆದಾರರು ಈ ಎರಡು ಜಾಹೀರಾತುಗಳಲ್ಲಿ ಅಸಹ್ಯಕರ ಸಂಭಾಷಣೆಗಳಿವೆ ಎಂದು ಟೀಕೆ ಮಾಡಿದ್ದಾರೆ.

I&B Ministry orders social media not telecast Layerr Shot deo ads

"ಜಾಹೀರಾತು 'ಎಎಸ್‌ಸಿಐ' ಕೋಡ್‌ನ ಗಂಭೀರ ಉಲ್ಲಂಘನೆಯಾಗಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ದೂರು ಬರುತ್ತಿದ್ದಂತೆ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಜಾಹೀರಾತನ್ನು ಅಮಾನತುಗೊಳಿಸುವಂತೆ ಜಾಹೀರಾತುದಾರರಿಗೆ ಸೂಚನೆ ನೀಡಿದ್ದೇವೆ, ತನಿಖೆ ಮಾಡುತ್ತೇವೆ" ಎಂದು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ಹೇಳಿದೆ.

ಅತ್ಯಾಚಾರಕ್ಕೆ ಪ್ರಚೋದಿಸುವ ಸಂಭಾಷಣೆ

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅರಿತುಕೊಂಡು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದು ಅಶ್ಲೀಲ ಮತ್ತು ಅತ್ಯಾಚಾರಕ್ಕೆ ಪ್ರಚೋದನೆ ನೀಡುವ ಜಾಹೀರಾತುಗಳನ್ನು ತೆಗೆದುಹಾಕುವಂತೆ ಕೇಳಿಕೊಂಡಿದ್ದಾರೆ.

ಟ್ವಿಟರ್ ಬಳಕೆದಾರರ ಪ್ರಕಾರ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಈ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿದೆ. ಎರಡೂ ಜಾಹೀರಾತುಗಳು ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಎರಡೂ ಜಾಹೀರಾತುಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಕಿರುಕುಳಕ್ಕೆ ಒಳಗಾಗುವಂತ ಕಾಮೆಂಟ್‌ಗಳನ್ನು ಮಾಡುತ್ತಾರೆ, ಮಹಿಳೆಯರು ಇದರಿಂದ ಆಘಾತಕ್ಕೆ ಒಳಗಾಗುವ ಹಾಗೆ ಜಾಹೀರಾತಿನಲ್ಲಿ ತೋರಿಸಲಾಗಿದೆ. ನಂತರ ಇದು ಲೇಯರ್ ಶಾಟ್ ಉತ್ಪನ್ನಕ್ಕೆ ಸಂಬಂಧಪಟ್ಟ ಜಾಹೀರಾತು ಎನ್ನುವುದು ಬಹಿರಂಗವಾಗುತ್ತದೆ. ಎರಡೂ ಜಾಹೀರಾತಿನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

I&B Ministry orders social media not telecast Layerr Shot deo ads

ಛೀಮಾರಿ ಹಾಕಿದ್ದ ಹೈಕೋರ್ಟ್

ಟಿವಿಗಳಲ್ಲಿ ಪ್ರಸಾರವಾಗುವ ಕಾಂಡೋಮ್ ಜಾಹೀರಾತುಗಳ ಬಗ್ಗೆ ಮದ್ರಾಸ್ ಹೈಕೋರ್ಟ್ ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು. ಈ ರೀತಿಯ ಜಾಹೀರಾತುಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಲ್ಲದೆ, ಈ ರೀತಿಯ ಜಾಹೀರಾತುಗಳು ಅಶ್ಲೀಲ ಚಿತ್ರಕ್ಕೆ ಸಮ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ಬಹುತೇಕ ಎಲ್ಲಾ ವಾಹಿನಿಗಳು ರಾತ್ರಿ 10 ಗಂಟೆಯ ನಂತರ ಕಾಂಡೋಮ್ ಮಾರಾಟ ಬೆಂಬಲಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುತ್ತವೆ. ಕೆಲ ಜಾಹೀರಾತುಗಳು ನೀಲಿ ಚಿತ್ರಗಳಂತೆ ಕಾಣುತ್ತವೆ ಎಂದು ಹೈಕೋರ್ಟ್‌ ಛೀಮಾರಿ ಹಾಕಿತ್ತು.

English summary
Advertisement about the Layer's New brand body spray 'shot' product, has caused outrage. The Information and Broadcasting (I&B) Ministry on Saturday ordered the suspension of controversial ads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X